Pular para o conteúdo
Publicidade

ಎಫೆಸದವರಿಗೆ 1:3-14

ಕ್ರಿಸ್ತನಿಂದ ಆತ್ಮಿಕ ಆಶೀರ್ವಾದಗಳು

3 ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ದೇವರೂ ತಂದೆಯೂ ಆಗಿರುವವರಿಗೆ ಸ್ತೋತ್ರ, ದೇವರು ಕ್ರಿಸ್ತನಲ್ಲಿ ಪರಲೋಕದ ಎಲ್ಲಾ ಆತ್ಮಿಕ ಆಶೀರ್ವಾದಗಳಿಂದ ನಮ್ಮನ್ನು ಆಶೀರ್ವದಿಸಿದ್ದಾರೆ. 4 ನಾವು ಪ್ರೀತಿಯಲ್ಲಿದ್ದು ಅವರ ಮುಂದೆ ಪರಿಶುದ್ಧರೂ ನಿರ್ದೋಷಿಗಳೂ ಆಗಿರಬೇಕೆಂದು ಅವರು ಲೋಕದ ಅಸ್ತಿವಾರಕ್ಕೆ ಮುಂಚೆ ನಮ್ಮನ್ನು ಕ್ರಿಸ್ತನಲ್ಲಿ ಆರಿಸಿಕೊಂಡರು. 5 ದೇವರು ತಮ್ಮ ಚಿತ್ತದ ಸಂತೋಷಕ್ಕನುಸಾರವಾಗಿ ಕ್ರಿಸ್ತ ಯೇಸುವಿನ ಮೂಲಕ ನಮ್ಮನ್ನು ತಮಗೋಸ್ಕರ ತಮ್ಮ ಪುತ್ರರಾಗಿ ಸ್ವೀಕಾರ ಮಾಡುವಂತೆ ಮೊದಲೇ ನೇಮಿಸಿದರು. 6 ತಮ್ಮ ಕೃಪಾ ಮಹಿಮೆಯ ಸ್ತುತಿಗಾಗಿಯೇ ಇವುಗಳನ್ನು ದೇವರು ತಾವು ಪ್ರೀತಿಸುವ ಕ್ರಿಸ್ತನಲ್ಲಿ ನಮಗೆ ಉಚಿತವಾಗಿ ದಯಪಾಲಿಸಿದ್ದಾರೆ. 7 ದೇವರ ಕೃಪಾ ಐಶ್ವರ್ಯಕ್ಕೆ ಅನುಸಾರವಾಗಿ ಕ್ರಿಸ್ತನಲ್ಲಿ ನಮಗೆ ಅವರ ರಕ್ತದ ಮೂಲಕ ಪಾಪಗಳ ಕ್ಷಮಾಪಣೆಯಾಗಿ ವಿಮೋಚನೆಯಾಯಿತು. 8 ದೇವರು ಆ ಕೃಪೆಯನ್ನು ನಮ್ಮಲ್ಲಿ ಸಮೃದ್ಧಿಯಾಗಿ ಸುರಿಸಿದ್ದಾರೆ. ಎಲ್ಲಾ ಜ್ಞಾನ ವಿವೇಕಗಳೊಂದಿಗೆ 9 ದೇವರು ಕ್ರಿಸ್ತನಲ್ಲಿ ಉದ್ದೇಶಮಾಡಿಕೊಂಡ ತಮ್ಮ ಚಿತ್ತದ ರಹಸ್ಯವನ್ನು ಸಂತೋಷದಿಂದ ನಮಗೆ ಪ್ರಕಟಿಸಿದರು, 10 ಆ ರಹಸ್ಯವೋ ಭೂಪರಲೋಕಗಳಲ್ಲಿರುವ ಸಮಸ್ತವನ್ನೂ ಕಾಲವು ಪರಿಪೂರ್ಣಗೊಂಡಾಗ ಕ್ರಿಸ್ತನಲ್ಲಿ ಒಂದುಗೂಡಿಸುವುದಾಗಿದೆ.

11 ದೇವರ ಚಿತ್ತಾನುಸಾರವಾಗಿ ಎಲ್ಲಾ ಕಾರ್ಯಗಳನ್ನು ನಡೆಸುವ ಅವರ ಉದ್ದೇಶದ ಪ್ರಕಾರ ಕ್ರಿಸ್ತನಲ್ಲಿ ನಮ್ಮನ್ನು ಮೊದಲೇ ಆರಿಸಿಕೊಂಡರು. 12 ಇದರಿಂದ ಕ್ರಿಸ್ತನಲ್ಲಿ ಮೊದಲು ನಿರೀಕ್ಷೆಯುಳ್ಳವರಾದ ನಾವು ಅವರ ಮಹಿಮೆಯ ಸ್ತುತಿಯಾಗಿರುವಂತೆ ನೇಮಿಸಿದರು. 13 ನೀವು ಸಹ ನಿಮ್ಮ ರಕ್ಷಣೆಯ ಸುವಾರ್ತೆಯ ಸತ್ಯವಾಕ್ಯವನ್ನು ಕೇಳಿದ ಮೇಲೆ ಕ್ರಿಸ್ತನಲ್ಲಿ ನಂಬಿಕೆಯಿಟ್ಟು ವಾಗ್ದಾನದ ಪವಿತ್ರಾತ್ಮರಿಂದ ಮುದ್ರೆಹೊಂದಿದ್ದೀರಿ. 14 ದೇವರಿಗೆ ಸೇರಿದವರಾದ ನಾವು ವಿಮೋಚನೆಯಾಗುವ ತನಕ ನಮ್ಮ ಸ್ವರ್ಗೀಯ ವಾರಸುತನವನ್ನು ಹೊಂದುವೆವು ಎಂಬುವುದಕ್ಕೆ ಈ ಪವಿತ್ರಾತ್ಮ ದೇವರೇ ನಮಗೆ ಹೊಣೆಯಾಗಿದ್ದಾರೆ. ದೇವರ ಮಹಿಮೆಯ ನಿಮಿತ್ಯವಾಗಿ ನಾವು ಅವರನ್ನು ಸ್ತುತಿಸೋಣ.

Estes versículos te tocaram? Ore agora!

+581 estão orando agora.

Junte-se à corrente de oração.