Pular para o conteúdo
Publicidade

ಲೂಕ 23:39-43

OKCV Kannada Contemporary Version

39 ಶಿಲುಬೆಗೆ ಹಾಕಿದ್ದ ಅಪರಾಧಿಗಳಲ್ಲಿ ಒಬ್ಬನು, "ನೀನು ಕ್ರಿಸ್ತನಾಗಿದ್ದರೆ ನಿನ್ನನ್ನು ರಕ್ಷಿಸಿಕೊಂಡು, ನಮ್ಮನ್ನೂ ರಕ್ಷಿಸು," ಎಂದು ಯೇಸುವನ್ನು ದೂಷಿಸಿದನು.

40 ಆದರೆ ಮತ್ತೊಬ್ಬ ಅಫರಾಧಿಯು ಅವನನ್ನು ಖಂಡಿಸುತ್ತಾ, "ನೀನು ಇದೇ ದಂಡನೆಗೆ ಗುರಿಯಾಗಿದ್ದರೂ ದೇವರಿಗೆ ಭಯಪಡುವುದಿಲ್ಲವೋ? 41 ನಮಗಾದರೋ ನಮ್ಮ ಕೃತ್ಯಕ್ಕೆ ತಕ್ಕ ಶಿಕ್ಷೆ ನ್ಯಾಯವಾಗಿ ಸಿಕ್ಕಿದೆ. ಈತನಾದರೋ ತಪ್ಪಾದದ್ದೇನೂ ಮಾಡಲಿಲ್ಲ," ಎಂದನು.

42 ಬಳಿಕ ಅವನು, "ಯೇಸುವೇ, ನೀವು ನಿಮ್ಮ ರಾಜ್ಯದಲ್ಲಿ ಬರುವಾಗ ನನ್ನನ್ನು ನೆನಪುಮಾಡಿಕೊಳ್ಳಿರಿ," ಎಂದನು.

43 ಆಗ ಯೇಸು ಅವನಿಗೆ, "ಈ ದಿನವೇ ನೀನು ನನ್ನ ಸಂಗಡ ಪರದೈಸಿನಲ್ಲಿರುವೆ23:43 ಪರದೈಸ ಅಂದರೆ ಆನಂದದ ಪರಮ ಸ್ಥಳ ಎಂದು ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ," ಎಂದರು.

Em outras traduções

  1. SII25 Bíblia Siddi

    39 ತೆಚ್ಯಾ ಅಜು-ಬಾಜುಕ್ ಕುರ್ಸಾರ್ ಮಾರಲ್ಲ್ಯಾ ಚೊರಾನಿತ್ಲೊ ಎಕ್ಲೊ "ತಿಯಾ ಮೆಸ್ಸಿಯಾ ನ್ಹಯ್ ಕಾಯ್? ತುಕಾಚ್ ತಿಯಾ ಹುರ್‍ವುನ್ ಘೆ, ಅನಿ ಅಮ್ಕಾಬಿ ಹುರ್‍ವು" ಮನುನ್ ಜೆಜುಕ್ ಅವ್ಮಾನ್ ಕರುಕ್ಲಾಲೊ.

    40 ತನ್ನಾ ಅನಿ ಎಕ್ಲ್ಯಾನ್ ತೆಕಾ "ತುಕಾಬಿ ತೆಕಾ ಗಾವಲ್ಲಿಚ್ ಶಿಕ್ಷಾ ಗಾವ್ಲಾ, ತುಕಾ ಉಲ್ಲೆಬಿ ದೆವಾಚೆ ಭಿಂಯೆ ನಾ ಕಾಯ್? 41 ಅಮ್ಕಾ ತರ್ ಹಿ. ಶಿಕ್ಷಾ ಗಾವಲ್ಲಿ, ಬರಬ್ಬರ್ ಹಾಯ್ , ಕಶ್ಯಾಕ್ ಮಟ್ಲ್ಯಾರ್ ಅಮಿ ಕರಲ್ಲ್ಯಾ ಚುಕಾಕ್ನಿ ಅಮ್ಕಾ ಹಿ ಶಿಕ್ಷಾ ಹೊವ್ಕುಚ್ ಪಾಜೆ, ಖರೆ ತೆನಿ ಕಾಯ್ಬಿ ಚುಕ್ ಕರಲ್ಲಿ ನಾ", ಮನುನ್ ಜೊರ್ ಕರ್ಲ್ಯಾನ್. 42 ಅನಿ ಜೆಜುಕ್ "ಜೆಜು, ತಿಯಾ ರಾಜಾಚಿ ಪದ್ವಿ ಘೆವ್ನ್ ಯೆತಾನಾ, ಮಾಜಿ ಯಾದ್ ಕರ್" ಮಟ್ಲ್ಯಾನ್.

    43 ಜೆಜುನ್ ತೆಕಾ "ಮಿಯಾ ತುಕಾ ಖರೆಚ್ ಸಾಂಗ್ತಾ ಆಜುಚ್ ತಿಯಾ ಮಾಜೆ ವಾಂಗ್ಡಾ, ವೈಕುಂಟಾತ್ ರ್‍ಹಾತೆ!" ಮನುನ್ ಸಾಂಗಟ್ಲ್ಯಾನ್.

  2. IRVKAN Indian Revised Version (IRV) - Kannada - 2019

    39 ಶಿಲುಬೇಗೆರಿಸಿದ್ದ ಆ ದುಷ್ಕರ್ಮಿಗಳಲ್ಲಿ ಒಬ್ಬನು ಯೇಸುವನ್ನು ದೂಷಿಸುತ್ತಾ, "ನೀನು ಬರಬೇಕಾದ ಕ್ರಿಸ್ತನಲ್ಲವೇ? ನಿನ್ನನ್ನು ರಕ್ಷಿಸಿಕೋ, ನಮ್ಮನ್ನು ರಕ್ಷಿಸು" ಎಂದು ಹೇಳಿದನು. 40 ಅದಕ್ಕೆ ಎರಡನೆಯವನು ಅವನನ್ನು ಗದರಿಸಿ, "ನೀನು ಇದೇ ದಂಡನೆಯಲ್ಲಿರುವಾಗಲೂ ದೇವರಿಗೆ ಹೆದರುವುದಿಲ್ಲವೋ? 41 ನಾವಂತೂ ನ್ಯಾಯವಾಗಿ ದಂಡನೆಯಲ್ಲಿದ್ದೇವೆ, ನಾವು ಮಾಡಿದ್ದಕ್ಕೆ ತಕ್ಕ ಪ್ರತಿಫಲವನ್ನು ಹೊಂದುತ್ತೇವೆ. ಈತನಾದರೋ ಅಂತಹದ್ದೇನನ್ನೂ ಮಾಡಲಿಲ್ಲ" ಎಂದು ಹೇಳಿ, 42 "ಯೇಸುವೇ ನೀನು ನಿನ್ನ ರಾಜ್ಯವನ್ನು ಪಡೆದವನಾಗಿ ಬರುವಾಗ ನನ್ನನ್ನು ನೆನಪಿಸಿಕೋ" ಅಂದನು. 43 ಅದಕ್ಕೆ ಯೇಸು, "ಈ ಹೊತ್ತೇ ನೀನು ನನ್ನ ಸಂಗಡ ಪರದೈಸಿನಲ್ಲಿರುವಿ ಎಂದು ನಿನಗೆ ಸತ್ಯವಾಗಿ ಹೇಳುತ್ತೇನೆ" ಎಂದು ಉತ್ತರಕೊಟ್ಟನು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.