Pular para o conteúdo
Publicidade

ಲೂಕ 15:11-13,20,22,24

OKCV Kannada Contemporary Version

ತಪ್ಪಿಹೋದ ಮಗನು

11 ಇನ್ನೂ ಯೇಸು ಹೇಳಿದ್ದು: "ಒಬ್ಬ ಮನುಷ್ಯನಿಗೆ ಇಬ್ಬರು ಪುತ್ರರಿದ್ದರು. 12 ಅವರಲ್ಲಿ ಕಿರಿಯವನು ತನ್ನ ತಂದೆಗೆ, ‘ಅಪ್ಪಾ, ಆಸ್ತಿಯಲ್ಲಿ ನನಗೆ ಬರತಕ್ಕ ಪಾಲನ್ನು ಕೊಡು,’ ಎಂದನು. ಆಗ ತಂದೆ ತನ್ನ ಆಸ್ತಿಯನ್ನು ಅವರಿಬ್ಬರಿಗೂ ಪಾಲು ಮಾಡಿಕೊಟ್ಟನು.

13 "ಕೆಲವೇ ದಿನಗಳಲ್ಲಿ, ಕಿರಿಯ ಮಗನು ಎಲ್ಲವನ್ನೂ ಕೂಡಿಸಿಕೊಂಡು, ದೂರದೇಶಕ್ಕೆ ಪ್ರಯಾಣಮಾಡಿ, ಅಲ್ಲಿ ದುಂದು ವೆಚ್ಚದ ಜೀವನ ಮಾಡಿ ತನ್ನ ಆಸ್ತಿಯನ್ನು ಹಾಳು ಮಾಡಿಕೊಂಡನು.

20 ಎದ್ದು ತನ್ನ ತಂದೆಯ ಬಳಿಗೆ ಹೋದನು.

"ಆದರೆ ಅವನು ಇನ್ನೂ ಬಹಳ ದೂರದಲ್ಲಿರುವಾಗಲೇ, ಅವನ ತಂದೆಯು ಅವನನ್ನು ಕಂಡು, ಕನಿಕರಪಟ್ಟು, ಓಡಿಬಂದು, ಅವನ ಕೊರಳನ್ನು ಅಪ್ಪಿಕೊಂಡು ಅವನಿಗೆ ಮುದ್ದಿಟ್ಟನು.

22 "ಆದರೆ ತಂದೆಯು ತನ್ನ ಸೇವಕರಿಗೆ, ‘ಶ್ರೇಷ್ಠವಾದ ಅಂಗಿಯನ್ನು ತಕ್ಷಣವೇ ತಂದು ಇವನಿಗೆ ಉಡಿಸಿರಿ. ಇವನ ಬೆರಳಿಗೆ ಉಂಗುರವನ್ನು ತೊಡಿಸಿರಿ, ಪಾದಗಳಿಗೆ ಪಾದರಕ್ಷೆಗಳನ್ನೂ ಮೆಟ್ಟಿಸಿರಿ. 24 ಏಕೆಂದರೆ ಈ ನನ್ನ ಮಗನು ಸತ್ತುಹೋಗಿದ್ದನು, ತಿರುಗಿ ಬದುಕಿದ್ದಾನೆ; ಕಳೆದುಹೋಗಿದ್ದನು, ಸಿಕ್ಕಿದ್ದಾನೆ,’ ಎಂದು ಹೇಳಿದನು. ಹೀಗೆ ಅವರು ಅವನ ಬರುವಿಕೆಯನ್ನು ಆಚರಿಸತೊಡಗಿದರು.

Em outras traduções

  1. SII25 Bíblia Siddi

    11 ಜೆಜು ಅನಿ ಫಿಡೆ ಅಶೆ ಸಾಂಗುಕ್ ಲಾಗ್ಲೊ, ಎಗ್ದಾ ದೊಗೆ ಜಾನಾ ಲೆಕಾ ಹೊತ್ತೊ ಎಕ್ ಮಾನುಸ್ ಹೊತ್ತೊ. 12 ಧಾಕ್ಲ್ಯಾ ಲೆಕಾನ್, "ಬಾಬಾಕ್ ಬಾಬಾ, ಮಾಜ್ಯಾ ವಾಟ್ಯಾಚಿ ಆಸ್ತಿ ಮಾಕಾ ದಿ" ಮನುನ್ ಸಾಂಗಟ್ಲ್ಯಾನ್. ತೆಚೆಸಾಟ್ನಿ, ತೊ ಮಾನುಸ್ ಅಪ್ನಾಚಿ ಆಸ್ತಿ ದೊನ್ ಭಾಗ್ ಕರ್‍ತಾ, ಅನಿ ಅಪ್ನಾಚ್ಯಾ ದೊಗ್ಯಾಬಿ ಲೆಕಾಕ್ನಿ ತೆಂಚೊ-ತೆಂಚೊ ಇಸ್ಸೊ ದಿತಾ.

    13 ಉಲ್ಲಿ ದಿಸಾ ಗೆಲ್ಲ್ಯಾ ಮಾನಾ, ಧಾಕ್ಲ್ಯಾ ಲೆಕಾನ್, ಅಪ್ನಾಚ್ಯಾ ವಾಟ್ಯಾಚಿ ಆಸ್ತಿ ಇಕ್ಲ್ಯಾನ್ ಅನಿ ಪೈಸೆ ಘೆವ್ನ್ ತೊ ಘರ್ ಸೊಡುನ್ ಎಕ್ ಧುರ್‍ಲ್ಯಾ ದೆಸಾಕ್ ಗೆಲೊ ಅನಿ ಫಿಡ್ಲೊ ಇಚಾರ್ ಕರಿನಸ್ತಾನಾ ಸಗ್ಳೆ ಪೈಸೆ ಮಜ್ಯಾ ಮಾರುನ್ ಖರಚ್ಲ್ಯಾನ್.

    20 ತಸೆ ಮನುನ್ ತೊ ಉಟ್ಲೊ ಅನಿ ಅಪ್ನಾಚ್ಯಾ ಬಾಬಾಚ್ಯಾ ಘರಾಕ್ಡೆ ಜಾವ್ಕಲಾಲೊ,ತೊ ಘರಾಕ್ನಾ ಧುರ್ ರ್‍ಹಾತಾನಾಚ್, ಬಾಬಾನ್ ತೆಕಾ ಬಗಟ್ಲ್ಯಾನ್; ತೆಕಾ ಬಗುನ್, ತೆಚೊ ಮನ್‍ ಚುಟ್ಮುಟ್ಲೊ,

    ಅನಿ ತೊ ಪಳುನ್ ಗೆಲೊ, ಅನಿ ಅಪ್ನಾಚ್ಯಾ ಹಾತಾನಿ ತೆಕಾ ಯಾಂಗ್ ಮಾರ್‍ಲ್ಯಾನ್,ಅನಿ ತೆಚಿ ಉಪ್ಪಾ ಘೆಟ್ಲ್ಯಾನ್. 22 ಖರೆ ಬಾಬಾನ್ ಆಳಾಕ್ನಿ ಬಲ್ವುನ್ "ಲಗ್ಗುನಾ, ಜಾವ್ನ್ ಬರ್‍ಯಾತ್ಲೆ ಬರೆ ಕಪ್ಡೆ ಹಾನಾ ಅನಿ ತೆಕಾ ನೆಸ್ವಾ. ಬೊಟಾಕ್ ಮುದ್ದಿ ಘಾಲಾ ಅನಿ ತೆಚ್ಯಾ ಪಾಯಾತ್ನಿ ಹೊನಾಯಾ ಘಾಲಾ. 24 ಮರಲ್ಲೊ ಮಾಜೊ ಲೆಕ್ ಝಿತ್ತೊ ಹೊವ್ನ್ ಯೆಲಾ; ಕಳ್ದುನ್ ಗೆಲ್ಲೊ ತೊ ಅತ್ತಾ ಗಾವ್ಲಾ" ಮಟ್ಲ್ಯಾನ್. ಅಶೆ ತೆಂಚಿ ಗರ್‍ದಿ ಚಾಲು ಹೊಲಿ.

  2. IRVKAN Indian Revised Version (IRV) - Kannada - 2019

    11 ಇನ್ನೂ ಆತನು ಹೇಳಿದ್ದೇನಂದರೆ, "ಒಬ್ಬ ಮನುಷ್ಯನಿಗೆ ಇಬ್ಬರು ಮಕ್ಕಳಿದ್ದರು. 12 ಅವರಲ್ಲಿ ಕಿರಿಯವನು ತಂದೆಗೆ, ‘ಅಪ್ಪಾ, ಆಸ್ತಿಯಲ್ಲಿ ನನಗೆ ಬರತಕ್ಕ ಪಾಲನ್ನು ಕೊಡು’ ಎಂದು ಕೇಳಿಕೊಳ್ಳಲು ತಂದೆಯು ಆಸ್ತಿಯನ್ನು ಅವರಿಗೆ ಹಂಚಿಕೊಟ್ಟನು. 13 ಸ್ವಲ್ಪ ದಿನದ ಮೇಲೆ ಆ ಕಿರಿಯ ಮಗನು ತನ್ನ ಪಾಲನ್ನೆಲ್ಲಾ ಕೂಡಿಸಿಕೊಂಡು ದೂರದೇಶಕ್ಕೆ ಹೊರಟುಹೋಗಿ ಅಲ್ಲಿ ಪಟಿಂಗನಾಗಿ ಬದುಕಿ ತನ್ನ ಆಸ್ತಿಯನ್ನು ಹಾಳುಮಾಡಿಕೊಂಡನು. 20 ಎದ್ದು ತನ್ನ ತಂದೆಯ ಕಡೆಗೆ ಬಂದನು.

    "ಅವನು ಇನ್ನೂ ದೂರದಲ್ಲಿರುವಾಗ ಅವನ ತಂದೆಯು ಅವನನ್ನು ಕಂಡು, ಕನಿಕರಪಟ್ಟು, ಓಡಿಬಂದು ಅವನ ಕೊರಳನ್ನು ಅಪ್ಪಿಕೊಂಡು, ಅವನಿಗೆ ಬಹಳವಾಗಿ ಮುದ್ದಿಟ್ಟನು. 22 ತಂದೆಯು ತನ್ನ ಆಳುಗಳಿಗೆ, ‘ಶ್ರೇಷ್ಠವಾದ ನಿಲುವಂಗಿಯನ್ನು ತಟ್ಟನೆ ತಂದು ಇವನಿಗೆ ಉಡಿಸಿ, ಇವನ ಕೈಗೆ ಉಂಗುರವನ್ನು ತೊಡಿಸಿರಿ, ಕಾಲಿಗೆ ಜೋಡು ಮೆಡಿಸಿರಿ, 24 ಈ ನನ್ನ ಮಗನು ಸತ್ತವನಾಗಿದ್ದನು, ತಿರುಗಿ ಬದುಕಿ ಬಂದಿದ್ದಾನೆ. ಪೋಲಿಹೋಗಿದ್ದನು, ಸಿಕ್ಕಿದನು’ ಎಂದು ಹೇಳಿ ಉಲ್ಲಾಸಪಡುವುದಕ್ಕೆ ತೊಡಗಿದರು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.