10 ಆ ದೂತನು ಅವರಿಗೆ, "ಹೆದರಬೇಡಿರಿ. ಎಲ್ಲಾ ಜನರಿಗೆ ಮಹಾ ಸಂತೋಷವನ್ನುಂಟು ಮಾಡುವ ಶುಭಸಮಾಚಾರವನ್ನು ನಾನು ನಿಮಗೆ ತಿಳಿಸುತ್ತೇನೆ. 11 ಅದೇನೆಂದರೆ, ಈ ದಿನ ದಾವೀದನ ಪಟ್ಟಣದಲ್ಲಿ ನಿಮಗೋಸ್ಕರ ಒಬ್ಬ ರಕ್ಷಕರು ಹುಟ್ಟಿದ್ದಾರೆ. ಅವರು ಯಾರೆಂದರೆ ಕರ್ತದೇವರು ಆಗಿರುವ ಕ್ರಿಸ್ತ. 12 ಅಲ್ಲಿ ಬಟ್ಟೆಯಿಂದ ಸುತ್ತಿರುವ ಶಿಶುವು ಕೊಟ್ಟಿಗೆಯಲ್ಲಿ ಮಲಗಿರುವುದನ್ನು ನೀವು ಕಾಣುವಿರಿ. ಇದೇ ನಿಮಗೆ ಗುರುತು," ಎಂದು ಹೇಳಿದನು.
Publicidade