ದೇವದೂತನು ಯೇಸುವಿನ ಜನನವನ್ನು ಮುಂತಿಳಿಸಿದ್ದು
26 ಎಲಿಸಬೇತಳು ಗರ್ಭಿಣಿಯಾದ ಆರನೆಯ ತಿಂಗಳಲ್ಲಿ, ಗಲಿಲಾಯ ಪ್ರಾಂತದ ನಜರೇತೆಂಬ ಊರಿಗೆ, ದೇವರು ಗಬ್ರಿಯೇಲನೆಂಬ ದೇವದೂತನನ್ನು, 27 ದಾವೀದನ ವಂಶದ ಯೋಸೇಫನಿಗೆ, ನಿಶ್ಚಯವಾಗಿದ್ದ ಮರಿಯಳೆಂಬ ಒಬ್ಬ ಕನ್ನಿಕೆಯ ಬಳಿಗೆ ಕಳುಹಿಸಿದರು. 28 ಆ ದೇವದೂತನು ಆಕೆಗೆ, "ಅತ್ಯಂತ ದಯೆ ಹೊಂದಿದವಳೇ! ನಿನಗೆ ಶುಭವಾಗಲಿ, ಪ್ರಭುವು ನಿನ್ನೊಂದಿಗಿದ್ದಾರೆ," ಎಂದು ಹೇಳಿದನು.