14 ಕ್ರಿಸ್ತ ಯೇಸುವಿನಲ್ಲಿ ನಮ್ಮನ್ನು ಯಾವಾಗಲೂ ಜಯೋತ್ಸವದೊಡನೆ ಮೆರೆಸುತ್ತಾ, ಅವರ ವಿಷಯವಾದ ಜ್ಞಾನವೆಂಬ ಸುವಾಸನೆಯನ್ನು ನಮ್ಮ ಮೂಲಕ ಎಲ್ಲಾ ಸ್ಥಳಗಳಲ್ಲಿ ಪ್ರಸಾರಗೊಳಿಸುವ ದೇವರಿಗೆ ಕೃತಜ್ಞತೆಗಳು. 15 ರಕ್ಷಣಾ ಮಾರ್ಗದಲ್ಲಿರುವವರಿಗೂ ನಾಶದ ಮಾರ್ಗದಲ್ಲಿರುವವರಿಗೂ ನಾವು ದೇವರಿಗೆ ಕ್ರಿಸ್ತ ಯೇಸುವಿನ ಪರಿಮಳವಾಗಿದ್ದೇವೆ. 16 ಕೆಲವರಿಗೆ ನಾವು ಮರಣದ ವಾಸನೆಯಾಗಿದ್ದೇವೆ. ಇತರರಿಗೆ ಜೀವವನ್ನು ಹುಟ್ಟಿಸುವ ವಾಸನೆಯಾಗಿರುತ್ತೇವೆ. ಇಂಥ ಸೇವೆಗೆ ಸಮರ್ಥರು ಯಾರು? 17 ಎಷ್ಟೋ ಮಂದಿ ದೇವರ ವಾಕ್ಯವನ್ನು ಕಲಬೆರಕೆ ಮಾಡಿ, ಅದರಿಂದ ಹಣಗಳಿಸುತ್ತಾರೆ. ನಾವಾದರೋ ಹಾಗೆ ಮಾಡುವವರಲ್ಲ. ನಾವು ದೇವರಿಂದ ಕಳುಹಿಸಲಾದವರಾಗಿ ಕ್ರಿಸ್ತ ಯೇಸುವಿನಲ್ಲಿದ್ದುಕೊಂಡು ದೇವರ ಮುಂದೆ ಯಥಾರ್ಥವಾಗಿ ಮಾತನಾಡುತ್ತೇವೆ.
2 ಕೊರಿಂಥದವರಿಗೆ 2:14-17
Em outras traduções
- SII25 Bíblia Siddi
14 ಖರೆ ದೆವಾಕ್ ಧನ್ಯವಾದ್; ತೊ ಅಮ್ಕಾ ಕ್ರಿಸ್ತಾಚ್ಯಾ ಎಕ್ವಟ್ಟಾ ವೈನಾ ಅಪ್ನಾಚ್ಯಾ ಜಿಕೆಚ್ಯಾ ಮೆರ್ವನ್ಗಿತ್ ಚಾಲ್ವುತಾ ಅನಿ ಅಮ್ಚ್ಯಾ ವೈನಾ ಕ್ರಿಸ್ತಾಚ್ಯಾ ವಳ್ಕಿಚಿ ಬರಿ ವಾಸ್ ಸಗ್ಳ್ಯಾಕ್ಡೆ ಫರ್ಗಟಿ ಸಾರ್ಕೆ ಕರ್‍ತಾ. 15 ಸುಟ್ಕೆಚ್ಯಾ ವಾಟೆರ್ ಹೊತ್ತ್ಯಾಕ್ನಿ ಅನಿ ತಸೆಚ್ ನಾಸಾಚ್ಯಾ ವಾಟೆರ್ ಚಲ್ತಲ್ಯಾಕ್ನಿಬಿ, ದೆವಾಚ್ಯಾ ಇದ್ರಾಕ್ ಅಮಿ ಕ್ರಿಸ್ತಾಚ್ಯಾ ವೈನಾ ಭೆಟ್ವಲ್ಲಿ ಧುಪಾಚಿ ಬರಿ ವಾಸ್ ಹೊವ್ನ್ ಹಾಂವ್. 16 ನಾಸಾಕ್ ಜಾತಲ್ಯಾಕ್ನಿ ಅಮಿ ಮರಾನ್ ಹಾನ್ತಲಿ ಬುರ್ಶಿ ವಾಸ್ ಹೊವ್ನಗೆತ್ ಜಾತಾವ್, ಖರೆ ಜಿವ್ ರಾಕ್ತಲ್ಯಾಕ್ನಿ ಜಿವ್ ದಿತಲಿ ಬರಿ ವಾಸ್ ದಿವ್ನಗೆತ್ ಜಾತಾವ್. 17 ಲೈ ಲೊಕಾ ಕರ್ತಾತ್ ತಶೆ ಅಮಿ ಕಾಯ್ ದೆವಾಚ್ಯಾ ಗೊಸ್ಟಿಚೊ ಯಾಪಾರ್ ಧಂಧೊ ಕರಿನಾವ್. ದೆವಾನುಚ್ ಅಮ್ಕಾ ಎಚುನ್ ನೆಮಲ್ಲೆ ಹಾಯ್ ಅನಿ ತೆಂಚ್ಯಾ ಇದ್ರಾಕ್ ಕ್ರಿಸ್ತಾಚ್ಯಾ ಎಕ್ವಟ್ಟಾತ್ ಅಮಿ ಖರೆ ಅಸಲ್ಲೆಚ್ ಬೊಲ್ತಾಂವ್.
- IRVKAN Indian Revised Version (IRV) - Kannada - 2019
14 ಕ್ರಿಸ್ತನ ಮುಖಾಂತರ ನಮ್ಮನ್ನು 2:14 ಕೊಲೊ 2:15ವಿಜಯೋತ್ಸವದತ್ತ ನಡೆಸುವ ಹಾಗೂ ನಮ್ಮ ಮೂಲಕವಾಗಿ ತನ್ನ ಜ್ಞಾನವೆಂಬ 2:14 ಎಫೆ 5:2, ಫಿಲಿ. 4:18ಸುವಾಸನೆಯನ್ನು ಎಲ್ಲಾ ಸ್ಥಳಗಳಲ್ಲಿ ಹರಡಿಸಿದ ದೇವರಿಗೆ ಸ್ತೋತ್ರವಾಗಲಿ. 15 ರಕ್ಷಣಾ ಮಾರ್ಗದಲ್ಲಿರುವವರಲ್ಲಿಯೂ ಮತ್ತು 2:15 2 ಕೊರಿ 4:3ನಾಶನದ ಮಾರ್ಗದಲ್ಲಿರುವವರಲ್ಲಿಯೂ ನಾವು ದೇವರಿಗೆ ಕ್ರಿಸ್ತನ ಪರಿಮಳವಾಗಿದ್ದೇವೆ. 16 2:16 ಲೂಕ 2:34, ಯೋಹಾ 9:39, 1 ಪೇತ್ರ. 2:7-8ನಾವು ವಿನಾಶಮಾರ್ಗದಲ್ಲಿರುವವರಿಗೆ ಮೃತ್ಯುಕಾರಕ ಗಂಧ; ರಕ್ಷಣಾಮಾರ್ಗದಲ್ಲಿರುವವರಿಗೆ ಸಜೀವದಾಯಕ ಸುಗಂಧ. 2:16 2 ಕೊರಿ 3:5-6ಇಂಥ ಕಾರ್ಯಗಳಿಗೆ ಯಾರು ಯೋಗ್ಯರು? 17 ಎಷ್ಟೋ ಮಂದಿ ದೇವರ ವಾಕ್ಯವನ್ನು ಕಲಬೆರಕೆ ಮಾಡಿ ವ್ಯಾಪಾರಮಾಡುತ್ತಾರೆ. ನಾವು ಹಾಗಲ್ಲ; ದೇವರಿಂದಲೇ ನಿಯೋಜಿತರಾಗಿ, ದೇವರ ಸಮಕ್ಷಮದಲ್ಲಿ, ಕ್ರಿಸ್ತ ಅನ್ಯೋನ್ಯತೆಯಲ್ಲಿ ನಾವು ಯಥಾರ್ಥವಾದುದನ್ನೇ ಉಪದೇಶಿಸುವವರು.
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.