2 "ಆದ್ದರಿಂದ ನೀನು ದಾನಧರ್ಮ ಮಾಡುವಾಗ, ಜನರಿಂದ ಹೊಗಳಿಸಿಕೊಳ್ಳಬೇಕೆಂದು ಕಪಟಿಗಳ ಹಾಗೆ ಸಭಾಮಂದಿರಗಳಲ್ಲಿಯೂ ಬೀದಿಗಳಲ್ಲಿಯೂ ತುತೂರಿಯನ್ನು ಊದಿಸಬೇಡ. ಅವರು ತಮ್ಮ ಪ್ರತಿಫಲವನ್ನು ಪೂರ್ತಿಯಾಗಿ ಹೊಂದಿದ್ದಾಯಿತೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. 3 ಆದರೆ ನೀನು ದಾನಧರ್ಮ ಮಾಡುವಾಗ, ನಿನ್ನ ಬಲಗೈ ಕೊಡುವುದು ನಿನ್ನ ಎಡಗೈಗೆ ತಿಳಿಯದಿರಲಿ. 4 ಹೀಗೆ ನಿನ್ನ ದಾನಧರ್ಮವು ಗುಟ್ಟಾಗಿರುವಾಗ, ಅಂತರಂಗದಲ್ಲಿ ಮಾಡುವುದನ್ನು ಕಾಣುವ ನಿನ್ನ ತಂದೆ ನಿನಗೆ ಪ್ರತಿಫಲವನ್ನು ಕೊಡುವರು.
Publicidade