11 ಪರಸ್ಪರವಾಗಿ ಹಾಡುತ್ತಾ, ಕೃತಜ್ಞತಾಸ್ತುತಿ ಮಾಡುತ್ತಾ ಯೆಹೋವ ದೇವರನ್ನು ಕೀರ್ತಿಸಿದರು:
"ಯೆಹೋವ ದೇವರು ಒಳ್ಳೆಯವರು!
ಅವರ ಅಚಲ ಪ್ರೀತಿ ಇಸ್ರಾಯೇಲರ ಮೇಲೆ ಶಾಶ್ವತ!"
ಈ ಸ್ತುತಿ ಕೀರ್ತನೆ ಕೇಳಿಸಿದ ಕೂಡಲೆ, ಯೆಹೋವ ದೇವರ ಆಲಯಕ್ಕೆ ಅಸ್ತಿವಾರ ಹಾಕಲಾಯಿತೆಂದು ಜನರೆಲ್ಲರು ಉತ್ಸಾಹಧ್ವನಿಯಿಂದ ಆರ್ಭಟಿಸಿದರು.