Pular para o conteúdo
Publicidade

ರೋಮಾಪುರದವರಿಗೆ 10:13-17

OKCV Kannada Contemporary Version

13 ಏಕೆಂದರೆ, "ಕರ್ತನ ಹೆಸರನ್ನು ಕರೆಯುವವರೆಲ್ಲರಿಗೆ ರಕ್ಷಣೆ ಆಗುವುದು."10:13 ಯೋಯೇಲ 2:32

14 ಆದರೆ, ತಾವು ವಿಶ್ವಾಸವಿಡದ ಕರ್ತನನ್ನು ಕರೆಯುವುದಾದರೂ ಹೇಗೆ? ತಾವು ಕೇಳದ ಕರ್ತನ ಬಗ್ಗೆ ಅವರು ವಿಶ್ವಾಸವಿಡುವುದು ಹೇಗೆ? ಕರ್ತನ ಬಗ್ಗೆ ಸಾರುವವನಿಲ್ಲದೆ ಅವರು ಕೇಳುವುದಾದರೂ ಹೇಗೆ? 15 ಅವರು ಕಳುಹಿಸದ ಹೊರತು ಸಾರುವುದಾದರೂ ಹೇಗೆ? ಆದ್ದರಿಂದಲೇ, "ಶುಭವರ್ತಮಾನವನ್ನು ಸಾರುವವರ ಪಾದಗಳು ಎಷ್ಟೊಂದು ಅಂದವಾಗಿವೆ!"10:15 ಯೆಶಾಯ 52:7 ಎಂದು ಬರೆಯಲಾಗಿದೆ.

16 ಆದರೆ ಇಸ್ರಾಯೇಲರಲ್ಲಿ ಎಲ್ಲರೂ ಸುವಾರ್ತೆಯನ್ನು ಸ್ವೀಕರಿಸಲಿಲ್ಲ. ಏಕೆಂದರೆ, "ಕರ್ತನೇ, ನಮ್ಮ ಸಂದೇಶವನ್ನು ಯಾರು ನಂಬಿದರು?"10:16 ಯೆಶಾಯ 53:1 ಎಂದು ಯೆಶಾಯ ಪ್ರವಾದಿಯು ಹೇಳುತ್ತಾನೆ. 17 ಆದಕಾರಣ, ತಕ್ಕ ವಾಕ್ಯವನ್ನು ಕೇಳುವುದರಿಂದಲೇ ವಿಶ್ವಾಸವು ಬರುತ್ತದೆ, ಅದು ಕ್ರಿಸ್ತನ ವಾಕ್ಯವನ್ನು ಕೇಳುವುದರಿಂದಲೇ ಬರುತ್ತದೆ.

Em outras traduções

  1. SII25 Bíblia Siddi

    13 ಪವಿತ್ರ್ ಪುಸ್ತಕ್ ಮನ್ತಾ; "ಧನಿಯಾಕ್ ಮಜತ್ ಕರ್ ಯೆ" ಮನುನ್ ಜೆ ಕೊನ್ ಬಲ್ವುತಾ ತೊ ಹರಿ ಎಕ್ಲೊ ಬಚಾವ್ ಹೊತಾ.

    14 ಖರೆ ತೆನಿ ತೆಚ್ಯಾ ವರ್‍ತಿ ವಿಶ್ವಾಸುಚ್ ಕರಲ್ಲೊ ನಸ್ಲ್ಯಾರ್ ಮಜತ್ ಕರುಕ್ ಕಶೆ ಬಲ್ವುಕ್ ಹೊತಾ? ಅನಿ ತೆನಿ ದೆವಾಚಿ ಬಾತ್ಮಿಚ್ ಆಯ್ಕಲ್ಲಿ ನಸ್ಲ್ಯಾರ್ ವಿಶ್ವಾಸ್ ತರ್ ಕಶೆ ಕರುಕ್ ಹೊತಾ? ಬಾತ್ಮಿಚ್ ಸಾಂಗುನ್ ಹೊಲ್ಲಿ ನಸ್ಲ್ಯಾರ್ ತೆನಿ ಆಯಿಕ್ತಲೆ ಕಶೆ? 15 ಅನಿ ಬಾತ್ಮಿ ತರ್ ಸಾಂಗಲ್ಲ್ಯಾಕ್ನಿಚ್ ಬಲ್ವಲ್ಲೆ ನಸ್ತಾನಾ ಬಾತ್ಮಿ ಸಾಂಗುನ್ ತರ್ ಕಶಿ ಹೊತಾ? ಪವಿತ್ರ್ ಪುಸ್ತಕಾತ್ ಸಾಂಗಲ್ಲ್ಯಾ ಸರ್ಕೆ. ಬರಿ ಖಬರ್ ಘೆವ್ನ್ ಯೆತಲ್ಯಾ ಬಾತ್ಮಿ ಸಾಂಗ್ತಲ್ಯಾಂಚೆ ಯೆನೆ ಕವ್ಡೆ ವಿಚಿತ್ರ್ ರ್‍ಹಾತಾ! 16 ಖರೆ ಸಗ್ಳೆ ಜಾನಾನಿ ಬರಿ ಖಬರ್ ಸ್ವಿಕಾರ್ ಕರುಕ್‍ನ್ಯಾತ್. ಇಸಾಯಿಯಾ ಅಪ್ನಿಚ್ ಮನ್ತಾ, "ಸರ್ವೆಸ್ವರಾ ಅಮ್ಚ್ಯಾ ಬಾತ್ಮಿ ವರ್‍ತಿ ಕೊನ್ ವಿಶ್ವಾಸ್ ಕರ್‍ಲ್ಯಾನಿ?" 17 ಅಶೆ ರ್‍ಹಾತಾನಾ, ಬರಿ ಖಬರ್ ಆಯ್ಕಲ್ಲ್ಯಾ ವೈನಾ ವಿಶ್ವಾಸ್ ಯೆತಾ, ಅನಿ ಬಾತ್ಮಿ ಕ್ರಿಸ್ತಾಚ್ಯಾ ವಿಶಯಾತ್ ಬಾತ್ಮಿ ಸಾಂಗ್ತಲ್ಯಾ ವೈನಾ ಯೆತಾ.

  2. IRVKAN Indian Revised Version (IRV) - Kannada - 2019

    13 ಆದ್ದರಿಂದ10:13 ಯೋವೇ. 2:32; ಅ. ಕೃ. 2:21 ಕರ್ತನ ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೂ ರಕ್ಷಣೆಯಾಗುವುದೆಂದು ಬರೆದಿದೆ.

    14 ಆದರೆ ಅವರು ನಂಬದೆ ಇರುವುದರಿಂದ ಆತನ ನಾಮವನ್ನು ಹೇಳಿಕೊಳ್ಳುವುದಾದರೂ ಹೇಗೆ? ಮತ್ತು ಆತನ ಸುದ್ದಿಯನ್ನು ಕೇಳದಿರುವಲ್ಲಿ ಆತನನ್ನು ನಂಬುವುದಾದರೂ ಹೇಗೆ? ಪ್ರಚಾರಪಡಿಸುವವನಿಲ್ಲದೆ ಕೇಳುವುದಾದರೂ ಹೇಗೆ? ಸುವಾರ್ತೆಸಾರುವವರನ್ನು ಕಳುಹಿಸದೆ ಸಾರುವುದು ಹೇಗೆ? 15 ಇದಕ್ಕೆ ಸರಿಯಾಗಿ 10:15 ಯೆಶಾ 52:7; ನಹೂ. 1:15"ಶುಭದ ಸುವಾರ್ತೆಯನ್ನು ಸಾರುವವರ ಪಾದಗಳು ಎಷ್ಟೋ ಮನೋಹರವಾಗಿವೆ" ಎಂದು ಬರೆದಿದೆ. 16 10:16 ಇಬ್ರಿ. 4:2ಆದರೂ ಆ ಶುಭವರ್ತಮಾನಕ್ಕೆ ಎಲ್ಲರೂ ಕಿವಿಗೊಡಲಿಲ್ಲ. ಈ ವಿಷಯದಲ್ಲಿ ಯೆಶಾಯನು, 10:16 ಯೆಶಾ 53:1; ಯೋಹಾ 12:38"ಕರ್ತನೇ, ನಾವು ಸಾರಿದ ಸುವಾರ್ತೆಯನ್ನು ಯಾರು ನಂಬಿದರು?" ಎಂದು ನುಡಿಯುತ್ತಾನೆ. 17 ಆದಕಾರಣ ಸಾರಿದ ಸುವಾರ್ತೆಯನ್ನು ಕೇಳುವುದರಿಂದ ನಂಬಿಕೆಯು ಹುಟ್ಟುತ್ತದೆ, ಕೇಳಿಸಿಕೊಳ್ಳುವುದು ಕ್ರಿಸ್ತನ ವಾಕ್ಯವಾಗಿದೆ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.