9 ಅದಕ್ಕೆ ಕರ್ತ ಯೇಸು, "ನನ್ನ ಕೃಪೆಯೇ ನಿನಗೆ ಸಾಕು. ನನ್ನ ಶಕ್ತಿಯು ಬಲಹೀನತೆಯಲ್ಲಿಯೇ ಪರಿಪೂರ್ಣವಾಗುವುದು," ಎಂದು ನನಗೆ ಹೇಳಿದರು. ಆದ್ದರಿಂದ ಕ್ರಿಸ್ತ ಯೇಸುವಿನ ಶಕ್ತಿಯು ನನ್ನ ಮೇಲೆ ನೆಲೆಯಾಗಿರಬೇಕೆಂದು, ಬಹಳ ಆನಂದದಿಂದ ನನ್ನ ಬಲಹೀನತೆಯಲ್ಲಿಯೇ ಹೆಚ್ಚಳ ಪಡುವೆನು. 10 ಹೀಗಿರುವುದರಿಂದ ಕ್ರಿಸ್ತ ಯೇಸುವಿನ ನಿಮಿತ್ತ ನನಗೆ ಬಲಹೀನತೆಯೂ ತಿರಸ್ಕಾರವೂ ಕೊರತೆಯೂ ಹಿಂಸೆಯೂ ಇಕ್ಕಟ್ಟೂ ಸಂಭವಿಸಿದಾಗ ಹರ್ಷಿಸುತ್ತೇನೆ. ಏಕೆಂದರೆ, ಬಲಹೀನತೆಯಲ್ಲಿಯೇ ನಾನು ಶಕ್ತನಾಗಿರುವೆನು.
Publicidade
Publicidade