36 ಮಾರ್ಗದಲ್ಲಿ ಅವರು ಮುಂದೆ ಪ್ರಯಾಣ ಮಾಡುತ್ತಿದ್ದಾಗ, ನೀರಿದ್ದ ಸ್ಥಳಕ್ಕೆ ಬಂದರು. ಆಗ ಕಂಚುಕಿ, "ಇಗೋ ಇಲ್ಲಿ ನೀರಿದೆ. ನನಗೆ ಏಕೆ ದೀಕ್ಷಾಸ್ನಾನ ಕೊಡಬಾರದು?" ಎಂದನು.
37 "ನೀನು ಪೂರ್ಣಹೃದಯದಿಂದ ನಂಬಿದರೆ ನಿನಗೆ ದೀಕ್ಷಾಸ್ನಾನವಾಗಬಹುದು," ಎಂದು ಫಿಲಿಪ್ಪನು ಹೇಳಿದನು.
"ಕ್ರಿಸ್ತ ಯೇಸುವೇ ದೇವಪುತ್ರರು ಎಂದು ನಾನು ನಂಬುತ್ತೇನೆ," ಎಂದು ಕಂಚುಕಿಯು ಪ್ರಕಟಿಸಿದನು. 8:37 ಕೆಲವು ಮೂಲ ಪ್ರತಿಗಳಲ್ಲಿ ಈ ವಾಕ್ಯ ಸೇರ್ಪಡೆಯಾಗಿರುವುದಿಲ್ಲ. 38 ರಥವನ್ನು ನಿಲ್ಲಿಸಲು ಅಪ್ಪಣೆಕೊಟ್ಟ ನಂತರ ಫಿಲಿಪ್ಪನು ಮತ್ತು ಕಂಚುಕಿ ಇಬ್ಬರೂ ನೀರೊಳಗೆ ಹೋದರು. ಫಿಲಿಪ್ಪನು ಅವನಿಗೆ ದೀಕ್ಷಾಸ್ನಾನ ಮಾಡಿಸಿದನು.