Pular para o conteúdo
Publicidade

ಎಫೆಸದವರಿಗೆ 4:1-12

ಕ್ರಿಸ್ತನ ದೇಹದಲ್ಲಿ ಐಕ್ಯತೆ

1 ಆದ್ದರಿಂದ ನೀವು ಸ್ವೀಕರಿಸಿದ ನಿಮ್ಮ ಕರೆಯುವಿಕೆಗೆ ಯೋಗ್ಯರಾಗಿ ಬಾಳಬೇಕೆಂದು ಕರ್ತನ ಸೆರೆಯಾಳಾದ ನಾನು ನಿಮ್ಮನ್ನು ಪ್ರಬೋಧಿಸುತ್ತೇನೆ. 2 ನೀವು ಸಂಪೂರ್ಣ ದೀನತ್ವದಿಂದಲೂ ಸಾತ್ವಿಕತ್ವಗಳಿಂದಲೂ ದೀರ್ಘಶಾಂತಿಯಿಂದಲೂ ಒಬ್ಬರನ್ನೊಬ್ಬರು ಪ್ರೀತಿಯಿಂದ ಸಹಿಸಿಕೊಳ್ಳಿರಿ. 3 ಸಮಾಧಾನದ ಬಂಧನದಲ್ಲಿದ್ದವರಾಗಿ, ಪವಿತ್ರಾತ್ಮ ದೇವರಿಂದ ಉಂಟಾಗುವ ಐಕ್ಯತೆಯನ್ನು ಕಾಪಾಡಿಕೊಳ್ಳಲು ಆಸಕ್ತರಾಗಿರಿ. 4 ಒಂದೇ ನಿರೀಕ್ಷೆಗೆ ನೀವು ಕರೆಹೊಂದಿದಂತೆಯೇ ದೇಹವು ಒಂದೇ, ಪವಿತ್ರಾತ್ಮರು ಒಬ್ಬರೇ, 5 ಕರ್ತ ಆಗಿರುವವರು ಒಬ್ಬರೇ, ಒಂದೇ ವಿಶ್ವಾಸ, ದೀಕ್ಷಾಸ್ನಾನವೂ ಒಂದೇ, 6 ಎಲ್ಲರಿಗೂ ತಂದೆಯಾಗಿರುವ ದೇವರು ಒಬ್ಬರೇ; ಅವರೇ ಎಲ್ಲರ ಮೇಲಿರುವರೂ ಎಲ್ಲರ ಮೂಲಕ ಕಾರ್ಯನಡಿಸುವವರೂ ಎಲ್ಲರಲ್ಲಿ ವಾಸಿಸುವವರೂ ಆಗಿದ್ದಾರೆ.

7 ನಮ್ಮಲ್ಲಿ ಪ್ರತಿಯೊಬ್ಬನಿಗೂ ಕ್ರಿಸ್ತ ಯೇಸುವು ನೀಡಿದ ಅಳತೆಗೆ ಅನುಸಾರವಾಗಿ ವರವನ್ನು ಕೊಡಲಾಗಿದೆ. 8 ಆದ್ದರಿಂದ ಪವಿತ್ರ ವೇದದಲ್ಲಿ ಹೀಗೆ ಹೇಳಲಾಗಿದೆ:

"ಅವರು ಉನ್ನತಸ್ಥಾನಕ್ಕೆ ಏರಿಹೋದಾಗ,

ಸೆರೆಯಾಳಾಗಿದ್ದ ಅನೇಕರನ್ನು ಕೊಂಡೊಯ್ದು

ತಮ್ಮ ಜನರಿಗೆ ವರದಾನಗಳನ್ನು ಕೊಟ್ಟರು!"4:8 ಕೀರ್ತನೆ 68:18

9 "ಅವರು ಏರಿ ಹೋದರೆಂದು," ಹೇಳಿದ್ದರ ಅರ್ಥವೇನು? ಭೂಮಿಯ ಭೂಗರ್ಭಕ್ಕೂ ಇಳಿದಿದ್ದರು ಎಂದೂ ಹೇಳಿದ ಹಾಗಾಯಿತಲ್ಲವೇ? 10 ಇಳಿದು ಬಂದ ಅವರೇ ಮೇಲಣ ಎಲ್ಲಾ ಆಕಾಶಗಳಿಗಿಂತ ಉನ್ನತವಾಗಿ ಏರಿಹೋಗಿ, ಇಡೀ ವಿಶ್ವವನ್ನೇ ತುಂಬಿಕೊಳ್ಳುವುದಕ್ಕಾಗಿ ಮೇಲೆ ಏರಿ ಹೋಗಿದ್ದಾರೆ. 11 ಕ್ರಿಸ್ತನು ಕೆಲವರನ್ನು ಅಪೊಸ್ತಲರನ್ನಾಗಿಯೂ ಕೆಲವರನ್ನು ಪ್ರವಾದಿಗಳನ್ನಾಗಿಯೂ ಕೆಲವರನ್ನು ಸುವಾರ್ತಿಕರನ್ನಾಗಿಯೂ ಕೆಲವರನ್ನು ಸಭಾಪಾಲಕರನ್ನಾಗಿಯೂ ಕೆಲವರನ್ನು ಉಪದೇಶಿಗಳನ್ನಾಗಿಯೂ ಸಭೆಗೆ ಕೊಟ್ಟರು. 12 ಕ್ರಿಸ್ತನ ದೇಹವನ್ನು ಕಟ್ಟುವುದಕ್ಕಾಗಿಯೂ ದೇವಜನರನ್ನು ಸೇವಾ ಕೆಲಸಕ್ಕಾಗಿ ಪರಿಣಿತರನ್ನಾಗಿ ಮಾಡುವುದಕ್ಕಾಗಿಯೂ ಕ್ರಿಸ್ತನು ಅವರನ್ನು ಕೊಟ್ಟ ಉದ್ದೇಶವಾಗಿತ್ತು.

Estes versículos te tocaram? Ore agora!

+581 estão orando agora.

Junte-se à corrente de oração.