9 ಈ ಕಾರಣದಿಂದಲೇ ದೇವರು ಅವರನ್ನು ಅತ್ಯುನ್ನತ ಸ್ಥಾನಕ್ಕೆ ಏರಿಸಿ
ಎಲ್ಲಾ ಹೆಸರುಗಳಿಗಿಂತ ಉನ್ನತವಾದ ಹೆಸರನ್ನು ಅವರಿಗೆ ದಯಪಾಲಿಸಿದ್ದಾರೆ.
10 ಆದ್ದರಿಂದ ಪರಲೋಕ, ಭೂಲೋಕ, ಭೂಮಿಯ ಕೆಳಗಿರುವವರೆಲ್ಲರೂ
ಯೇಸುವಿನ ಹೆಸರಿನಲ್ಲಿ ಮೊಣಕಾಲೂರಿ,
11 ತಂದೆಯಾದ ದೇವರ ಮಹಿಮೆಗಾಗಿ
ಯೇಸು ಕ್ರಿಸ್ತನು ಕರ್ತದೇವರು ಎಂಬುದಾಗಿ ಪ್ರತಿಯೊಂದು ನಾಲಿಗೆಯೂ ಅರಿಕೆ ಮಾಡುವುದು.