8 ನೈಲ್ ನದಿಯ ಬಳಿ ನೆಲೆಯಾಗಿದ್ದ ತೆಬೆಸ್ಸಿಗಿಂತ
ನೀನು ಒಳ್ಳೆಯವಳೋ?
ಅವಳ ಸುತ್ತಲೂ ನೀರಿತ್ತು.
ನದಿ ಅವಳ ರಕ್ಷಣೆ,
ನೀರು ಅವಳ ಗೋಡೆ.
9 ಕೂಷ್ ಮತ್ತು ಈಜಿಪ್ಟ್ ಅವಳ ಅಪಾರ ಬಲವಾಗಿದ್ದವು.
ಪೂಟರೂ, ಲಿಬಿಯದವರೂ ಅವಳ ಸಹಾಯಕರಾಗಿದ್ದರು.
10 ಆದರೆ ಅವಳು ಸೆರೆಯಾಗಿ
ದೇಶಾಂತರಕ್ಕೆ ಹೋದಳು.
ಅವಳ ಕೂಸುಗಳು ಸಹ
ಎಲ್ಲಾ ಬೀದಿಗಳ ಮುಖ್ಯ ಸ್ಥಳಗಳಲ್ಲಿ ಅಪ್ಪಳಿಸಲಾಯಿತು.
ಅವಳ ಪ್ರಧಾನರಿಗೋಸ್ಕರ ಚೀಟುಹಾಕಿದರು.
ಅವಳ ಮಹನೀಯರೆಲ್ಲರನ್ನು ಸಂಕೋಲೆಗಳಿಂದ ಕಟ್ಟಿದರು.