29 "ಆ ಸಂಕಟದ ದಿವಸಗಳು ಮುಗಿದ ತಕ್ಷಣವೇ,
" ‘ಸೂರ್ಯನು ಕತ್ತಲಾಗುವನು;
ಚಂದ್ರನು ಕಾಂತಿಹೀನನಾಗುವನು.
ಆಕಾಶದಿಂದ ನಕ್ಷತ್ರಗಳು ಬೀಳುವವು;
ಮತ್ತು ಆಕಾಶದ ಶಕ್ತಿಗಳು24:29 ಅಥವಾ ಆಕಾಶದ ಗೋಳಗಳು ಕದಲುವವು.’24:29 ಯೆಶಾಯ 13:10; 34:4
30 "ಆಗ ಮನುಷ್ಯಪುತ್ರನಾದ ನನ್ನ ಸೂಚನೆಯು ಆಕಾಶದಲ್ಲಿ ಕಾಣುವುದು. ಭೂಮಿಯ ಎಲ್ಲಾ ಜನಾಂಗದವರು ಗೋಳಾಡುವರು. ಮನುಷ್ಯಪುತ್ರನಾದ ನಾನು ಆಕಾಶದ ಮೇಘಗಳಲ್ಲಿ, ಶಕ್ತಿಯಿಂದಲೂ ಮಹಾಪ್ರಭಾವದಿಂದಲೂ ಬರುವುದನ್ನು ಅವರು ಕಾಣುವರು.24:30 ನೋಡಿರಿ ದಾನಿ 7:13-14