ದಹನಬಲಿಪೀಠ
1 "ಇದಲ್ಲದೆ ಜಾಲಿ ಮರದಿಂದ ಬಲಿಪೀಠವನ್ನು ಮಾಡಬೇಕು. ಅದರ ಎತ್ತರವು ಸುಮಾರು ಒಂದು ಮೀಟರ್27:1 ಅಂದರೆ, ಮೂರು ಮೊಳ ಇರಬೇಕು. ಅದರ ಉದ್ದ ಮತ್ತು ಅಗಲವು ಸುಮಾರು ಎರಡೂವರೆ ಮೀಟರ್27:1 ಅಂದರೆ, ಐದು ಮೊಳ ಚಚ್ಚೌಕವಾಗಿರಬೇಕು. 2 ಅದರ ನಾಲ್ಕು ಮೂಲೆಗಳಲ್ಲಿ ಕೊಂಬುಗಳನ್ನು ಮಾಡಬೇಕು. ಆ ಕೊಂಬುಗಳು ಆ ಬಲಿಪೀಠಕ್ಕೆ ಏಕವಾಗಿರಬೇಕು. ಅವುಗಳನ್ನು ಕಂಚಿನಿಂದ ಹೊದಿಸಬೇಕು. 3 ಅದರ ಬೂದಿಯನ್ನು ತೆಗೆಯುವದಕ್ಕಾಗಿ ಬಟ್ಟಲುಗಳು, ಸಲಿಕೆಗಳು, ಮುಳ್ಳುಚಮಚಗಳು, ಬೋಗುಣಿಗಳು, ಅಗ್ಗಿಷ್ಟಿಕೆಗಳು ಮತ್ತು ಬಲಿಪೀಠದ ಉಪಕರಣಗಳನ್ನೆಲ್ಲಾ ಕಂಚಿನಿಂದ ಮಾಡಬೇಕು. 4 ಅದಕ್ಕೆ ಹೆಣಿಗೆ ಕೆಲಸದಿಂದ ಕಂಚಿನ ಜಾಳಿಗೆಯನ್ನು ಮಾಡಿ, ಆ ಜಾಳಿಗೆಯ ನಾಲ್ಕು ಮೂಲೆಗಳಿಗೆ ಕಂಚಿನ ನಾಲ್ಕು ಬಳೆಗಳನ್ನು ಮಾಡಬೇಕು. 5 ಆ ಜಾಳಿಗೆಯು ಬಲಿಪೀಠದ ಸುತ್ತಲಿರುವ ಕಟ್ಟಿಗೆಯ ಕಟ್ಟೆಯ ಕೆಳಗೆ ಇದ್ದು, ಅದನ್ನು ಬಲಿಪೀಠದ ಕೆಳಭಾಗದಿಂದ ಮಧ್ಯದವರೆಗೆ ಇರುವಂತೆ ಮಾಡಬೇಕು. 6 ಬಲಿಪೀಠಕ್ಕೆ ಜಾಲಿ ಮರದಿಂದ ಕೋಲುಗಳನ್ನು ಮಾಡಿ, ಅವುಗಳನ್ನು ಕಂಚಿನಿಂದ ಹೊದಿಸಬೇಕು. 7 ಆ ಕೋಲುಗಳನ್ನು ಬಳೆಗಳಲ್ಲಿ ಸೇರಿಸಬೇಕು. ಅವುಗಳು ಬಲಿಪೀಠವನ್ನು ಹೊರುವುದಕ್ಕೆ ಅದರ ಎರಡೂ ಬದಿಯಲ್ಲಿ ಇರಬೇಕು. 8 ಬಲಿಪೀಠವನ್ನು ಚೌಕಟ್ಟುಗಳಿಂದ ಪೊಳ್ಳಾಗಿರುವಂತೆ ಮಾಡಬೇಕು. ಬೆಟ್ಟದಲ್ಲಿ ನಿನಗೆ ತೋರಿಸಿದಂತೆ ಅದನ್ನು ಮಾಡಬೇಕು.