18 ಅಪೊಸ್ತಲರು ತಮ್ಮ ಕೈಗಳನ್ನಿಡಲು ಪವಿತ್ರಾತ್ಮ ದೊರೆತದ್ದನ್ನು ಕಂಡ ಸೀಮೋನನು, ಅವರಿಗೆ ಹಣವನ್ನು ಕೊಟ್ಟು, 19 "ನಾನು ಯಾರ ಮೇಲೆ ಕೈಗಳನ್ನಿಡುವೆನೋ ಅವರೂ ಪವಿತ್ರಾತ್ಮ ವರವನ್ನು ಪಡೆದುಕೊಳ್ಳುವಂತೆ ಈ ಶಕ್ತಿಯನ್ನು ಕೊಡಬೇಕು," ಎಂದು ಕೇಳಿದನು.
20 ಅದಕ್ಕೆ ಪೇತ್ರನು, "ದೇವರ ವರವನ್ನು ಹಣಕೊಟ್ಟು ಕೊಂಡುಕೊಳ್ಳಬಹುದೆಂದು ನೀನು ಭಾವಿಸಿದ್ದರಿಂದ ನೀನು ನಿನ್ನ ಹಣದೊಂದಿಗೆ ನಾಶವಾಗಿಹೋಗು!