ಗುಡಾರದ ಅಂಗಳ
9 "ಗುಡಾರದ ಅಂಗಳವನ್ನು ಮಾಡಬೇಕು. ಹೇಗೆಂದರೆ ದಕ್ಷಿಣ ದಿಕ್ಕಿನಲ್ಲಿರುವ ಅಂಗಳಕ್ಕೋಸ್ಕರ ನಯವಾಗಿ ಹೊಸೆದ ನಾರಿನ ಪರದೆಗಳನ್ನು ಮಾಡಬೇಕು. ಅವು ಸುಮಾರು ನಲವತ್ತೈದು ಮೀಟರ್27:9 ಅಂದರೆ, ನೂರು ಮೊಳ ಉದ್ದವಾಗಿರಬೇಕು. 10 ಆ ಕಡೆಯಲ್ಲಿ ಇಪ್ಪತ್ತು ಸ್ತಂಭಗಳು ಮತ್ತು ಅವುಗಳಿಗೆ ಇಪ್ಪತ್ತು ಕಂಚಿನ ಗದ್ದಿಗೇ ಕಲ್ಲುಗಳಿರಬೇಕು. ಸ್ತಂಭಗಳ ಕೊಂಡಿಗಳನ್ನು ಮತ್ತು ಅವುಗಳ ಪಟ್ಟಿಗಳನ್ನು ಬೆಳ್ಳಿಯಿಂದ ಮಾಡಬೇಕು. 11 ಹಾಗೆಯೇ ಉತ್ತರ ದಿಕ್ಕಿನ ಪರದೆಗಳು ಸುಮಾರು ನಲವತ್ತೈದು ಮೀಟರ್ ಉದ್ದವಾಗಿರಬೇಕು, ಇಪ್ಪತ್ತು ಸ್ತಂಭಗಳು ಮತ್ತು ಇಪ್ಪತ್ತು ಕಂಚಿನ ಗದ್ದಿಗೇ ಕಲ್ಲುಗಳಿರಬೇಕು. ಆ ಸ್ತಂಭಗಳ ಕೊಂಡಿಗಳು ಮತ್ತು ಕಟ್ಟುಗಳು ಬೆಳ್ಳಿಯಿಂದ ಮಾಡಬೇಕು.
12 "ಅಂಗಳದ ಪಶ್ಚಿಮ ಭಾಗದಲ್ಲಿ ಸುಮಾರು ಇಪ್ಪತ್ತಮೂರು ಮೀಟರ್27:12 ಅಂದರೆ, ಐವತ್ತು ಮೊಳ ಉದ್ದವಾದ ಪರದೆಗಳು, ಹತ್ತು ಸ್ತಂಭಗಳು ಮತ್ತು ಆ ಸ್ತಂಭಗಳಿಗೆ ಹತ್ತು ಗದ್ದಿಗೇ ಕಲ್ಲುಗಳಿರಬೇಕು. 13 ಪೂರ್ವದಿಕ್ಕಿನಲ್ಲಿ ಸೂರ್ಯೋದಯದ ಕಡೆಗೆ ಅಂಗಳದ ಅಗಲವು ಸುಮಾರು ಇಪ್ಪತ್ತಮೂರು ಮೀಟರ್ ಉದ್ದವಾಗಿರಬೇಕು. 14 ದ್ವಾರದ ಒಂದು ಬದಿಯ ಪರದೆಗಳು ಸುಮಾರು ಆರುವರೆ ಮೀಟರ್27:14 ಅಂದರೆ, ಹದಿನೈದು ಮೊಳ ಉದ್ದವಾಗಿರಬೇಕು. ಅವುಗಳಿಗೆ ಮೂರು ಸ್ತಂಭಗಳು, ಆ ಸ್ತಂಭಗಳಿಗೆ ಮೂರು ಕಾಲು ಗದ್ದಿಗೇ ಕಲ್ಲುಗಳು ಇರಬೇಕು. 15 ಎರಡೂ ಕಡೆಗಳಲ್ಲಿ ಸುಮಾರು ಆರುವರೆ ಮೀಟರ್ ಉದ್ದವಾದ ಪರದೆಗಳು, ಅವುಗಳಿಗೆ ಮೂರು ಸ್ತಂಭಗಳು ಮತ್ತು ಮೂರು ಗದ್ದಿಗೇ ಕಲ್ಲುಗಳಿರಬೇಕು.
16 "ಗುಡಾರದ ಅಂಗಳದ ದ್ವಾರಕ್ಕಾಗಿ ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ನಯವಾದ ನಾರಿನಿಂದ ಹೊಸೆದು ಕಸೂತಿ ಕೆಲಸಮಾಡಿದ ಇಪ್ಪತ್ತು ಮೊಳದ ಪರದೆ, ಅದಕ್ಕೆ ನಾಲ್ಕು ಸ್ತಂಭಗಳು ಮತ್ತು ನಾಲ್ಕು ಗದ್ದಿಗೇ ಕಲ್ಲುಗಳಿರಬೇಕು. 17 ಅಂಗಳದ ಸುತ್ತಲಿರುವ ಸ್ತಂಭಗಳಿಗೆಲ್ಲಾ ಬೆಳ್ಳಿಯ ಕಟ್ಟುಗಳು, ಬೆಳ್ಳಿಯ ಕೊಂಡಿಗಳು ಮತ್ತು ಗದ್ದಿಗೇ ಕಲ್ಲುಗಳು ಕಂಚಿನದ್ದಾಗಿರಬೇಕು. 18 ಅಂಗಳದ ಉದ್ದ ಸುಮಾರು ನಲವತ್ತೈದು ಮೀಟರ್, ಅಗಲ ಸುಮಾರು ಇಪ್ಪತ್ತಮೂರು ಮೀಟರ್27:18 ಅಂದರೆ, ಐವತ್ತು ಮೊಳ, ಅದರ ಎತ್ತರ ಸುಮಾರು ಎರಡು ಮೀಟರ್27:18 ಅಂದರೆ, ಐದು ಮೊಳ ಇರಬೇಕು. ಪರದೆಗಳು ನಯವಾದ ನಾರಿನಿಂದ ಹೊಸೆದದ್ದಾಗಿದ್ದು, ಅವುಗಳ ಕುಳಿಗಳನ್ನು ಕಂಚಿನಿಂದ ಮಾಡಿಸಬೇಕು.