Pular para o conteúdo
Publicidade

ಮತ್ತಾಯ 19:4-6,8,9

OKCV Kannada Contemporary Version

4 ಯೇಸು ಉತ್ತರವಾಗಿ ಅವರಿಗೆ, "ಆದಿಯಿಂದಲೇ ಸೃಷ್ಟಿಕರ್ತ, ‘ಅವರನ್ನು ಗಂಡು ಹೆಣ್ಣಾಗಿ ಮಾಡಿದರು.19:4 ಆದಿ 1:27 5 ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರೂ ಒಂದೇ ಶರೀರವಾಗಿರುವರು,’19:5 ಆದಿ 2:24 ಎಂದು ಹೇಳಿದ್ದನ್ನು ನೀವು ಓದಲಿಲ್ಲವೇ? 6 ಆದ್ದರಿಂದ ಅವರು ಇನ್ನು ಇಬ್ಬರಲ್ಲ, ಒಂದೇ ಶರೀರವಾಗಿದ್ದಾರೆ. ಆದಕಾರಣ ದೇವರು ಕೂಡಿಸಿದ್ದನ್ನು, ಮನುಷ್ಯನು ಅಗಲಿಸಬಾರದು," ಎಂದು ಹೇಳಿದರು.

8 ಯೇಸು ಉತ್ತರವಾಗಿ ಅವರಿಗೆ, "ಮೋಶೆಯು ನಿಮ್ಮ ಹೃದಯ ಕಾಠಿಣ್ಯದ ದೆಸೆಯಿಂದ ಹೆಂಡತಿಯನ್ನು ಬಿಟ್ಟುಬಿಡುವುದಕ್ಕೆ ನಿಮಗೆ ಅನುಮತಿ ಕೊಟ್ಟನು. ಆದರೆ ಆದಿಯಿಂದ ಅದು ಹಾಗೆ ಇರಲಿಲ್ಲ. 9 ನಾನು ನಿಮಗೆ ಹೇಳುವುದೇನೆಂದರೆ, ಹಾದರದ ಕಾರಣದಿಂದಲ್ಲದೆ, ಯಾವನಾದರೂ ತನ್ನ ಹೆಂಡತಿಯನ್ನು ಬಿಟ್ಟು, ಮತ್ತೊಬ್ಬಳನ್ನು ಮದುವೆಯಾಗುವವನು ವ್ಯಭಿಚಾರ ಮಾಡುವವನಾಗಿದ್ದಾನೆ," ಎಂದರು.

Em outras traduções

  1. SII25 Bíblia Siddi

    4 ತನ್ನಾ ಜೆಜುನ್ ತೆಂಕಾ, ತುಮಿ ಪವಿತ್ರ್ ಪುಸ್ತಕಾತ್. ರಚ್ತಲ್ಯಾನ್ ಅದ್ದಿ ರಚ್ತಾನಾ ಬಾಯ್ಕೊಮನುಸ್, ಅನಿ ಘೊಮನುಸ್ ಮನುನ್ ರಚ್ಲ್ಯಾನ್, ಮನುನ್ ವಾಚ್ವುಕ್‍ನ್ಯಾಶಿ ಕಾಯ್? 5 ಅನಿ ದೆವ್ ಮನ್ತಾ,ಹೆಚೆಸಾಟ್ನಿ ಎಕ್ ಘೊಮನುಸ್ ಅಪ್ನಾಚ್ಯಾ ಬಾಯ್ಕ್, ಅನಿ ಬಾಬಾಕ್ ಸೊಡ್ತಾ, ಅನಿ ಅಪ್ನಾಚ್ಯಾ ಬಾಯ್ಕೊಕ್ಡೆ ಎಕ್ ಹೊತಾ, ಅನಿ ತೆನಿ ದೊಗೆಬಿ ಎಕುಚ್ ಆಂಗ್ ಹೊತ್ಯಾತ್. 6 ತೆಚೆಸಾಟ್ನಿ ತೆನಿ, ಅನಿ ಫಿಡೆ ದೊಗೆ ನ್ಹಯ್ ಎಕುಚ್ ಆಂಗ್. ಅಶೆ ರ್‍ಹಾತಾನಾ ದೆವಾನ್ ಜೊಡಲ್ಲೆ ಖಲ್ಯಾಬಿ ಮಾನ್ಸಾನ್ ಎಗ್ಳುಕ್ ಹೊಯ್ನಾ.

    8 ಜೆಜುನ್ ತೆಂಕಾ,"ತುಮ್ಚ್ಯಾ ಮಂಡ್‍ಪಾನಾಕ್ ಲಾಗುನ್ ಮೊಯ್ಜೆನ್ ತುಮ್ಕಾ ಸೊಡ್ ಪತ್ತರ್ ದಿವ್ನ್ ಬಾಯ್ಕೊಕ್ ಸೊಡುಕ್ ಹೊತಾ ಮನುನ್ ಸಾಂಗಲ್ಲೆ, ಖರೆ ರಚ್ತಲ್ಯಾ ಏಳಾರ್ ಹೆ ತಸೆ ನತ್ತೆ." 9 "ಮಿಯಾ ತುಮ್ಕಾ ಸಾಂಗ್ತಾ, ಎಕ್ ಮಾನುಸ್ ಅಪ್ನಾಚಿ ಬಾಯ್ಕೊ ದುಸ್ರ್ಯಾಚ್ಯಾ ವಾಂಗ್ಡಾ ಬುರ್ಸೊ ಸಮಂದ್ ಅಸಲ್ಲ್ಯಾ ಕಾರನಾಕ್ ಸೊಡುನ್, ದುಸ್ರ್ಯಾ ಕಸ್ಲ್ಯಾಬಿ ಕಾರನಾಸಾಟಿ ತೊ ಅಪ್ನಾಚ್ಯಾ ಬಾಯ್ಕೊಕ್ ಸೊಡ್ತಾ ಅನಿ ದುಸ್ರ್ಯಾ ಬಾಯ್ಕೊಮನ್ಸಿಕ್ಡೆ ಲಗಿನ್ ಹೊತಾ. ತರ್ ತೊ ವೆಭಿಚಾರ್ ಕರ್‍ತಾ." ಮಟ್ಲ್ಯಾನ್.

  2. IRVKAN Indian Revised Version (IRV) - Kannada - 2019

    4 ಆತನು ಪ್ರತ್ಯುತ್ತರವಾಗಿ, "ಮನುಷ್ಯರನ್ನು ಉಂಟುಮಾಡಿದವನು ಆದಿಯಿಂದಲೇ ಅವರನ್ನು ಗಂಡು ಮತ್ತು ಹೆಣ್ಣಾಗಿ ಉಂಟುಮಾಡಿದನು, 5 19:5 ಆದಿ 2:24; 1 ಕೊರಿ 6:16:‘ಈ ಕಾರಣದಿಂದಲೇ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು. ಅವರಿಬ್ಬರು ಒಂದೇ ಶರೀರವಾಗಿರುವರು ಎಂದು ನೀವು ಓದಲಿಲ್ಲವೋ?’ 6 ಹೀಗಿರುವುದರಿಂದ ಅವರು ಇನ್ನು ಇಬ್ಬರಲ್ಲ ಒಂದೇ ಶರೀರವಾಗಿದ್ದಾರೆ. ಆದುದರಿಂದ ದೇವರು ಕೂಡಿಸಿದ್ದನ್ನು ಮನುಷ್ಯನು ಅಗಲಿಸಬಾರದು" ಅಂದನು.

    8 ಅದಕ್ಕೆ ಯೇಸು ಅವರಿಗೆ, "ಮೋಶೆಯು ನಿಮ್ಮ ಮೊಂಡತನದ ದೆಸೆಯಿಂದ ನಿಮ್ಮ ಹೆಂಡತಿಯರನ್ನು ಬಿಟ್ಟುಬಿಡುವುದಕ್ಕೆ ಅಪ್ಪಣೆ ಕೊಟ್ಟನು. ಆದರೆ ಆದಿಯಿಂದ ಹೀಗೆ ಇರಲಿಲ್ಲ ಅಂದನು. 9 ಮತ್ತು ವ್ಯಭಿಚಾರದ ಕಾರಣದಿಂದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆ ಮಾಡಿಕೊಳ್ಳುವವನು ವ್ಯಭಿಚಾರ ಮಾಡಿದಂತೆ; 19:9 ಈ ವಾಕ್ಯ ಕೆಲವು ಪ್ರತಿಗಳಲ್ಲಿ ಇಲ್ಲ. ಮತ್ತು ಗಂಡ ಬಿಟ್ಟವಳನ್ನು ಮದುವೆಯಾಗುವವನು ವ್ಯಭಿಚಾರ ಮಾಡಿದಂತೆ" ಎಂದು ನಿಮಗೆ ಹೇಳುತ್ತೇನೆ ಅಂದನು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.