11 ಆದರೆ ನೀವು, ಯಾರಾದರೂ ತನ್ನ ತಂದೆಗೆ ಇಲ್ಲವೆ ತಾಯಿಗೆ, ನಾನು ನಿಮ್ಮ ಸಹಾಯಕ್ಕಾಗಿ ಇಟ್ಟಿದ್ದನ್ನು, ‘ದೇವರಿಗೆ ಕಾಣಿಕೆಯಾಗಿ7:11 ಗ್ರೀಕ್ ಭಾಷೆಯಲ್ಲಿ ಕೊರ್ಬಾನ್ ಎಂದಿದೆ. ಕೊಟ್ಟಿದ್ದೇನೆ’ ಎಂದು ಹೇಳುವುದಾದರೆ, 12 ನೀವು ಅವನನ್ನು ತನ್ನ ತಂದೆತಾಯಿಗಳಿಗೆ ಯಾವ ಸಹಾಯವನ್ನು ಮಾಡುವುದಕ್ಕೂ ಅನುಮತಿಸುವುದಿಲ್ಲ. 13 ಹೀಗೆ ನೀವು ಮಾಡುತ್ತಾ ಬಂದಿರುವ ಸಂಪ್ರದಾಯಗಳ ಮೂಲಕ ದೇವರ ವಾಕ್ಯವನ್ನು ನಿರರ್ಥಕಮಾಡುತ್ತೀರಿ. ಇಂಥ ಕಾರ್ಯಗಳನ್ನು ಇನ್ನೂ ಎಷ್ಟೋ ಮಾಡುತ್ತೀರಿ," ಎಂದು ಹೇಳಿದರು.
14 ಯೇಸು ಜನಸಮೂಹವನ್ನು ಪುನಃ ತಮ್ಮ ಬಳಿಗೆ ಕರೆದು, "ಎಲ್ಲರೂ ನನ್ನ ಮಾತುಗಳನ್ನು ಕೇಳಿರಿ, ಅರ್ಥಮಾಡಿಕೊಳ್ಳಿರಿ. 15 ಹೊರಗಿನಿಂದ ಮನುಷ್ಯನ ಒಳಗೆ ಹೋಗುವ ಯಾವುದೂ ಅವನನ್ನು ಅಶುದ್ಧ ಮಾಡುವುದಿಲ್ಲ. ಆದರೆ ಮನುಷ್ಯನೊಳಗಿಂದ ಹೊರಗೆ ಬರುವಂಥದ್ದು ಅವನನ್ನು ಅಶುದ್ಧ ಮಾಡುತ್ತದೆ.