31 ಆದ್ದರಿಂದ, ‘ಏನು ಊಟಮಾಡಬೇಕು? ಏನು ಕುಡಿಯಬೇಕು ಮತ್ತು ಏನು ಧರಿಸಬೇಕು?’ ಎಂದು ಚಿಂತಿಸಬೇಡಿರಿ. 32 ಇವೆಲ್ಲವನ್ನು ದೇವರನ್ನು ಅರಿಯದವರು ಹುಡುಕುತ್ತಾರೆ. ಇವೆಲ್ಲಾ ನಿಮಗೆ ಅವಶ್ಯವೆಂದು ಪರಲೋಕದಲ್ಲಿರುವ ನಿಮ್ಮ ತಂದೆಯು ತಿಳಿದಿದ್ದಾರೆ. 33 ನೀವು ಮೊದಲು ದೇವರ ರಾಜ್ಯವನ್ನೂ ಅದರ ನೀತಿಯನ್ನೂ ಹುಡುಕಿರಿ. ಆಗ ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು. 34 ಆದ್ದರಿಂದ, ನಾಳೆಯ ವಿಷಯವಾಗಿ ಚಿಂತಿಸಬೇಡಿರಿ. ನಾಳೆಯ ದಿನವು ತನ್ನದನ್ನು ತಾನೇ ಚಿಂತಿಸಿಕೊಳ್ಳುವುದು, ಆ ದಿನದ ಪಾಡು ಆ ದಿನಕ್ಕೆ ಸಾಕು.
ಮತ್ತಾಯ 6:31-34
Em outras traduções
- SII25 Bíblia Siddi
31 "ತೆಚೆಸಾಟ್ನಿ ಅಮಿ ಕಾಯ್ ಖಾತಲೆ? ಕಾಯ್ ಫಿತಲೆ? ಕಾಯ್ ನೆಸ್ತಲೆ? ಮನುನ್ ಯವ್ಜುನಕಾಶಿ. 32 ಹೆ ಸಗ್ಳೆ ದೆವಾಕ್ ವಳ್ಕುನಸಲ್ಲಿ ಲೊಕಾ ಯವಜ್ತಲೆ. ಹೆ ಸಗ್ಳೆ ತುಮ್ಕಾ ಪಾಜೆ ಮನುನ್ ಸರ್‍ಗಾ ವೈಲ್ಯಾ ತುಮ್ಚ್ಯಾ ಬಾಬಾಕ್ ಗೊತ್ತ್ ಹಾಯ್. 33 ಅದ್ದಿ ತುಮಿ ದೆವಾಕ್ ಕಾಯ್ ಪಾಜೆ ತೆ ಕರಾ, ಅನಿ ಸರ್‍ಗಾಚ್ಯಾ ರಾಜಾಚಿ ವಾಟ್ ಹುಡ್ಕಾ. ತನ್ನಾ ತುಮ್ಕಾ ಗರಜ್ ಹೊತ್ತೆ ಸಗ್ಳೆಬಿ ಗಾವ್ತಾ. 34 ತಸೆಮನುನ್ ಉದ್ದ್ಯಾಚ್ಯಾ ವಿಶಯಾತ್ ಯವ್ಜನ್ ಕರುನಕಾಸಿ, ಹರಿಎಕ್ ದಿಸಾಚಿ ಅಪ್ನಾಚಿಚ್ ಮಟಲ್ಲಿ ಕವ್ಡಿಕಿ ಕಸ್ಟಾ ಹಾತ್. ಉದ್ದ್ಯಾಚ್ಯಾ ದಿಸಾಕ್ ಮನುನ್ ಹೊತ್ತಿ ಯವ್ಜನ್ ಉದ್ದ್ಯಾಕ್ ಹಾಯ್".
- IRVKAN Indian Revised Version (IRV) - Kannada - 2019
31 ಹೀಗಿರುವುದರಿಂದ, ‘ಏನು ಊಟಮಾಡಬೇಕು, ಏನು ಕುಡಿಯಬೇಕು, ಏನು ಧರಿಸಿಕೊಳ್ಳಬೇಕು’ ಎಂದು ಚಿಂತೆಮಾಡಬೇಡಿರಿ. 32 ಇವೆಲ್ಲವುಗಳಿಗಾಗಿ ಅನ್ಯಜನಗಳು ತವಕಪಡುತ್ತಾರೆ. ಇದೆಲ್ಲಾ ನಿಮಗೆ ಅಗತ್ಯವಿದೆ ಎಂದು ಪರಲೋಕದಲ್ಲಿರುವ ನಿಮ್ಮ ತಂದೆಗೆ ತಿಳಿದಿದೆಯಷ್ಟೆ. 33 ಹೀಗಿರುವುದರಿಂದ, ನೀವು ಮೊದಲು ದೇವರ ರಾಜ್ಯವನ್ನೂ ನೀತಿಯನ್ನೂ ಹುಡುಕಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು. 34 ಆದುದರಿಂದ ನಾಳಿನ ವಿಷಯವಾಗಿ ಚಿಂತೆ ಮಾಡಬೇಡಿರಿ; ನಾಳಿನ ದಿನವು ತನ್ನದನ್ನು ತಾನೇ ಚಿಂತಿಸಿಕೊಳ್ಳುವುದು. ಆ ಹೊತ್ತಿನ ಪಾಡೇ ಆ ಹೊತ್ತಿಗೆ ಸಾಕು.
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.