3 ನೀವು ಪವಿತ್ರರಾಗಿ ಇರಬೇಕೆಂಬುದೇ ದೇವರ ಚಿತ್ತವಾಗಿದೆ. ಆದ್ದರಿಂದ ನೀವು ಕಾಮಾತಿರೇಕಕ್ಕೆ ದೂರವಾಗಿರಬೇಕು. 4 ನಿಮ್ಮಲ್ಲಿ ಪ್ರತಿಯೊಬ್ಬನೂ ಪವಿತ್ರತೆಯಿಂದಲೂ ಘನತೆಯಿಂದಲೂ ತನ್ನ ಸ್ವಂತ ದೇಹವನ್ನು4:4 ಅಥವಾ ತನ್ನ ಸ್ವಂತ ಪತ್ನಿಯನ್ನು ಕಾಪಾಡಿಕೊಳ್ಳಲು ತಿಳಿಯಬೇಕು. 5 ನೀವು ದೇವರನ್ನರಿಯದ ಯೆಹೂದ್ಯರಲ್ಲದವರಂತೆ ಕಾಮಾಭಿಲಾಷೆಗೆ ಒಳಪಡಬಾರದು. 6 ಈ ವಿಷಯದಲ್ಲಿ ಯಾರೂ ಅತಿಕ್ರಮಿಸಿ ತಮ್ಮ ಸಹೋದರ ಸಹೋದರಿಯನ್ನು ವಂಚಿಸದಿರಲಿ. ಏಕೆಂದರೆ ನಾವು ಮೊದಲು ತಿಳಿಸಿ ನಿಮಗೆ ಗಂಭೀರವಾಗಿ ಎಚ್ಚರಿಸಿದಂತೆ ಈ ಪಾಪಗಳ ವಿಷಯದಲ್ಲಿ ಕರ್ತ ಯೇಸುವು ಮುಯ್ಯಿಗೆ ಮುಯ್ಯಿ ತೀರಿಸುವವರಾಗಿದ್ದಾರೆ. 7 ದೇವರು ನಮ್ಮನ್ನು ಅಶುದ್ಧತೆಗೆ ಕರೆಯದೆ ಪವಿತ್ರ ಜೀವನವನ್ನು ಜೀವಿಸಲು ಕರೆದಿದ್ದಾರೆ.
Publicidade