41 ಅನಂತರ ಎಲೀಯನು ಅಹಾಬನಿಗೆ, "ನೀನು ಹೋಗಿ ತಿಂದು, ಕುಡಿ. ಏಕೆಂದರೆ ದೊಡ್ಡಮಳೆಯ ಶಬ್ದವು ಕೇಳಿಸುತ್ತದೆ," ಎಂದನು. 42 ಅಹಾಬನು ತಿಂದು, ಕುಡಿಯುವುದಕ್ಕೆ ಹೋದನು. ಎಲೀಯನು ಕರ್ಮೆಲಿನ ಶಿಖರವನ್ನು ಏರಿ, ನೆಲದ ಮೇಲೆ ಬಿದ್ದು, ತನ್ನ ಮೊಣಕಾಲಿನ ಮಧ್ಯೆ ತಲೆಯನ್ನಿಟ್ಟನು.
43 ತನ್ನ ಸೇವಕನಿಗೆ, "ನೀನು ಹೋಗಿ ಸಮುದ್ರದ ಕಡೆಗೆ ನೋಡು," ಎಂದನು.
ಅವನು ಹೋಗಿ ನೋಡಿ, "ಏನೂ ಇಲ್ಲ," ಎಂದನು.
ಅವನು, "ಏಳು ಸಾರಿ ತಿರುಗಿ ಹೋಗಿ ನೋಡು," ಎಂದನು.
44 ಏಳನೆಯ ಸಾರಿ ಇವನು ಹೋಗಿ ನೋಡಿದಾಗ, "ಇಗೋ, ಸಮುದ್ರದಿಂದ ಒಂದು ಮನುಷ್ಯನ ಅಂಗೈಯಷ್ಟು ಚಿಕ್ಕ ಮೇಘವು ಏಳುತ್ತಿದೆ," ಎಂದನು.
ಆಗ, "ನೀನು ಹೋಗಿ ಅಹಾಬನಿಗೆ ಬೇಗನೇ ರಥವನ್ನು ತೆಗೆದುಕೊಂಡು ಮಳೆಯು ನಿನ್ನನ್ನು ತಡೆಯದಂತೆ ಇಳಿದುಹೋಗೆಂದು ಹೇಳು," ಎಂದನು.
45 ಆಗ ಇದ್ದಕ್ಕಿದ್ದ ಹಾಗೆ ಆಕಾಶವು ಮೇಘಗಳಿಂದಲೂ, ಗಾಳಿಯಿಂದಲೂ ಕಪ್ಪಾಗಿ ದೊಡ್ಡಮಳೆಯು ಉಂಟಾಯಿತು. ಅಹಾಬನು ರಥದಲ್ಲಿ ಏರಿ ಇಜ್ರೆಯೇಲ್ ಪಟ್ಟಣಕ್ಕೆ ಹೋದನು.