6 ದೇವರು, "ಪ್ರತಿಯೊಬ್ಬನಿಗೂ ಅವನವನ ಕೃತ್ಯಗಳಿಗೆ ತಕ್ಕ ಪ್ರತಿಫಲ ಕೊಡುವರು."2:6 ಕೀರ್ತನೆ 62:12; ಜ್ಞಾನೋಕ್ತಿ 24:12 7 ಯಾರು ಮಹಿಮೆ, ಮಾನ, ಅಮರತ್ವ ಸತ್ಕ್ರಿಯೆಗಳನ್ನು ಸಹನೆಯಿಂದ ಮಾಡುತ್ತಾರೋ ಅವರಿಗೆ ದೇವರು ನಿತ್ಯಜೀವವನ್ನು ಕೊಡುವರು. 8 ಯಾರು ಸ್ವಾರ್ಥಿಗಳಾಗಿದ್ದು ಸತ್ಯವನ್ನು ಅನುಸರಿಸದೆ ಅನೀತಿಯನ್ನು ಅನುಸರಿಸುತ್ತಾರೋ ಅವರ ವಿರುದ್ಧ ದೇವರಿಗೆ ಕೋಪವೂ ಆಕ್ರೋಶವೂ ಬರುತ್ತವೆ. 9 ಕೆಟ್ಟದ್ದನ್ನು ನಡೆಸುವ ಪ್ರತಿ ಮನುಷ್ಯನಿಗೆ ಕಷ್ಟವೂ ಸಂಕಟವೂ ಬರುತ್ತವೆ, ಯೆಹೂದ್ಯರಿಗೆ ಮೊದಲು, ಅನಂತರ ಯೆಹೂದ್ಯರಲ್ಲದವರಿಗೂ ಸಹ. 10 ಆದರೆ ಒಳ್ಳೆಯದನ್ನು ನಡೆಸುವ ಪ್ರತಿಯೊಬ್ಬನಿಗೆ ಮಹಿಮೆಯೂ ಗೌರವವೂ ಸಮಾಧಾನವೂ ಉಂಟಾಗುತ್ತವೆ. ಯೆಹೂದ್ಯರಿಗೆ ಮೊದಲು, ಅನಂತರ ಯೆಹೂದ್ಯರಲ್ಲದವರಿಗೂ ಸಹ. 11 ದೇವರಲ್ಲಿ ಪಕ್ಷಪಾತವಿಲ್ಲ.
Publicidade
ರೋಮಾಪುರದವರಿಗೆ 2
Estes versículos te tocaram? Ore agora!
+581 estão orando agora.
Junte-se à corrente de oração.