Pular para o conteúdo
Publicidade

ಯೋಹಾನ 14:1,16-18,26

OKCV Kannada Contemporary Version

ಯೇಸುಸ್ವಾಮಿಯ ಆದರಣೆಯ ಮಾತುಗಳು

1 "ನಿಮ್ಮ ಹೃದಯವು ಕಳವಳಗೊಳ್ಳದಿರಲಿ, ನೀವು ದೇವರನ್ನು ನಂಬಿರಿ; ನನ್ನನ್ನೂ ನಂಬಿರಿ.

16 ನಾನು ತಂದೆಯನ್ನು ಕೇಳಿಕೊಳ್ಳುವೆನು. ಆಗ ತಂದೆ ನಿಮಗೆ ಬೇರೊಬ್ಬ ಸಹಾಯಕರನ್ನು ಸದಾಕಾಲವೂ ನಿಮ್ಮೊಂದಿಗೆ ಇರುವುದಕ್ಕೆ ಕೊಡುವರು. 17 ಅವರೇ ಸತ್ಯದ ಆತ್ಮರಾಗಿದ್ದಾರೆ. ಲೋಕವು ಅವರನ್ನು ನೋಡದೆಯೂ ತಿಳಿಯದೆಯೂ ಇರುವುದರಿಂದ ಸತ್ಯದ ಆತ್ಮರಾಗಿರುವ ಅವರನ್ನು ಸ್ವೀಕರಿಸಲಾರದು. ನೀವು ಅವರನ್ನು ಬಲ್ಲಿರಿ. ಏಕೆಂದರೆ ಅವರು ನಿಮ್ಮೊಂದಿಗಿರುವರು ಮತ್ತು ನಿಮ್ಮೊಳಗೂ ನೆಲೆಸಿರುವರು. 18 ನಾನು ನಿಮ್ಮನ್ನು ಅನಾಥರನ್ನಾಗಿ ಬಿಡುವುದಿಲ್ಲ. ನಿಮ್ಮ ಬಳಿಗೆ ನಾನು ಬರುತ್ತೇನೆ.

26 ತಂದೆಯು ನನ್ನ ಹೆಸರಿನಲ್ಲಿ ಕಳುಹಿಸಿಕೊಡುವ ಸಹಾಯಕ ‘ಪವಿತ್ರಾತ್ಮರು’ ಎಲ್ಲವನ್ನೂ ನಿಮಗೆ ಬೋಧಿಸಿ ನಾನು ನಿಮಗೆ ಹೇಳಿದ್ದನ್ನೆಲ್ಲಾ ನಿಮ್ಮ ನೆನಪಿಗೆ ತರುವರು.

Em outras traduções

  1. SII25 Bíblia Siddi

    1 ಜೆಜುನ್ ತೆಂಕಾ, "ತುಮಿ ಭಿಂವ್ನಕಾಶಿ ಅನಿ ಬೆಜಾರ್ ಹೊವ್‍ನಕಾಶಿ ದೆವಾಚ್ಯಾ ವರ್ತಿ ವಿಶ್ವಾಸ್ ಕರಾ ಅನಿ ಮಾಜೆ ವರ್‍ತಿಬಿ ವಿಶ್ವಾಸ್ ಕರಾ" ಮಟ್ಲ್ಯಾನ್.

    16 ಮಿಯಾ ಮಾಜ್ಯಾ ಬಾಬಾಕ್ಡೆ ಇಚಾರುನ್ ಎಕ್ ಮಜತ್ ಕರ್‍ತಲ್ಯಾಕ್ ಧಾಡುನ್ ದಿತಾ, ತೊ ಸದಾ ಸರ್ವತಾ ತುಮ್ಚ್ಯಾ ವಾಂಗ್ಡಾಚ್ ರ್‍ಹಾತಾ. 17 ತೊ ಎಕ್ ಆತ್ಮೊ ತೊ ದೆವಾಚ್ಯಾ ವಿಶಯಾತ್ ಖರೆ ದಾಕ್ವುನ್ ದಿತಾ. ಹ್ಯೊ ಜಗ್ ತೆಕಾ ಸ್ವಿಕಾರ್ ಕರಿನಾ, ಕಶ್ಯಾಕ್ ಮಟ್ಲ್ಯಾರ್ ಹ್ಯೊ ಜಗ್ ತೆಕಾ ವಳ್ಕಿನಾ, ತೊ ತೆಕಾ ದಿಸಿನಾ. ಖರೆ ತುಮಿ ತೆಕಾ ವಳಕ್ತ್ಯಾಶಿ, ಕಶ್ಯಾಕ್ ಮಟ್ಲ್ಯಾರ್ ತೊ ತುಮ್ಚ್ಯಾ ವಾಂಗ್ಡಾ ಜಿವನ್ ಕರ್‍ತಾ ಅನಿ ತುಮ್ಚ್ಯಾ ಭುತ್ತುರ್ ರ್‍ಹಾತಾ.

    18 "ಮಿಯಾ ಜಾತಾನಾ ತುಮ್ಕಾ ಅನಾಥ್ ಸರ್ಕೆ ಕರುನ್ ಸೊಡುನ್ ಜಾಯ್ನಾ, ಮಿಯಾ ಅನಿ ಪರ್ತುನ್ ತುಮ್ಚ್ಯಾಕ್ಡೆ ಯೆತಾ".

    26 ಮಾಜ್ಯಾ ನಾವಾನ್ ಬಾಬಾನ್ ಧಾಡುನ್ ದಿಲ್ಲೊ ಮಜತ್ ಕರ್‍ತಲೊ ಪವಿತ್ರ್ ಆತ್ಮೊ ಮಿಯಾ ತುಮ್ಕಾ ಸಾಂಗಲ್ಲೆ ಸಗ್ಳೆ ಯಾದ್ ಕರುನ್ ದಿತಾ ಅನಿ ತುಮ್ಕಾ ಸಗ್ಳೆ ಶಿಕ್ವುತಾ.

  2. IRVKAN Indian Revised Version (IRV) - Kannada - 2019

    1 "ನಿಮ್ಮ ಹೃದಯವು ಕಳವಳಗೊಳ್ಳದಿರಲಿ. ನೀವು ದೇವರನ್ನು ನಂಬಿರಿ, ನನ್ನನ್ನೂ ನಂಬಿರಿ.

    16 ಆಗ ನಾನು ತಂದೆಯನ್ನು ಕೇಳಿಕೊಳ್ಳುವೆನು, ಆತನು ನಿಮಗೆ ಬೇರೊಬ್ಬ ಸಹಾಯಕನನ್ನು ಸದಾಕಾಲವೂ ನಿಮ್ಮೊಂದಿಗೆ ಇರುವುದಕ್ಕೆ ಕಳುಹಿಸಿ ಕೊಡುವನು. 17 ಆ ಸಹಾಯಕನು ಯಾರೆಂದರೆ 14:17 ಯೋಹಾ 14:25; 15:26; 16:7:ಸತ್ಯದ ಆತ್ಮನೇ. ಲೋಕವು ಆತನನ್ನು ನೋಡದೆಯೂ, ತಿಳಿಯದೆಯೂ ಇರುವುದರಿಂದ ಆತನನ್ನು ಸ್ವೀಕರಿಸಲಾರದು. ನೀವು ಆತನನ್ನು ಬಲ್ಲಿರಿ, ಹೇಗೆಂದರೆ ಆತನು ನಿಮ್ಮೊಂದಿಗೆ ವಾಸಮಾಡುತ್ತಾನೆ ಮತ್ತು ನಿಮ್ಮೊಳಗೆ ಇರುವನು.

    18 "ನಾನು ನಿಮ್ಮನ್ನು ಅನಾಥರನ್ನಾಗಿ ಬಿಡುವುದಿಲ್ಲ, ನಿಮ್ಮ ಬಳಿಗೆ ಬರುತ್ತೇನೆ.

    26 ಆದರೆ ಆ ಸಹಾಯಕನು, ಅಂದರೆ ನನ್ನ ಹೆಸರಿನಲ್ಲಿ ತಂದೆಯು ಕಳುಹಿಸಿಕೊಡುವ ಪವಿತ್ರಾತ್ಮನೇ ನಿಮಗೆ ಎಲ್ಲವನ್ನು ಉಪದೇಶಿಸಿ ನಾನು ನಿಮಗೆ ಹೇಳಿದ್ದನೆಲ್ಲಾ ನಿಮ್ಮ ನೆನಪಿಗೆ ತಂದುಕೊಡುವನು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.