Pular para o conteúdo
Publicidade

ದಾನಿಯೇಲ 6:6-9

OKCV Kannada Contemporary Version

6 ಆಗ ಉಪರಾಜರೂ, ದೇಶಾಧಿಪತಿಯೂ ಅರಸನ ಬಳಿಯಲ್ಲಿ ಕೂಡಿಬಂದು, "ಅರಸನಾದ ದಾರ್ಯಾವೆಷನೇ, ನಿರಂತರವಾಗಿ ಬಾಳು. 7 ರಾಜ್ಯದ ಎಲ್ಲಾ ದೇಶಾಧಿಪತಿಗಳೂ, ರಾಜ್ಯಪಾಲರೂ, ನಾಯಕರೂ, ಉಪರಾಜರೂ, ಆಲೋಚನೆಗಾರರೂ ಒಟ್ಟುಗೂಡಿ ಆಲೋಚಿಸಿದ್ದೇನೆಂದರೆ ಅರಸನೇ, ಯಾರಾದರೂ ಮೂವತ್ತು ದಿವಸಗಳವರೆಗೂ ನಿನ್ನನ್ನು ಬಿಟ್ಟು ಬೇರೆ ಯಾವ ದೇವರಿಗಾಗಲಿ, ಮನುಷ್ಯರಿಗಾಗಲಿ ಪ್ರಾರ್ಥನೆ ಮಾಡಿದ್ದಾದರೆ ಅಂಥವರು ಸಿಂಹಗಳ ಗವಿಗೆ ಹಾಕಲಾಗುವುದು ಎಂಬ ರಾಜಾಜ್ಞೆಯನ್ನು ವಿಧಿಸಿ, ಸ್ಥಿರ ಕಟ್ಟಳೆಯನ್ನು ಕೊಡತಕ್ಕದ್ದು. 8 ರಾಜನೇ, ಈಗ ನೀನು ಈ ನಿಬಂಧನೆಯನ್ನು ವಿಧಿಸಿ, ಇದು ಬದಲಾಗದ ಮೇದ್ಯರ ಮತ್ತು ಪಾರಸಿಯರ ನಿಯಮಗಳ ಪ್ರಕಾರ ಇದು ರದ್ದಾಗದಂತೆ ನಿರ್ಣಯವನ್ನು ರೂಪಿಸಿ, ಶಾಸನಕ್ಕೆ ರುಜುಹಾಕು," ಎಂದು ವಿನಂತಿಸಿದರು. 9 ಆದಕಾರಣ ದಾರ್ಯಾವೆಷನು ಆ ಬರಹಕ್ಕೂ, ನಿರ್ಣಯಕ್ಕೂ ರುಜು ಹಾಕಿದನು.

Em outras traduções

  1. SII25 Bíblia Siddi

    6 ಮುಖಂಡಾ ಅನಿ ದೆಶಾಧಿಪತಿಯಾ ಗೊಳಾ ಹೊವ್ನ್ ರಾಜಾಚ್ಯಾ ಇದ್ರಾಕ್ ಯೆವ್ನ್ ರಾಜಾ ದಾರಿಯಾಸ್ ಸದಾ ಝಿತ್ತೊ ಹೊವ್ನ್ ರಾ. 7 ಜೆ ಕೊನ್ ತರ್ ತಿನ್ ದಿಸ್ ರಾಜಾ ತುಕಾ ಸೊಡುನ್ ದುಸ್ರ್ಯಾ ದೆವಾಕ್ ಹೊಂವ್ದಿತ್ ನಾತರ್ ಮಾನ್ಸಾಕ್ ಹೊಂವ್ದಿತ್ ಮಾಗ್ನಿ ಕರ್ಲ್ಯಾರ್, ತ್ಯಾ ಮಾನ್ಸಾಸಾಕ್ ಸಿಂವಾಚ್ಯಾ ಗವಿತ್ ಘಾಲುಚೆ ಮನ್ತಲೊ ಖಡಕ್ ನೆಮ್ ರಾಜಾಚ್ಯಾ ಹುಕುಮಾ ಸಾರ್ಕೊ ತಿಯಾ ದಿವ್ಚೊ ಮನುನ್ ಸಗ್ಳ್ಯಾ ಮುಖಂಡಾನಿ, ಅಧಿಕಾರಿಯಾ, ಮಂತ್ರಿಯಾಂಚ್ಯಾ, ಅನಿ ದೆಶಾದಿಪತಿಯಾನಿ ಯೆವ್ಜನ್ ಕರ್ಲ್ಯಾನಿ. 8 ರಾಜಾ ಅತ್ತಾ ತಿಯಾ ಹ್ಯೊ ನೆಮ್ ಚಾಲ್ತಿಕ್ ಹಾನುನ್ ಹೆ ರದ್ದ್ ಕರಿನಾ ಸರ್ಕೆ ಮೆದಿಯಾಂಚ್ಯಾ ಅನಿ ಪಾರಶಿಯಾಂಚ್ಯಾ ನೆಮಾಚ್ಯಾ ಪ್ರಕಾರ್ ಹೊಯ್ ಸಾರ್ಕೆ ರುಜು ಕರ್ ಮನುನ್ ಸಾಂಗ್ತಾನಾ, 9 ತನ್ನಾ ದಾರಿಯಾಸ್ ರಾಜಾನ್ ಗುಂಡ್ಯಾನಿ ಲಿವಲ್ಲ್ಯಾ ನೆಮಾಕ್ನಿ ರುಜು ಘಾಟ್ಲ್ಯಾನ್.

  2. IRVKAN Indian Revised Version (IRV) - Kannada - 2019

    6 ಹೀಗೆ ಆ ಮುಖ್ಯಾಧಿಕಾರಿಗಳೂ, ದೇಶಾಧಿಪತಿಗಳೂ ರಾಜನ ಸಮ್ಮುಖದಲ್ಲಿ ನೆರೆದುಬಂದು ಅವನಿಗೆ, "ಅರಸನಾದ ದಾರ್ಯಾವೆಷನೇ, ಚಿರಂಜೀವಿಯಾಗಿರು! 7 ಯಾವನಾದರೂ ಮೂವತ್ತು ದಿನಗಳ ತನಕ ರಾಜನಾದ ನಿನ್ನ ಹೊರತು ಬೇರೆ ಯಾವ ದೇವರಿಗಾಗಲಿ, ಮನುಷ್ಯನಿಗಾಗಲಿ ವಿಜ್ಞಾಪನೆ ಮಾಡಿಕೊಂಡರೆ ಅವನನ್ನು ಸಿಂಹಗಳ ಗವಿಯಲ್ಲಿ ಹಾಕಲ್ಪಡಬೇಕು ಎಂಬ ಖಂಡಿತ ನಿಬಂಧನೆಯನ್ನು ರಾಜಾಜ್ಞೆಯ ರೂಪವಾಗಿ ವಿಧಿಸುವುದು ಒಳ್ಳೆಯದೆಂದು ರಾಜ್ಯದ ಸಕಲ ಮುಖ್ಯಾಧಿಕಾರಿ, ನಾಯಕ, ದೇಶಾಧಿಪತಿ, ಮಂತ್ರಿ, ಸಂಸ್ಥಾನಾಧ್ಯಕ್ಷರೂ ಆಲೋಚನೆ ಮಾಡಿಕೊಂಡಿದ್ದಾರೆ. 8 ರಾಜನೇ, ಈಗ ನೀನು ಈ ನಿಬಂಧನೆಯನ್ನು ವಿಧಿಸಿ, ಇದು ಮೇದ್ಯರ ಮತ್ತು ಪಾರಸಿಯರ ಧರ್ಮವಿಧಿಗಳಂತೆ ಎಂದಿಗೂ ರದ್ದಾಗದ ಧರ್ಮವಿಧಿಗಳ ಪ್ರಕಾರ ಬೇರೆಯಾಗದಂತೆ ಶಾಸನಕ್ಕೆ ಹಸ್ತಾಕ್ಷರ ಮಾಡು" ಎಂದು ಬಿನ್ನವಿಸಿದರು. 9 ಆದುದರಿಂದ ರಾಜನಾದ ದಾರ್ಯಾವೆಷನು ಆ ನಿಬಂಧನಶಾಸನಕ್ಕೆ ರುಜು ಹಾಕಿದನು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.