4 ಯೋಸೇಫನು ದಾವೀದನ ಕುಟುಂಬದವನೂ ವಂಶದವನೂ ಆಗಿದ್ದರಿಂದ, ಅವನು ಸಹ ಗಲಿಲಾಯ ಪ್ರಾಂತದ ನಜರೇತೆಂಬ ಪಟ್ಟಣದಿಂದ ಯೂದಾಯ ಪ್ರಾಂತದ ಬೇತ್ಲೆಹೇಮ್ ಎಂಬ ದಾವೀದನ ಪಟ್ಟಣಕ್ಕೆ ಹೋದನು. 5 ಅವನು ತನಗೆ ನಿಶ್ಚಯಿಸಿದ್ದ ಮತ್ತು ಪೂರ್ಣ ಗರ್ಭಿಣಿಯಾಗಿದ್ದ ಮರಿಯಳೊಂದಿಗೆ ಜನಗಣತಿಯ ದಾಖಲೆ ಮಾಡಿಸಿಕೊಳ್ಳುವುದಕ್ಕಾಗಿ ಹೋದನು. 6 ಅವರು ಬೇತ್ಲೆಹೇಮಿನಲ್ಲಿ ಇದ್ದಾಗ, ಆಕೆಗೆ ಹೆರಿಗೆಯ ಕಾಲ ಸಮೀಪಿಸಿತು. 7 ಮರಿಯಳು ತನ್ನ ಚೊಚ್ಚಲು ಮಗನನ್ನು ಹೆತ್ತು, ಬಟ್ಟೆಗಳಿಂದ ಸುತ್ತಿ, ಛತ್ರದಲ್ಲಿ ಅವರಿಗೆ ಸ್ಥಳವಿಲ್ಲವಾದ್ದರಿಂದ ಶಿಶುವನ್ನು ದನದ ಕೊಟ್ಟಿಗೆಯಲ್ಲಿ ಮಲಗಿಸಿದಳು.
Publicidade