ಬಿತ್ತುವವನ ಸಾಮ್ಯ
1 ಇದಾದ ಮೇಲೆ, ಯೇಸು ಪ್ರತಿಯೊಂದು ಪಟ್ಟಣಕ್ಕೂ ಹಳ್ಳಿಗೂ ಹೋಗಿ, ದೇವರ ರಾಜ್ಯದ ವಿಷಯ ಪ್ರಚಾರ ಮಾಡುತ್ತಾ ಸುವಾರ್ತೆಯನ್ನು ಸಾರುತ್ತಾ ಇದ್ದರು. ಹನ್ನೆರಡು ಮಂದಿ ಶಿಷ್ಯರು ಅವರೊಂದಿಗೆ ಇದ್ದರು. 2 ಇದಲ್ಲದೆ ದುರಾತ್ಮಗಳಿಂದಲೂ ರೋಗಗಳಿಂದಲೂ ಬಿಡುಗಡೆ ಹೊಂದಿದ ಕೆಲವು ಸ್ತ್ರೀಯರು ಮತ್ತು ಏಳು ದೆವ್ವಗಳು ಬಿಟ್ಟುಹೋಗಿದ್ದ ಮಗ್ದಲಿನ ಎಂದು ಕರೆಯಲಾದ ಮರಿಯಳು, 3 ಹೆರೋದನ ಅರಮನೆಯ ಗೃಹ ನಿರ್ವಾಹಕನಾದ ಕೂಜನ ಪತ್ನಿ ಯೋಹಾನಳು, ಸುಸನ್ನಳು ಮತ್ತು ಬೇರೆ ಅನೇಕರು ತಮ್ಮ ಆಸ್ತಿಯಿಂದ ಯೇಸುವಿಗೂ ಅವರ ಶಿಷ್ಯರಿಗೂ ಉಪಚಾರಮಾಡುತ್ತಿದ್ದರು.