15 ಆಗ ಯಹಜೀಯೇಲನು, "ಯೆಹೂದದ ಸಮಸ್ತರೇ, ಯೆರೂಸಲೇಮಿನ ನಿವಾಸಿಗಳೇ, ಅರಸನಾದ ಯೆಹೋಷಾಫಾಟನೇ, ಕೇಳಿರಿ. ಯೆಹೋವ ದೇವರು ನಿಮಗೆ ಹೀಗೆ ಹೇಳುತ್ತಾರೆ: ಈ ಮಹಾ ಗುಂಪಿನ ನಿಮಿತ್ತ ನೀವು ಭಯಪಡಬೇಡಿರಿ, ಹೆದರಬೇಡಿರಿ. ಏಕೆಂದರೆ ಯುದ್ಧವು ನಿಮ್ಮದಲ್ಲ, ದೇವರದೇ. 16 ನಾಳೆ ಬೆಳಿಗ್ಗೆ ನೀವು ಅವರ ವಿರೋಧವಾಗಿ ಹೋಗಿರಿ. ಅವರು ಚೀಚ್ ಎಂಬ ಕಣಿವೆಯಿಂದ ಬರುತ್ತಾರೆ. ಯೆರೂಯೇಲ್ ಮರುಭೂಮಿಯ ಮುಂಭಾಗದಲ್ಲಿರುವ ಹಳ್ಳದ ಅಂತ್ಯದಲ್ಲಿ ಅವರನ್ನು ಕಂಡುಕೊಳ್ಳುವಿರಿ. 17 ಇದರಲ್ಲಿ ನೀವು ಯುದ್ಧಮಾಡಲು ಅವಶ್ಯವಲ್ಲ. ನೀವು ನೆಲೆಯಾಗಿ ನಿಂತುಕೊಂಡು, ಯೆಹೋವ ದೇವರು ನಿಮಗೆ ಕೊಡುವ ಬಿಡುಗಡೆಯನ್ನು ನೋಡಿರಿ. ಯೆಹೂದದವರೇ, ಯೆರೂಸಲೇಮಿನವರೇ, ಭಯಪಡಬೇಡಿರಿ, ಹೆದರಬೇಡಿರಿ. ಮೂರನೇ ದಿವಸ ಅವರೆದುರಿಗೆ ಹೊರಟು ಹೋಗಿರಿ. ಯೆಹೋವ ದೇವರು ನಿಮ್ಮ ಸಂಗಡ ಇದ್ದಾರೆ," ಎಂದನು.
Publicidade
2 ಪೂರ್ವಕಾಲ ವೃತ್ತಾಂತ 20
Estes versículos te tocaram? Ore agora!
+581 estão orando agora.
Junte-se à corrente de oração.