7 ಆದರೆ ನೀವು ಪ್ರಾರ್ಥನೆ ಮಾಡುವಾಗ ಯೆಹೂದ್ಯರಲ್ಲದವರಂತೆ ವ್ಯರ್ಥವಾಗಿ ಹೇಳಿದ್ದನ್ನೇ ಪದೇಪದೇ ಹೇಳಬೇಡಿರಿ. ತಮ್ಮ ಅನೇಕ ಮಾತುಗಳ ದೆಸೆಯಿಂದ ತಮ್ಮ ಪ್ರಾರ್ಥನೆಯನ್ನು ದೇವರು ಆಲಿಸುತ್ತಾರೆಂದು ಅವರು ಭಾವಿಸುತ್ತಾರೆ. 8 ನೀವು ಅವರಂತೆ ಇರಬೇಡಿರಿ, ಏಕೆಂದರೆ ನೀವು ಕೇಳುವುದಕ್ಕೆ ಮೊದಲೇ, ನಿಮ್ಮ ತಂದೆಗೆ ನಿಮ್ಮ ಅಗತ್ಯಗಳು ತಿಳಿದಿವೆ.
Publicidade