42 "ತಂದೆಯೇ, ನಿಮ್ಮ ಚಿತ್ತವಿದ್ದರೆ ಈ ಪಾತ್ರೆಯನ್ನು ನನ್ನಿಂದ ತೊಲಗಿಸಿ. ಆದರೂ ನನ್ನ ಚಿತ್ತವಲ್ಲ ನಿಮ್ಮ ಚಿತ್ತದಂತೆಯೇ ಆಗಲಿ," ಎಂದು ಪ್ರಾರ್ಥಿಸಿದರು. 43 ಆಗ ಪರಲೋಕದಿಂದ ಒಬ್ಬ ದೇವದೂತನು ಯೇಸುವಿಗೆ ಕಾಣಿಸಿಕೊಂಡು, ಅವರನ್ನು ಬಲಪಡಿಸುತ್ತಾ ಇದ್ದನು. 44 ಯೇಸು ವೇದನೆಯಲ್ಲಿದ್ದು ಬಹಳ ಆಸಕ್ತಿಯಿಂದ ಪ್ರಾರ್ಥಿಸಿದರು. ಯೇಸುವಿನ ಬೆವರು ನೆಲಕ್ಕೆ ಬೀಳುತ್ತಿರುವ ರಕ್ತದ ದೊಡ್ಡ ಹನಿಗಳಂತಿದ್ದವು.
Publicidade