ಹಬಕ್ಕೂಕನ ದೂರು
2 ಯೆಹೋವ ದೇವರೇ, ನಾನು ಎಷ್ಟು ಕಾಲ ಸಹಾಯಕ್ಕಾಗಿ ಮೊರೆಯಿಡಬೇಕು.
ನೀವು ನನ್ನ ಮೊರೆಗೆ ಎಷ್ಟು ಕಾಲ ಕಿವಿಗೊಡದಿರುವಿರಿ.
"ಹಿಂಸೆಯಾಗುತ್ತಿದೆ," ಎಂದು ಕೂಗುತ್ತಿದ್ದೇನೆ,
ಆದರೂ ನೀವು ರಕ್ಷಿಸುವುದಿಲ್ಲ.
3 ಅನ್ಯಾಯವನ್ನು ನಾನು ನೋಡುವಂತೆ ಏಕೆ ಮಾಡುತ್ತೀರಿ?
ತಪ್ಪನ್ನು ಏಕೆ ಸಹಿಸುತ್ತೀರಿ?
ನಾಶವೂ ಹಿಂಸೆಯೂ ನನ್ನ ಮುಂದೆ ಇವೆ.
ಹೋರಾಟವೂ ಒಡುಕೂ ಹೆಚ್ಚುತ್ತಲಿವೆ.