Pular para o conteúdo
Publicidade

ಮತ್ತಾಯ 18:1-5,10

OKCV Kannada Contemporary Version

ಪರಲೋಕದಲ್ಲಿ ದೊಡ್ಡವನು

1 ಅದೇ ಸಮಯದಲ್ಲಿ ಶಿಷ್ಯರು ಯೇಸುವಿನ ಬಳಿಗೆ ಬಂದು, "ಪರಲೋಕ ರಾಜ್ಯದಲ್ಲಿ ಅತಿ ದೊಡ್ಡವನು ಯಾರು?" ಎಂದು ಕೇಳಿದರು.

2 ಆಗ ಯೇಸು ಒಂದು ಚಿಕ್ಕ ಮಗುವನ್ನು ತಮ್ಮ ಬಳಿಗೆ ಕರೆದು, ಅದನ್ನು ಅವರ ಮಧ್ಯದಲ್ಲಿ ನಿಲ್ಲಿಸಿ, 3 "ನೀವು ಪರಿವರ್ತನೆ ಹೊಂದಿ ಚಿಕ್ಕಮಕ್ಕಳಂತೆ ಆಗದಿದ್ದರೆ, ಪರಲೋಕ ರಾಜ್ಯದೊಳಗೆ ಪ್ರವೇಶಿಸುವುದಿಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ. 4 ಯಾರು ಈ ಚಿಕ್ಕಮಗುವಿನಂತೆ ತಮ್ಮನ್ನು ತಾವು ತಗ್ಗಿಸಿಕೊಳ್ಳುವರೋ ಅವರೇ ಪರಲೋಕ ರಾಜ್ಯದಲ್ಲಿ ಅತಿ ದೊಡ್ಡವರಾಗಿರುವರು. 5 ಯಾರಾದರೂ ಇಂಥ ಚಿಕ್ಕ ಮಗುವನ್ನು ನನ್ನ ಹೆಸರಿನಲ್ಲಿ ಸ್ವೀಕರಿಸಿಕೊಂಡರೆ ನನ್ನನ್ನೇ ಸ್ವೀಕರಿಸಿಕೊಳ್ಳುತ್ತಾರೆ.

ಕಳೆದುಹೋದ ಕುರಿಯ ಸಾಮ್ಯ

10 "ಚಿಕ್ಕವರಲ್ಲಿ ಒಬ್ಬನನ್ನಾದರೂ ನೀವು ಹೀನೈಸದಂತೆ ನೋಡಿಕೊಳ್ಳಿರಿ. ಪರಲೋಕದಲ್ಲಿರುವ ಅವರ ದೂತರು ಪರಲೋಕದ ನನ್ನ ತಂದೆಯ ಮುಖವನ್ನು ಯಾವಾಗಲೂ ನೋಡುತ್ತಿದ್ದಾರೆ.

Em outras traduções

  1. SII25 Bíblia Siddi

    1 ತನ್ನಾ ಶಿಸಾ ಜೆಜುಕ್ಡೆ ಯೆಲಿ, ಅನಿ, "ಸರ್‍ಗಾಚ್ಯಾ ರಾಜಾತ್ ಕೊನ್ ಮೊಟೊ?" ಮನುನ್ ಇಚಾರ್‍ಲ್ಯಾನಿ. 2 ತನ್ನಾ ಜೆಜುನ್ ಎಕ್ ಬಾರಿಕ್ ಪೊರಾಕ್ ಬಲ್ವುಲ್ಯಾನ್, ಅನಿ ತೆಂಚ್ಯಾ ಇದ್ರಾಕ್ ಇಬೆ ಕರ್‍ಲ್ಯಾನ್. 3 ಅನಿ, "ಮಿಯಾ ತುಮ್ಕಾ ಖರೆಚ್ ಸಾಂಗ್ತಾ, ತುಮಿ ತುಮ್ಚೆ ಮನ್ ಬದ್ಲುನ್, ಎಕ್ ಬಾರಿಕ್ ಪೊರಾ ಸರ್ಕೆ ಹೊಯ್ನಸ್ಲ್ಯಾರ್ ತುಮ್ಕಾ ಸರ್‍ಗಾಚ್ಯಾ ರಾಜಾತ್ ಭುತ್ತುರ್ ಗುಸುಕ್ ಹೊಯ್ನಾ. 4 ಜೊ ಕೊನ್ ಅಪ್ನಾಕುಚ್ ಎಕ್ ಬಾರಿಕ್ ಪೊರಾ ಸರ್ಕೆ ಖಾಲ್ತಿ ಕರ್‍ತಾ, ತೊ ಸರ್‍ಗಾಚ್ಯಾ ರಾಜಾತ್‍ ಲೈ ಮೊಟೊ. 5 ಅನಿ ಅಸ್ಲ್ಯಾ ಎಕ್ ಬಾರಿಕ್ ಪೊರಾಕ್ ಮಾಜ್ಯಾ ನಾವಾನ್ ಜೆ ಕೊನ್ ಸ್ವಿಕಾರ್ ಕರ್‍ತಾ, ತೊ ಮಾಕಾಚ್ ಸ್ವಿಕಾರ್ ಕರ್‍ತಾ."

    10 "ಅಬಕಾ, ಹ್ಯಾ ಬಾರಿಕ್ಲ್ಯಾತ್ಲ್ಯಾ ಕೊನಾಕ್ಬಿ ತುಮಿ ಕಿಮ್ಮತ್‍ನಾ ಮನುನ್ ಯವ್ಜುನಕಾಶಿ. ಮಿಯಾ ತುಮ್ಕಾ ಸಾಂಗ್ತಾ ತೆಂಚೆಸಾಟ್ನಿ ಮನುನ್ ಹೊತ್ತಿ ದೆವಾಚಿ ದುತಾ ಕನ್ನಾಬಿ ಸರ್‍ಗಾರ್ ಬಾಬಾಚ್ಯಾ ಇದ್ರಾಕುಚ್ ಹಾತ್.

  2. IRVKAN Indian Revised Version (IRV) - Kannada - 2019

    1 ಆದೇ ವೇಳೆಯಲ್ಲಿ ಶಿಷ್ಯರು ಯೇಸುವಿನ ಬಳಿ ಬಂದು, "ಪರಲೋಕ ರಾಜ್ಯದಲ್ಲಿ ಯಾವನು ದೊಡ್ಡವನು?" ಎಂದು ಕೇಳಿದರು. 2 ಆತನು ಚಿಕ್ಕ ಮಗುವನ್ನು ಹತ್ತಿರಕ್ಕೆ ಕರೆದು ಅವರ ನಡುವೆ ನಿಲ್ಲಿಸಿ, 3 ಅವರಿಗೆ, "ನಿಮ್ಮ ಮನಸ್ಸು ಪರಿವರ್ತನೆಕೊಂಡು ಚಿಕ್ಕ ಮಕ್ಕಳಂತೆ ಆಗದೇ ಹೋದರೆ ನೀವು ಪರಲೋಕ ರಾಜ್ಯದಲ್ಲಿ ಪ್ರವೇಶಿಸುವುದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. 4 ಹೀಗಿರುವುದರಿಂದ ಯಾವನು ಈ ಚಿಕ್ಕ ಮಗುವಿನಂತೆ ತನ್ನನ್ನು ತಾನೇ ತಗ್ಗಿಸಿಕೊಳ್ಳುತ್ತಾನೋ ಅವನೇ ಪರಲೋಕ ರಾಜ್ಯದಲ್ಲಿ ದೊಡ್ಡವನು. 5 ಇದಲ್ಲದೆ ಯಾವನಾದರೂ ನನ್ನ ಹೆಸರಿನಲ್ಲಿ ಇಂಥ ಒಂದು ಚಿಕ್ಕ ಮಗುವನ್ನು ಸ್ವೀಕರಿಸುವನೋ ನನ್ನನ್ನೇ ಸ್ವೀಕರಿಸುವವನಾಗಿದ್ದಾನೆ.

    10 ಈ ಚಿಕ್ಕವರಲ್ಲಿ ಒಬ್ಬನನ್ನಾದರೂ ತಾತ್ಸಾರಮಾಡದಂತೆ ನೋಡಿಕೊಳ್ಳಿರಿ. ಏಕೆಂದರೆ 18:10 ಕೀರ್ತ 34:7; ಲೂಕ 1:19; ಇಬ್ರಿ. 1:14:ಪರಲೋಕದಲ್ಲಿ ಇವರ ದೂತರು ನನ್ನ ಸ್ವರ್ಗೀಯ ತಂದೆಯ ಮುಖವನ್ನು ಯಾವಾಗಲೂ ನೋಡುತ್ತಿರುತ್ತಾರೆ ಎಂದು ನಿಮಗೆ ಹೇಳುತ್ತೇನೆ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.