Pular para o conteúdo
Publicidade

ಮತ್ತಾಯ 19:3,7-9

OKCV Kannada Contemporary Version

3 ಫರಿಸಾಯರಲ್ಲಿ ಕೆಲವರು ಯೇಸುವನ್ನು ಪರೀಕ್ಷಿಸುವುದಕ್ಕಾಗಿ ಅವರ ಬಳಿಗೆ ಬಂದು, "ಒಬ್ಬ ಪುರುಷನು ಯಾವ ಕಾರಣದಿಂದಾದರೂ ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಧರ್ಮಸಮ್ಮತವೋ?" ಎಂದು ಕೇಳಿದರು.

7 ಅದಕ್ಕೆ ಅವರು ಯೇಸುವಿಗೆ, "ಹಾಗಾದರೆ ವಿವಾಹ ವಿಚ್ಛೇದನ ಪತ್ರವನ್ನು ಕೊಟ್ಟು ಆಕೆಯನ್ನು ಬಿಟ್ಟು ಬಿಡಬಹುದೆಂದು ಮೋಶೆಯು ಏಕೆ ಅಪ್ಪಣೆಕೊಟ್ಟನು?" ಎಂದು ಕೇಳಿದರು.

8 ಯೇಸು ಉತ್ತರವಾಗಿ ಅವರಿಗೆ, "ಮೋಶೆಯು ನಿಮ್ಮ ಹೃದಯ ಕಾಠಿಣ್ಯದ ದೆಸೆಯಿಂದ ಹೆಂಡತಿಯನ್ನು ಬಿಟ್ಟುಬಿಡುವುದಕ್ಕೆ ನಿಮಗೆ ಅನುಮತಿ ಕೊಟ್ಟನು. ಆದರೆ ಆದಿಯಿಂದ ಅದು ಹಾಗೆ ಇರಲಿಲ್ಲ. 9 ನಾನು ನಿಮಗೆ ಹೇಳುವುದೇನೆಂದರೆ, ಹಾದರದ ಕಾರಣದಿಂದಲ್ಲದೆ, ಯಾವನಾದರೂ ತನ್ನ ಹೆಂಡತಿಯನ್ನು ಬಿಟ್ಟು, ಮತ್ತೊಬ್ಬಳನ್ನು ಮದುವೆಯಾಗುವವನು ವ್ಯಭಿಚಾರ ಮಾಡುವವನಾಗಿದ್ದಾನೆ," ಎಂದರು.

Em outras traduções

  1. SII25 Bíblia Siddi

    3 ಉಲ್ಲೆಸೆ ಫಾರಿಜೆವ್ ತೆಚೆಕ್ಡೆ ಯೆಲೆ. ಅನಿ ತೆಕಾ ಚುಕೆತ್ ಪಾಡ್ವುಸಾಟ್ನಿ ಮನುನ್, "ಅಮ್ಚ್ಯಾ ಖಾಯ್ದ್ಯಾ ಪರ್‍ಕಾರ್, ಕಸ್ಲ್ಯಾಬಿ ಕಾರನಾಕ್ ಲಾಗುನ್ ಎಕ್ ಘೊಮನ್ಸಾನ್ ಅಪ್ನಾಚ್ಯಾ ಬಾಯ್ಕೊಕ್ ಸೊಡ್ ಪತ್ತರ್ ದಿವ್ಕ್ ಹೊತಾ ಕಾಯ್?" ಮನುನ್ ಇಚಾರ್‍ಲ್ಯಾನಿ.

    7 ತನ್ನಾ ಫಾರಿಜೆವಾನಿ,"ತರ್ ಎಕ್ ಘೊಮನ್ಸಾನ್ ಸೊಡ್‍ ಚಿಟಿ ಲಿವ್ನ್ ದಿವ್ನ್ ಅಪ್ನಾಚ್ಯಾ ಬಾಯ್ಕೊಕ್ ಸೊಡುಕ್ ಹೊತಾ ಮನುನ್ ಮೊಯ್ಜೆನ್ ಅಪ್ನಾಚ್ಯಾ ಖಾಯ್ದ್ಯಾತ್ನಿ ಕಶ್ಯಾಕ್ ಲಿವ್ನ್ ಥವ್ಲ್ಯಾನಾಯ್?" ಮನುನ್ ಇಚಾರ್‍ಲ್ಯಾನಿ.

    8 ಜೆಜುನ್ ತೆಂಕಾ,"ತುಮ್ಚ್ಯಾ ಮಂಡ್‍ಪಾನಾಕ್ ಲಾಗುನ್ ಮೊಯ್ಜೆನ್ ತುಮ್ಕಾ ಸೊಡ್ ಪತ್ತರ್ ದಿವ್ನ್ ಬಾಯ್ಕೊಕ್ ಸೊಡುಕ್ ಹೊತಾ ಮನುನ್ ಸಾಂಗಲ್ಲೆ, ಖರೆ ರಚ್ತಲ್ಯಾ ಏಳಾರ್ ಹೆ ತಸೆ ನತ್ತೆ." 9 "ಮಿಯಾ ತುಮ್ಕಾ ಸಾಂಗ್ತಾ, ಎಕ್ ಮಾನುಸ್ ಅಪ್ನಾಚಿ ಬಾಯ್ಕೊ ದುಸ್ರ್ಯಾಚ್ಯಾ ವಾಂಗ್ಡಾ ಬುರ್ಸೊ ಸಮಂದ್ ಅಸಲ್ಲ್ಯಾ ಕಾರನಾಕ್ ಸೊಡುನ್, ದುಸ್ರ್ಯಾ ಕಸ್ಲ್ಯಾಬಿ ಕಾರನಾಸಾಟಿ ತೊ ಅಪ್ನಾಚ್ಯಾ ಬಾಯ್ಕೊಕ್ ಸೊಡ್ತಾ ಅನಿ ದುಸ್ರ್ಯಾ ಬಾಯ್ಕೊಮನ್ಸಿಕ್ಡೆ ಲಗಿನ್ ಹೊತಾ. ತರ್ ತೊ ವೆಭಿಚಾರ್ ಕರ್‍ತಾ." ಮಟ್ಲ್ಯಾನ್.

  2. IRVKAN Indian Revised Version (IRV) - Kannada - 2019

    3 ಫರಿಸಾಯರು ಯೇಸುವನ್ನು ಪರೀಕ್ಷಿಸಲು ಆತನ ಹತ್ತಿರಕ್ಕೆ ಬಂದು, 19:3 ಮತ್ತಾ 5:31, 32:"ಒಬ್ಬನು ಯಾವುದಾದರೂ ಒಂದು ಕಾರಣದಿಂದ ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಶಾಸ್ತ್ರ ಸಮ್ಮತವೋ?" ಎಂದು ಕೇಳಲು,

    7 ಅದಕ್ಕೆ ಅವರು ಆತನನ್ನು, 19:7 ಧರ್ಮೋ 24:1. "ಹಾಗಾದರೆ ವಿಚ್ಛೇದನ ಪತ್ರವನ್ನು ಕೊಟ್ಟು ಆಕೆಯನ್ನು ಬಿಟ್ಟುಬಿಡಬಹುದೆಂದು ಮೋಶೆಯು ಏಕೆ ಆಜ್ಞೆ ಕೊಟ್ಟನು?" ಎಂದು ಕೇಳಿದರು. 8 ಅದಕ್ಕೆ ಯೇಸು ಅವರಿಗೆ, "ಮೋಶೆಯು ನಿಮ್ಮ ಮೊಂಡತನದ ದೆಸೆಯಿಂದ ನಿಮ್ಮ ಹೆಂಡತಿಯರನ್ನು ಬಿಟ್ಟುಬಿಡುವುದಕ್ಕೆ ಅಪ್ಪಣೆ ಕೊಟ್ಟನು. ಆದರೆ ಆದಿಯಿಂದ ಹೀಗೆ ಇರಲಿಲ್ಲ ಅಂದನು. 9 ಮತ್ತು ವ್ಯಭಿಚಾರದ ಕಾರಣದಿಂದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆ ಮಾಡಿಕೊಳ್ಳುವವನು ವ್ಯಭಿಚಾರ ಮಾಡಿದಂತೆ; 19:9 ಈ ವಾಕ್ಯ ಕೆಲವು ಪ್ರತಿಗಳಲ್ಲಿ ಇಲ್ಲ. ಮತ್ತು ಗಂಡ ಬಿಟ್ಟವಳನ್ನು ಮದುವೆಯಾಗುವವನು ವ್ಯಭಿಚಾರ ಮಾಡಿದಂತೆ" ಎಂದು ನಿಮಗೆ ಹೇಳುತ್ತೇನೆ ಅಂದನು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.