Pular para o conteúdo
Publicidade

ಎಫೆಸದವರಿಗೆ 1:3-6

OKCV Kannada Contemporary Version

ಕ್ರಿಸ್ತನಿಂದ ಆತ್ಮಿಕ ಆಶೀರ್ವಾದಗಳು

3 ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ದೇವರೂ ತಂದೆಯೂ ಆಗಿರುವವರಿಗೆ ಸ್ತೋತ್ರ, ದೇವರು ಕ್ರಿಸ್ತನಲ್ಲಿ ಪರಲೋಕದ ಎಲ್ಲಾ ಆತ್ಮಿಕ ಆಶೀರ್ವಾದಗಳಿಂದ ನಮ್ಮನ್ನು ಆಶೀರ್ವದಿಸಿದ್ದಾರೆ. 4 ನಾವು ಪ್ರೀತಿಯಲ್ಲಿದ್ದು ಅವರ ಮುಂದೆ ಪರಿಶುದ್ಧರೂ ನಿರ್ದೋಷಿಗಳೂ ಆಗಿರಬೇಕೆಂದು ಅವರು ಲೋಕದ ಅಸ್ತಿವಾರಕ್ಕೆ ಮುಂಚೆ ನಮ್ಮನ್ನು ಕ್ರಿಸ್ತನಲ್ಲಿ ಆರಿಸಿಕೊಂಡರು. 5 ದೇವರು ತಮ್ಮ ಚಿತ್ತದ ಸಂತೋಷಕ್ಕನುಸಾರವಾಗಿ ಕ್ರಿಸ್ತ ಯೇಸುವಿನ ಮೂಲಕ ನಮ್ಮನ್ನು ತಮಗೋಸ್ಕರ ತಮ್ಮ ಪುತ್ರರಾಗಿ ಸ್ವೀಕಾರ ಮಾಡುವಂತೆ ಮೊದಲೇ ನೇಮಿಸಿದರು. 6 ತಮ್ಮ ಕೃಪಾ ಮಹಿಮೆಯ ಸ್ತುತಿಗಾಗಿಯೇ ಇವುಗಳನ್ನು ದೇವರು ತಾವು ಪ್ರೀತಿಸುವ ಕ್ರಿಸ್ತನಲ್ಲಿ ನಮಗೆ ಉಚಿತವಾಗಿ ದಯಪಾಲಿಸಿದ್ದಾರೆ.

Em outras traduções

  1. SII25 Bíblia Siddi

    3 ದೆವಾಕ್ ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾಚ್ಯಾ ಬಾಬಾಕ್, ಅಮಿ ಧನ್ಯವಾದ್ ದಿವ್ಕ್ ಪಾಜೆ! ಕಶ್ಯಾಕ್ ಮಟ್ಲ್ಯಾರ್, ಅಮ್ಕಾ ಕ್ರಿಸ್ತಾಚ್ಯಾ ಎಕ್ವಟ್ಟಾತ್ ಸರ್ಗಾತ್ ಸಗ್ಳಿ ಆತ್ಮಿಕ್ ಆಶಿರ್ವಾದಾ ತೆನಿ ದಿಲ್ಯಾನಾಯ್. 4 ಜಗ್ ರಚುನ್ ಹೊವ್ಚ್ಯಾ ಅದ್ದಿಚ್ ಅಮಿ ದೆವಾಚ್ಯಾ ಇದ್ರಾಕ್ ಪವಿತ್ರ್ ಅನಿ ಚುಕ್ ನಸಲ್ಲೆ ಹೊವ್ನ್ ರ್‍ಹಾವ್ಕ್ ಸಾಟ್ನಿ, ದೆವಾನ್ ಅಮ್ಕಾ ಕ್ರಿಸ್ತಾಚ್ಯಾ ಎಕ್ವಟ್ಟಾತ್ ತೆನಿ ಅದ್ದಿಚ್ ಅಮ್ಕಾ ಎಚುನ್ ಘೆಟ್ಲ್ಯಾನ್,

    ಕಶ್ಯಾಕ್ ಮಟ್ಲ್ಯಾರ್, ಹ್ಯೊ ತೆಚೊ ಪ್ರೆಮ್. 5 ಅಮ್ಚ್ಯಾ ವರ್ತಿ ಹೊತ್ತ್ಯಾ ಪ್ರೆಮಾ ಸಾಟ್ನಿ ಕ್ರಿಸ್ತ್ ಜೆಜು ವೈನಾ ಅಮ್ಕಾ ಅಪ್ಲಿ ಸ್ವತಾಚಿ ಪೊರಾ ಕರುನ್ ಘೆವ್ಕ್ ತೆನಿ ಅದ್ದಿಚ್ ನಿರ್ದಾರ್ ಕರಲ್ಯಾನ್, ತಿ ತೆಜಿ ಇಚ್ಚ್ಯಾ ಅನಿ ಉದ್ದೆಸ್ ಹೊವ್ನ್ ಹೊತ್ತೊ. 6 ಯೆವಾ ಅಮಿ ಮಹಿಮೆನ್ ಭರಲ್ಲ್ಯಾ ಕುರ್ಪೆ ಸಾಟ್ನಿ ದೆವಾಕ್ ಸ್ತುತಿ ಕರುಂವಾ, ಕಶ್ಯಾಕ್ ಮಟ್ಲ್ಯಾರ್, ತೆನಿ ಅಪ್ನಾಚ್ಯಾ ಅಪುರ್‍ಬಾಯೆಚ್ಯಾ ಲೆಕಾಚ್ಯಾ ವೈನಾ ಅಮ್ಕಾ ಫುಕೊಟ್ ದೆನೆ ದಿಲ್ಯಾನಾಯ್.

  2. IRVKAN Indian Revised Version (IRV) - Kannada - 2019

    3 ನಮ್ಮ ಕರ್ತನಾದ ಯೇಸುಕ್ರಿಸ್ತನ 1:3 ರೋಮಾ. 15:6 ನೋಡಿರಿ. ದೇವರೂ ತಂದೆಯೂ ಆಗಿರುವಾತನಿಗೆ ಸ್ತೋತ್ರವಾಗಲಿ, ಆತನು 1:3 ಎಫೆ 1:20; 2:6; 3:10:ಪರಲೋಕದಲ್ಲಿನ ಸಕಲ ಆತ್ಮೀಕ ಆಶೀರ್ವಾದಗಳನ್ನು ನಮಗೆ ಕ್ರಿಸ್ತನಲ್ಲಿ ಅನುಗ್ರಹಿಸಿದ್ದಾನೆ. 4 ನಾವು ಆತನ ಸನ್ನಿಧಿಯಲ್ಲಿ 1:4 ಎಫೆ 5:27; ಕೊಲೊ 1:22; 1 ಥೆಸ. 4:7:ಪರಿಶುದ್ಧರೂ ದೋಷವಿಲ್ಲದವರೂ ಆಗಿರಬೇಕೆಂದು, ಜಗತ್ತು ಸೃಷ್ಟಿಯಾಗುವುದಕ್ಕಿಂತ ಮೊದಲೇ ದೇವರು 1:4 ಎಫೆ 2:10; 2 ಥೆಸ. 2:13; 1 ಪೇತ್ರ 1:2:ಕ್ರಿಸ್ತನಲ್ಲಿ ನಮ್ಮನ್ನು ಆರಿಸಿಕೊಂಡನು. 5 1:5 ಎಫೆ 1:12,14ದೇವರು ತನ್ನ ದಯಾಪೂರ್ವಕವಾದ ಚಿತ್ತಕ್ಕನುಸಾರವಾಗಿ ಯೇಸು ಕ್ರಿಸ್ತನ ಮೂಲಕ1:5 ರೋಮಾ. 8 15: ನಮ್ಮನ್ನು ತನ್ನ ಮಕ್ಕಳನ್ನಾಗಿ ಅಂಗೀಕರಿಸಲು ಪ್ರೀತಿಯಿಂದ 1:5 ಎಫೆ 1:9,11; ರೋಮಾ. 8:29,30. ಮೊದಲೇ ಸಂಕಲ್ಪಮಾಡಿದ್ದನು. 6 ತನ್ನ ಪ್ರಿಯನಲ್ಲಿಯೇ ನಮಗೆ ಉಚಿತವಾಗಿ ಅನುಗ್ರಹಿಸಿರುವ ತನ್ನ ಮಹಿಮೆಯುಳ್ಳ ಕೃಪೆಯ ಸ್ತುತಿಗಾಗಿ ಇದೆಲ್ಲಾವನ್ನು ಮಾಡಿದನು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.