Pular para o conteúdo
Publicidade

2 ಕೊರಿಂಥದವರಿಗೆ 6:14-17

OKCV Kannada Contemporary Version

ಅವಿಶ್ವಾಸಿಗಳ ಸಂಗಡ ಸೇರಬೇಡಿರಿ

14 ಕ್ರಿಸ್ತ ಯೇಸುವಿನಲ್ಲಿ ನಂಬಿಕೆ ಇಲ್ಲದವರೊಂದಿಗೆ ಸೇರಿ ಒಂದಾಗಿ ಪಾಲುಗಾರರಾಗಬೇಡಿರಿ. ನೀತಿಗೂ ಅನೀತಿಗೂ ಸಮಾನವೆಲ್ಲಿ? ಅಥವಾ ಬೆಳಕಿಗೂ ಕತ್ತಲೆಗೂ ಅನ್ಯೋನ್ಯತೆಯೇನು? 15 ಕ್ರಿಸ್ತ ಯೇಸುವಿಗೂ ಪಿಶಾಚನಿಗೂ6:15 ಗ್ರೀಕ್ ಭಾಷೆಯಲ್ಲಿ ಬೆಲಿಯಲ್ ಐಕ್ಯತೆಯೇನು? ಅಥವಾ ಕ್ರಿಸ್ತ ವಿಶ್ವಾಸಿಗೂ ಅವಿಶ್ವಾಸಿಗೂ ಹುದುವಾಗಿರುವುದೇನು? 16 ದೇವರ ಆಲಯಕ್ಕೂ ವಿಗ್ರಹಗಳಿಗೂ ಏನು ಒಪ್ಪಂದ? ನಾವು ಜೀವಿಸುವ ದೇವರ ಆಲಯವಾಗಿದ್ದೇವೆ. ದೇವರು ಹೀಗೆ ಹೇಳಿದ್ದಾರೆ:

"ನಾನು ಅವರೊಂದಿಗೆ ವಾಸಿಸುವೆನು,

ಅವರ ಮಧ್ಯದಲ್ಲಿ ತಿರುಗಾಡುವೆನು.

ನಾನು ಅವರಿಗೆ ದೇವರಾಗಿರುವೆನು

ಮತ್ತು ಅವರು ನನ್ನ ಜನರಾಗಿರುವರು."6:16 ಯಾಜಕ 26:12; ಯೆರೆ 32:38; ಯೆಹೆ 37:27

17 ಆದ್ದರಿಂದ,

"ಅವರ ನಡುವೆಯಿಂದ

ಹೊರಟುಬಂದು ಪ್ರತ್ಯೇಕವಾಗಿರಿ.

ಅಶುದ್ಧವಾದ ಯಾವುದನ್ನೂ ಮುಟ್ಟದಿರಿ,

ನಾನು ನಿಮ್ಮನ್ನು ಸ್ವೀಕರಿಸುವೆನು

ಎಂದು ಕರ್ತದೇವರು ಹೇಳುತ್ತಾರೆ."6:17 ಯೆಶಾಯ 52:11; ಯೆಹೆ 20:34,41

Em outras traduções

  1. SII25 Bíblia Siddi

    14 ತುಮ್ಚ್ಯಾ ಬಾಳ್ವಿಚ್ಯಾ ಜುವಾಕ್ ವಿಶ್ವಾಸಾತ್ ನಸಲ್ಲ್ಯಾಂಚ್ಯಾ ವಾಂಗ್ಡಾ ಖಾಂಜೊ ದಿವ್ನಕಾಶಿ, ಬರ್‍ಯಾನ್ ಅನಿ ಖೊಟ್ಯಾನ್ ಎಕ್ ಜೊತ್ ಹೊವ್ನ್ ಕಶೆ ಜಾವ್ಕ್ ಹೊತಾ? ಉಜ್ವೊಡಾನ್ ಅನಿ ಕಾಳ್ಕಾನ್ ವಾಂಗ್ಡಾ ಕಶೆ ಜಿವನ್ ಕರುಕ್ ಹೊತಾ? 15 ಕ್ರಿಸ್ತಾನ್ ಅನಿ ಮ್ಹಾರ್ವಾನ್ ಕಶೆ ಎಕಾಮೆಕಾ ವಾಂಗ್ಡಾ ರ್‍ಹಾವ್ಕ್ ತಯಾರ್ ಹೊವ್ಕ್ ಹೊತಾ? ವಿಶ್ವಾಸಿ ಲೊಕಾ ವಿಶ್ವಾಸ್ ನಸಲ್ಲ್ಯಾಂಚ್ಯಾ ವಾಂಗ್ಡಾ ಕಶೆ ಭಾಗ್ ಘೆವ್ಕ್ ಹೊತಾ? 16 ಸಾಂಗಾ ಮಾಕಾ ದೆವಾಚ್ಯಾ ಗುಡಿಚ್ಯಾ ವಾಂಗ್ಡಾ ದುಸ್ರ್ಯಾ ಮುರ್ತಿಯಾಕ್ನಿ ಗೌರವ್ ದಿವ್ಕ್ ಹೊತಾ ಕಾಯ್? ಅಮಿಚ್ ಝಿತ್ತ್ಯಾ ದೆವಾಚೆ ಗುಡಿ! ಹೆಚ್ಯಾ ವಿಶಯಾತ್ ದೆವಾನುಚ್ ಸಾಂಗಲ್ಲೆ ಹಾಯ್,

    "ಮಿಂಯಾ ಮಾಜ್ಯಾ ಲೊಕಾಂಚ್ಯಾ ಮದ್ದಿ ರಾತಾ,

    ತೆಂಚ್ಯಾ ಭುತ್ತುರ್ ಮಿಯಾ ವಸ್ತಿ ಕರ್‍ತಾ,

    ಮಿಯಾ ತೆಂಚೊ ದೆವ್ ಹೊತಾ,

    ತೆನಿ ಮಾಜಿ ಲೊಕಾ ಹೊತ್ಯಾತ್."

    17 ತಸೆ ಹೊವ್ನ್ ಧನಿ ಮನ್ತಾ,

    "ತೆಚೆಸಾಟ್ನಿ ತೆಂಚ್ಯಾ ಮದ್ನಾ ತುಮಿ ಭಾಯ್ರ್ ಯೆವಾ,

    ತೆಂಚೆಕ್ನಾ ತುಮ್ಕಾಚ್ ಎಗ್ಳೆ ಕರಾ ಮನ್ತಾ ಸರ್ವೆಸ್ವರ್,

    ಜೆ ಕಾಮ್ ನಿತಳ್ ನಾ ತೆಕಾ ಹಾತ್ ಲಾವುನಕಾಶಿ,

    ತನ್ನಾ ಮಿಯಾ ತುಮ್ಕಾ ಘೆತಾ.

  2. IRVKAN Indian Revised Version (IRV) - Kannada - 2019

    14 ನೀವು ಕ್ರಿಸ್ತ ನಂಬಿಕೆಯಿಲ್ಲದವರೊಂದಿಗೆ ಸೇರಿ 6:14 ಧರ್ಮೋ 7:3; ಯೋಹಾ 23:12; ಎಜ್ರ. 9:2; ನೆಹೆ 13:25ಇಜ್ಜೋಡಿಯಾಗಬೇಡಿರಿ. ಧರ್ಮಕ್ಕೂ, 6:14 ಎಫೆ 5:7,11; 1 ಯೋಹಾ 1:6ಅಧರ್ಮಕ್ಕೂ ಸಹವಾಸವೇನು? 15 6:15 ಅ. ಕೃ. 26:18ಬೆಳಕಿಗೂ, ಕತ್ತಲೆಗೂ ಅನ್ಯೋನ್ಯತೆಯೇನು? 6:15 1 ಕೊರಿ 10:21ಕ್ರಿಸ್ತನಿಗೂ ಸೈತಾನನಿಗೂ ಒಪ್ಪಂದವೇನು? ವಿಶ್ವಾಸಿಗೂ ಅವಿಶ್ವಾಸಿಗೂ ಪಾಲುಗಾರಿಕೆಯೇನು? 16 ದೇವ ಮಂದಿರಕ್ಕೂ, ವಿಗ್ರಹಗಳಿಗೂ ಒಪ್ಪಿಗೆಯೇನು? 6:16 ಎಫೆ 2:22; 1 ಕೊರಿ 3:16ನಾವು ದೇವರೇ ಹೇಳಿರುವಂತೆ ಜೀವಸ್ವರೂಪನಾದ ದೇವರ ಮಂದಿರವಾಗಿದ್ದೇವಲ್ಲಾ, 6:16 ಯಾಜ 26:11,12; ವಿಮೋ 29:45; ಪ್ರಕ 2:1; 21:3"ನಾನು ಅವರಲ್ಲಿ ವಾಸಮಾಡುವೆನು, ಅವರ ನಡುವೆಯೇ ನಾ ತಿರುಗಾಡುವೆನು 6:16 ವಿಮೋ 6:7; ಯೆರೆ 31:33; ಯೆಹೆ. 11:20; ಜೆಕ. 8:8 ಅವರಿಗೆ ನಾನೇ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು" ಎಂದು ಹೇಳಿದ್ದಾನೆ. 17 ಆದ್ದರಿಂದ, 6:17 ಯೆಶಾ 52:11"ಅನ್ಯಜನರನ್ನು ಬಿಟ್ಟು ಹೊರಬನ್ನಿರಿ ಅವರಿಂದ ಬೇರ್ಪಟ್ಟು ಬಾಳಿರಿ ಮಲಿನವಾದುದನ್ನು ಮುಟ್ಟದಿರಿ" ಎಂದು ಕರ್ತನು ಹೇಳುತ್ತಾನೆ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.