Pular para o conteúdo
Publicidade

ರೋಮಾಪುರದವರಿಗೆ 8:12-17

OKCV Kannada Contemporary Version

12 ಆದ್ದರಿಂದ, ಪ್ರಿಯರೇ, ನಾವು ಮಾಂಸಭಾವದ ಹಂಗಿನಲ್ಲಿಲ್ಲ. ಅದರ ಆಶಾಪಾಶಗಳಿಗೆ ಅನುಗುಣವಾಗಿ ಬದುಕಲು ಋಣಸ್ಥರಲ್ಲ. 13 ಏಕೆಂದರೆ, ನೀವು ಮಾಂಸಭಾವಕ್ಕೆ ಅನುಸಾರವಾಗಿ ಜೀವಿಸಿದರೆ, ಸಾಯುವಿರಿ. ಆದರೆ ಪವಿತ್ರಾತ್ಮ ದೇವರಿಂದ ದೈಹಿಕ ದುರಭ್ಯಾಸಗಳನ್ನು ಸಾಯಿಸಿದರೆ, ನೀವು ಬದುಕುವಿರಿ.

14 ಯಾರು ದೇವರ ಆತ್ಮರಿಂದ ನಡಿಸಿಕೊಳ್ಳುತ್ತಾರೋ ಅವರು ದೇವರ ಪುತ್ರರಾಗಿರುತ್ತಾರೆ. 15 ನಿಮ್ಮನ್ನು ಪುನಃ ಭಯಕ್ಕೆ ದಾಸರನ್ನಾಗಿ ಮಾಡುವ ಆತ್ಮನನ್ನು ನಾವು ಹೊಂದದೆ, ಪುತ್ರತ್ವದ ಪವಿತ್ರಾತ್ಮನನ್ನೇ ಹೊಂದಿದವರಾಗಿ ದೇವರನ್ನು, "ಅಪ್ಪಾ, ತಂದೆಯೇ," ಎಂದು ಕರೆಯುತ್ತೇವೆ. 16 ನಾವು ದೇವರ ಮಕ್ಕಳಾಗಿದ್ದೇವೆ ಎಂಬುದಕ್ಕೆ ದೇವರ ಆತ್ಮರು ನಮ್ಮ ಆತ್ಮದೊಂದಿಗೆ ಸಾಕ್ಷಿಕೊಡುತ್ತಾರೆ. 17 ನಾವು ಈಗ ಮಕ್ಕಳಾಗಿರುವುದಾದರೆ, ಬಾಧ್ಯರಾಗಿರುತ್ತೇವೆ; ದೇವರಿಗೆ ಬಾಧ್ಯರು ಮತ್ತು ಕ್ರಿಸ್ತ ಯೇಸುವಿನೊಂದಿಗೆ ಸಹಬಾಧ್ಯರಾಗಿದ್ದೇವೆ. ನಾವು ಕ್ರಿಸ್ತ ಯೇಸುವಿನ ಶ್ರಮೆಗಳಲ್ಲಿ ನಿಜವಾಗಿಯೂ ಪಾಲುಗಾರರಾಗಿದ್ದರೆ, ಅವರ ಮಹಿಮೆಯಲ್ಲಿಯೂ ಪಾಲುಗಾರರಾಗುವೆವು.

Em outras traduções

  1. SII25 Bíblia Siddi

    12 ಹೆಚ್ಯಾಸಾಟ್ನಿ ಮಾಜ್ಯಾ ಭಾವಾನು, ಅಮಿ ರುನಿ ಹೊವ್ನ್ ಹಾಂವ್, ಖರೆ ಅಮಿ ಅಮ್ಚ್ಯಾ ಮಾನುಸ್ಪಾನಾಚ್ಯಾ ಸ್ವಬಾವಾಚ್ಯಾ ಸರ್ಕೆ ಚಲ್ತಲೆ ನ್ಹಯ್. 13 ಕಶ್ಯಾಕ್ ಮಟ್ಲ್ಯಾರ್, ತುಮಿ ತುಮ್ಚ್ಯಾ ಮಾನುಸ್‍ಪಾನಾಚ್ಯಾ ಸ್ವಬಾವಾಚ್ಯಾ ಸರ್ಕೆ ಚಲ್ಲ್ಯಾಸಿ ತರ್ ಕಶ್ಯಾಕ್ , ತುಮಿ ಮರ್ತ್ಯಾಶಿ; ಖರೆ ಪವಿತ್ರ್ ಆತ್ಮ್ಯಾಚ್ಯಾ ವೈನಾ ತುಮಿ ತುಮ್ಚ್ಯಾ ಪಾಪಾಚ್ಯಾ ಕಾಮಾಕ್ನಿ ಮರುಕ್ ಸೊಡ್ಲ್ಯಾಶಿ ತರ್, ತುಮಿ ಝಿತ್ತೆ ರ್‍ಹಾತ್ಯಾಶಿ. 14 ಜೆ ಕೊನಾಕ್ ದೆವಾಚೊ ಆತ್ಮೊ ಚಾಲ್ವುನ್ ನ್ಹೆತಾ. ತೆನಿ ದೆವಾಚಿ ಪೊರಾ. 15 ಕಶ್ಯಾಕ್ ಮಟ್ಲ್ಯಾರ್ ಜೊ ಆತ್ಮೊ ದೆವಾನ್ ತುಮ್ಕಾ ದಿಲ್ಯಾನಾಯ್ ತೊ ತುಮ್ಕಾ ಗುಲಾಮ್ ಕರುಕ್ ನಾಹೊಲ್ಯಾರ್ ಭಿಂವ್ಕ್ ಕಾರನ್ ಹೊಯ್ನಾ; ಹೆಚ್ಯಾ ಬದ್ಲಾಕ್, ತೊ ಆತ್ಮೊ ತುಮ್ಕಾ ದೆವಾಚಿ ಪೊರಾ ಕರ್‍ತಾ, ಅನಿ ತ್ಯಾಚ್ ಪವಿತ್ರ್ ಆತ್ಮ್ಯಾಚ್ಯಾ ಬಳಾನ್, ಅಮಿ ದೆವಾಕ್ "ಬಾಬಾ! ಮಾಜ್ಯಾ ಬಾಬಾ!" ಮನುನ್ ಬಲ್ವುತಾಂವ್. 16 ದೆವಾಚೊ ಆತ್ಮೊ ಅಮ್ಚ್ಯಾ ಅತ್ಮ್ಯಾಂಚ್ಯಾ ವಾಂಗ್ಡಾ ಮಿಳ್ತಾ ಅನಿ ಅಮಿ ದೆವಾಚಿ ಪೊರಾಚ್ ಮನುನ್ ಸಾಕ್ಷಿ ದಿತಾ. 17 ಅಮಿ ತೆಚಿ ಪೊರಾ ಹೊಯ್ ಹೊಲ್ಯಾರ್, ತೆನಿ ಅಪ್ನಾಚ್ಯಾ ಲೊಕಾಕ್ನಿ ಮನುನ್ ಥವಲ್ಲ್ಯಾ ಆಶಿರ್ವಾದಾಚ್ಯಾ ಆಸ್ತಿಚೆ ವಾರಿಸ್ದಾರಿಬಿ ಹೊತಾಂವ್, ಕಶ್ಯಾಕ್ ಮಟ್ಲ್ಯಾರ್ ಅಮಿ ಕ್ರಿಸ್ತಾಚ್ಯಾ ಕಸ್ಟಾತ್ನಿ ಭಾಗ್ ಘೆಟ್ಲಾಂವ್ ತರ್ ತೆಚ್ಯಾ ಮಹಿಮೆತ್‍ಬಿ ಭಾಗ್ ಘೆತಾಂವ್.

  2. IRVKAN Indian Revised Version (IRV) - Kannada - 2019

    12 ಹೀಗಿರಲಾಗಿ ಸಹೋದರರೇ, ನಾವು ಹಂಗಿನಲ್ಲಿದ್ದೇವೆ; ಆದರೆ ಪವಿತ್ರಾತ್ಮನ್ನನುಸರಿಸಿ ನಡೆಯುವ ಹಂಗಿನಲ್ಲಿದ್ದೇವೆಯೇ ಹೊರತು 8:12 ರೋಮಾ. 8:2ಶರೀರಭಾವವನ್ನು ಅನುಸರಿಸಿ ಬದುಕಬೇಕೆಂಬ ಹಂಗಿನಲಿಲ್ಲ. 13 ನೀವು ಶರೀರಭಾವವನ್ನು ಅನುಸರಿಸಿ ಬದುಕಿದರೆ ಸಾಯುವುದು ನಿಶ್ಚಯ; ನೀವು ಪವಿತ್ರಾತ್ಮನಿಂದ 8:13 ಕೊಲೊ 3:5ದೇಹದ ದುರಭ್ಯಾಸಗಳನ್ನು ನಾಶ ಮಾಡುವುದಾದರೆ ಜೀವಿಸುವಿರಿ. 14 ಯಾರು 8:14 ಗಲಾ. 5:18ದೇವರ ಆತ್ಮಾನುಸಾರವಾಗಿ ನಡೆದುಕೊಳ್ಳುತ್ತಾರೋ, ಅವರು 8:14 ರೋಮಾ. 8:16,19; 9:8,26; ಯೋಹಾ 1:12; 1 ಯೋಹಾ 3:1ದೇವರ ಮಕ್ಕಳಾಗಿದ್ದಾರೆ. 15 ನೀವು ತಿರುಗಿ ಭಯದಲ್ಲಿ ಬೀಳುವ ಹಾಗೆ 8:15 2 ತಿಮೊ. 1:7; 1 ಯೋಹಾ 4:18ದಾಸತ್ವದ ಆತ್ಮನನ್ನು ಹೊಂದಿದವರಲ್ಲ. ಅದರ ಬದಲಾಗಿ, ನಿಮ್ಮವು 8:15 ರೋಮಾ. 8:23; ಗಲಾ. 4:5 ದೇವರನ್ನು, 8:15 ಗಲಾ. 4:6; ಮಾರ್ಕ 14:36"ಅಪ್ಪಾ, ತಂದೆಯೇ," ಎಂದು ಕರೆಯುವ ಮಕ್ಕಳ ಆತ್ಮವನ್ನು ಹೊಂದಿದ್ದೀರಿ. 16 ನಾವು ದೇವರ ಮಕ್ಕಳಾಗಿದ್ದೇವೆಂಬುದಕ್ಕೆ 8:16 2 ಕೊರಿ 1:22; 5:5; ಎಫೆ 1:13,14; 1 ಯೋಹಾ 3:24ಪವಿತ್ರಾತ್ಮನೇ ನಮ್ಮ ಆತ್ಮದೊಂದಿಗೆ ಸಾಕ್ಷಿ ಹೇಳುತ್ತಾನೆ. 17 ಮಕ್ಕಳಾಗಿದ್ದರೆ 8:17 ಗಲಾ. 3:29; 4:7; ತೀತ 3:7ಬಾಧ್ಯಸ್ಥರೂ ಆಗಿದ್ದೇವೆ; ದೇವರಿಗೆ ಬಾಧ್ಯಸ್ಥರೂ ಹಾಗೂ ಕ್ರಿಸ್ತನೊಂದಿಗೆ ಸಹಾ ಬಾಧ್ಯರು ಆಗಿದ್ದೇವೆ. ಹೇಗೆಂದರೆ 8:17 2 ಕೊರಿ 1:7; 2 ತಿಮೊ. 2:12; ಅ. ಕೃ. 14:22ಕ್ರಿಸ್ತನ ಕಷ್ಟಗಳಲ್ಲಿ ನಾವು ಪಾಲುಗಾರರಾಗುವುದಾದರೆ ಆತನ ಮಹಿಮೆಯಲ್ಲಿಯೂ ಪಾಲುಗಾರರಾಗುವೆವು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.