6 ಅದಕ್ಕೆ ಯೇಸು, "ಕಪಟಿಗಳೇ, ಯೆಶಾಯನು ನಿಮ್ಮ ವಿಷಯವಾಗಿ ಸರಿಯಾಗಿ ಪ್ರವಾದಿಸಿದ್ದಾನೆ," ಅವನು ಬರೆದಿರುವಂತೆ:
" ‘ಈ ಜನರು ತಮ್ಮ ತುಟಿಗಳಿಂದ ನನ್ನನ್ನು ಸನ್ಮಾನಿಸುತ್ತಾರೆ.
ಆದರೆ ಅವರ ಹೃದಯವು ನನ್ನಿಂದ ದೂರವಾಗಿದೆ.
7 ಮನುಷ್ಯರ ಆಜ್ಞೆಗಳನ್ನೇ ಉಪದೇಶಗಳನ್ನಾಗಿ ಬೋಧಿಸುವುದರಿಂದ
ನನ್ನನ್ನು ವ್ಯರ್ಥವಾಗಿ ಆರಾಧಿಸುತ್ತಾರೆ.’7:7 ಯೆಶಾಯ 29:13
8 ನೀವು ದೇವರ ಆಜ್ಞೆಯನ್ನು ತೊರೆದು, ಮನುಷ್ಯರ ಸಂಪ್ರದಾಯಗಳನ್ನು ಹಿಡಿದುಕೊಂಡಿದ್ದೀರಿ," ಎಂದರು.