ಬಡ ವಿಧವೆಯ ಕಾಣಿಕೆ
41 ಯೇಸು ಕಾಣಿಕೆ ಪೆಟ್ಟಿಗೆಯ ಎದುರಾಗಿ ಕುಳಿತುಕೊಂಡು ಜನರು ಹೇಗೆ ಅದರಲ್ಲಿ ಹಣ ಹಾಕುತ್ತಿದ್ದಾರೆಂಬುದನ್ನು ಗಮನಿಸುತ್ತಿದ್ದರು. ಅನೇಕ ಐಶ್ವರ್ಯವಂತರು ಹೆಚ್ಚು ಹಣ ಹಾಕಿದರು. 42 ಆದರೆ ಒಬ್ಬ ಬಡ ವಿಧವೆಯು ಬಂದು ಎರಡು ಚಿಕ್ಕ ನಾಣ್ಯಗಳನ್ನು ಹಾಕಿದಳು.
43 ಯೇಸು ತಮ್ಮ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರಿಗೆ, "ಈ ಕಾಣಿಕೆ ಪೆಟ್ಟಿಗೆಯಲ್ಲಿ ಹಾಕಿದವರೆಲ್ಲರಿಗಿಂತ ಈ ಬಡ ವಿಧವೆಯು ಹೆಚ್ಚಾಗಿ ಹಾಕಿದ್ದಾಳೆ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ. 44 ಎಲ್ಲರೂ ತಮ್ಮ ಸಮೃದ್ಧಿಯಲ್ಲಿ ಹಾಕಿದರು. ಆದರೆ ಈಕೆಯು ತನ್ನ ಬಡತನದಲ್ಲಿಯೂ ತನಗಿದ್ದದ್ದನ್ನೆಲ್ಲಾ ಎಂದರೆ, ತನ್ನ ಜೀವನಕ್ಕೆ ಆಧಾರವಾಗಿದ್ದುದನ್ನು ಹಾಕಿದ್ದಾಳೆ," ಎಂದರು.