17 "ದೇವರು ಹೇಳುವುದೇನೆಂದರೆ: ‘ಅಂತ್ಯ ದಿನಗಳಲ್ಲಿ
ನನ್ನ ಆತ್ಮವನ್ನು ಎಲ್ಲಾ ಮನುಷ್ಯರ ಮೇಲೆ ಸುರಿಸುವೆನು,
ನಿಮ್ಮ ಗಂಡು ಹೆಣ್ಣುಮಕ್ಕಳು ಪ್ರವಾದಿಸುವರು,
ನಿಮ್ಮ ಯುವಜನರಿಗೆ ದರ್ಶನಗಳು ಕಾಣುವವು,
ನಿಮ್ಮ ಹಿರಿಯರಿಗೆ ಕನಸುಗಳು ಬೀಳುವುವು.
18 ಆ ದಿನಗಳಲ್ಲಿ, ನನ್ನ ದಾಸ ದಾಸಿಯರ ಮೇಲೆ,
ನನ್ನ ಆತ್ಮವನ್ನು ಸುರಿಸುವೆನು,
ಅವರು ಪ್ರವಾದಿಸುವರು.