Pular para o conteúdo
Publicidade

ಎಫೆಸದವರಿಗೆ 3:14-19

OKCV Kannada Contemporary Version

ಎಫೆಸದವರಿಗಾಗಿ ಪ್ರಾರ್ಥನೆ

14,15 ಈ ಕಾರಣದಿಂದ, ಪರಲೋಕ ಭೂಲೋಕದಲ್ಲಿರುವ ಪ್ರತಿ ಕುಟುಂಬವೂ ಹೆಸರು ಪಡೆದಿರಲು ಕಾರಣವಾಗಿರುವ ತಂದೆಯ ಮುಂದೆ ನಾನು ಮೊಣಕಾಲೂರುತ್ತೇನೆ: 16 ದೇವರು ತಮ್ಮ ಮಹಿಮೆಯ ಐಶ್ವರ್ಯಕ್ಕನುಸಾರವಾಗಿ ತಮ್ಮ ಆತ್ಮನ ಮೂಲಕ ನಿಮ್ಮನ್ನು ಆಂತರ್ಯದಲ್ಲಿ ಶಕ್ತಿಯಿಂದ ಬಲಪಡಿಸಲಿ ಎಂದು ಪ್ರಾರ್ಥಿಸುತ್ತೇನೆ. 17 ನಂಬಿಕೆಯ ಮೂಲಕ ಕ್ರಿಸ್ತನು ನಿಮ್ಮ ಹೃದಯಗಳಲ್ಲಿ ವಾಸಿಸಲಿ. ನೀವು ಪ್ರೀತಿಯಲ್ಲಿ ಬೇರೂರಿ ನೆಲೆಗೊಂಡು ನಿಂತು 18 ದೇವರ ಪರಿಶುದ್ಧರೆಲ್ಲರೊಂದಿಗೆ ಅದರ ಅಗಲ, ಉದ್ದ, ಆಳ ಮತ್ತು ಎತ್ತರವನ್ನು ಪೂರ್ಣವಾಗಿ ಕ್ರಿಸ್ತನ ಪ್ರೀತಿಯನ್ನು ಅರಿಯುವುದಕ್ಕೆ ಶಕ್ತರಾಗಲಿ. 19 ಮತ್ತು ತಿಳುವಳಿಕೆಗೆ ಅಪಾರವಾದ ಕ್ರಿಸ್ತನ ಪ್ರೀತಿಯನ್ನು ನೀವು ತಿಳಿದುಕೊಂಡು ದೇವರ ಸರ್ವಸಂಪೂರ್ಣತೆಯಿಂದ ತುಂಬಿದವರಾಗಲಿ ಎಂದು ಅವರನ್ನು ಬೇಡಿಕೊಳ್ಳುತ್ತೇನೆ.

Em outras traduções

  1. SII25 Bíblia Siddi

    14 ‍ಹ್ಯಾ ಕಾರಾನಾಕ್ ಲಾಗುನ್ ಮಿಯಾ ಬಾಬಾಚ್ಯಾ ಇದ್ರಾಕ್ ಡೊಗ್ಲಾ ಠೆಕ್ತಾ.

    15 ಹ್ಯಾ ಜಗಾತ್, ಅನಿ ಸರ್‍ಗಾತ್ ಹೊತ್ತ್ಯಾ ಹರ್ ಎಕ್ ಘರಾನೆ ತೆಜ್ಯಾಕ್ನಾ ಖರೆ ನಾವ್ ಘೆತಾತ್. 16 ದೆವ್ ಅಪ್ನಾಚ್ಯಾ ಮಹಿಮೆಚ್ಯಾ ಬದಿಕಾತ್ನಾ ತುಮ್ಚ್ಯಾ ಭುತ್ತುರ್ಲಿ ಮನಾ ಘಟ್ ರ್‍ಹಾವ್ಕ್ ಅಪ್ನಾಚ್ಯಾ ಪವಿತ್ರ್ ಆತ್ಮ್ಯಾಚ್ಯಾ ವೈನಾ ಬಳ್ ದಿಂವ್ದಿ ಮನುನ್ ಮಿಯಾ ದೆವಾಕ್ಡೆ ಮಾಗ್ತಾ. 17 ಅನಿ ವಿಶ್ವಾಸಾಚ್ಯಾ ವೈನಾ ಕ್ರಿಸ್ತ್ ತುಮ್ಚ್ಯಾ ಮನಾಕ್ನಿ ಅಪ್ನಾಚೆ ಘರ್ ಕರುನ್ಗೆಂವ್ದಿತ್ ಮನುನ್ ಮಾಗ್ತಾ ಅನಿ ತುಮ್ಚೆ ಮುಳಾ ಅನಿ ಪಾಯಾ ಪ್ರೆಮಾ ವೈರ್ ಭಾಂದಲಿ ಹೊವ್ನ್ ರ್‍ಹಾಂವ್ದಿತ್ ಮನುನ್ ಮಾಗ್ತಾ. 18 ಅಸೆ ತುಮ್ಕಾ ದೆವಾಚ್ಯಾ ಸಗ್ಳ್ಯಾ ಲೊಕಾಂಚ್ಯಾ ವಾಂಗ್ಡಾ ಕ್ರಿಸ್ತಾಚೊ ಪ್ರೆಮ್ ಕೆವ್ಡೊ ರುಂದ್, ಲಾಂಬ್, ಉಪ್ಪರ್ ಅನಿ ಖೊಲ್ ಮನುನ್ ಕಳ್ವುನ್ ಘೆತಲೊ ಬಳ್ ಗಾಂವ್ದಿತ್. 19 ತೆ ಅಸೆ ಫುರಾ ಕಳ್ವುನ್ ಘೆವ್ಕ್ ಹೊಯ್ ನಸ್ಲ್ಯಾರ್ಬಿ ತೆಜೊ ಪ್ರೆಮ್ ತುಮ್ಕಾ ಕಳುಂದಿ ಅನಿ ಅಸೆ ತುಮ್ಕಾ ದೆವಾಚ್ಯಾ ಫುರಾ ಸ್ವಭಾವಾನ್ ಭರುಂದಿ.

  2. IRVKAN Indian Revised Version (IRV) - Kannada - 2019

    14,15 ಹೀಗಿರಲಾಗಿ 3:14-15 ಅಥವಾ, ಪ್ರತಿ ಜನವೂ ತನ್ನ ಮೂಲಜನಕನಿಂದ ಹೆಸರು ತೆಗೆದುಕೊಳ್ಳುತ್ತದಷ್ಟೆ; ಯಾವಾತನು ದೇವಜನರಾದ ನಮಗೆ ಮೂಲ ಜನಕನಾಗಿದ್ದಾನೋ. ಯಾವ ತಂದೆಯಿಂದ ಭೂಪರಲೋಕಗಳಲ್ಲಿರುವ ಪ್ರತಿ ಜನವೂ ಹೆಸರುಗೊಂಡಿರುವುದೋ ಆ ತಂದೆಯ ಮುಂದೆ ನಾನು ಮೊಣಕಾಲೂರಿಕೊಂಡು, 16 ನೀವು ದೇವರಾತ್ಮನ ಮೂಲಕ ಆಂತರ್ಯದಲ್ಲಿ 3:16 ಎಫೆ 6:10; ಫಿಲಿ. 4:13; ಕೊಲೊ 1:11:ವಿಶೇಷಬಲವನ್ನು ಹೊಂದುವಂತೆಯೂ, 17 3:17 ಎಫೆ 2:22:ಕ್ರಿಸ್ತನು ನಿಮ್ಮ ನಂಬಿಕೆಯ ಮೂಲಕ ನಿಮ್ಮ ಹೃದಯಗಳಲ್ಲಿ ವಾಸಮಾಡುವಂತೆಯೂ, ಆತನು 3:17 ವ. 8:ತನ್ನ ಮಹಿಮಾತಿಶಯದ ಪ್ರಕಾರ ಅನುಗ್ರಹಿಸಲಿ. 18 3:18 ಅಥವಾ, ಆ ಸತ್ಯರ್ಥದ. ನೀವು ದೇವರ ಪ್ರೀತಿಯಲ್ಲಿ ನೆಲೆಯಾಗಿ ನಿಂತು, ದೇವಜನರೆಲ್ಲರೊಂದಿಗೆ ಅದರ ಅಗಲ, ಉದ್ದ, ಎತ್ತರ, ಆಳ ಎಷ್ಟೆಂಬುದನ್ನು ಗ್ರಹಿಸುವುದಕ್ಕೆ ಶಕ್ತರಾಗುವಂತೆಯೂ, 19 ಬುದ್ಧಿಗಿಂತಲೂ ಮಿಗಿಲಾಗಿರುವ ಕ್ರಿಸ್ತನ ಪ್ರೀತಿಯನ್ನು ತಿಳಿದುಕೊಂಡು, 3:19 ಎಫೆ 1:23; ಕೊಲೊ 2:10:ದೇವರ ಸಂಪೂರ್ಣತೆಯ ಮಟ್ಟಿಗೂ ಪರಿಪೂರ್ಣರಾಗುವ ಹಾಗೆ ದೇವರು ನಿಮಗೆ ದಯಪಾಲಿಸಲಿ ಎಂದು ಆತನನ್ನು ಬೇಡಿಕೊಳ್ಳುತ್ತೇನೆ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.