9 ಯೇಸು ಅವನಿಗೆ, "ಫಿಲಿಪ್ಪನೇ, ನಾನು ಇಷ್ಟುಕಾಲ ನಿಮ್ಮೊಂದಿಗೆ ಇದ್ದರೂ ನೀನು ನನ್ನನ್ನು ತಿಳಿಯಲಿಲ್ಲ. ನನ್ನನ್ನು ನೋಡಿದವನು ತಂದೆಯನ್ನು ನೋಡಿದ್ದಾನೆ. ಹಾಗಾದರೆ, ‘ತಂದೆಯನ್ನು ನಮಗೆ ತೋರಿಸಿರಿ’ ಎಂದು ನೀನು ಕೇಳುವುದು ಹೇಗೆ? 10 ನಾನು ತಂದೆಯಲ್ಲಿ ಇದ್ದೇನೆ ಮತ್ತು ತಂದೆಯು ನನ್ನಲ್ಲಿ ಇದ್ದಾರೆ ಎಂದು ನೀನು ನಂಬುವುದಿಲ್ಲವೇ? ನಾನು ನಿಮಗೆ ಹೇಳುವ ಮಾತುಗಳನ್ನು ನನ್ನಷ್ಟಕ್ಕೆ ನಾನೇ ಮಾತನಾಡುವುದಿಲ್ಲ; ನನ್ನಲ್ಲಿರುವ ತಂದೆಯೇ ತಮ್ಮ ಕ್ರಿಯೆಗಳನ್ನು ಮಾಡುತ್ತಾರೆ.
Publicidade