29 ಏನು ಊಟಮಾಡಬೇಕು? ಏನು ಕುಡಿಯಬೇಕು? ಎಂದು ತವಕಪಡಬೇಡಿರಿ; ಚಿಂತೆಯೂ ಮಾಡಬೇಡಿರಿ. 30 ದೇವರನ್ನು ಅರಿಯದವರು ಇವೆಲ್ಲವುಗಳಿಗಾಗಿ ಬೆನ್ನಟ್ಟುತ್ತಾರೆ, ಆದರೆ ಇವುಗಳು ನಿಮಗೆ ಅಗತ್ಯವೆಂದು ನಿಮ್ಮ ತಂದೆಯು ತಿಳಿದಿದ್ದಾರೆ. 31 ಆದರೆ ನೀವು ದೇವರ ರಾಜ್ಯವನ್ನೇ ಹುಡುಕಿರಿ, ಆಗ ಇವೆಲ್ಲವನ್ನು ದೇವರು ನಿಮಗೆ ಕೊಡುವರು.