20 ಸೃಷ್ಟಿಯು ನಾಶಕ್ಕೆ ಒಳಗಾಯಿತು. ಆದರೆ ಸ್ವಂತ ಇಚ್ಛೆಯಿಂದಲ್ಲ. ಅದನ್ನು ನಿರೀಕ್ಷೆಯಿಂದ ಒಳಪಡಿಸಿದ ದೇವರಿಂದಲೇ ಆಯಿತು. ಆದರೂ ಸೃಷ್ಟಿಗೂ ನಿರೀಕ್ಷೆಯಿದೆ. 21 ಈ ಸೃಷ್ಟಿಯು ಕೂಡ ನಾಶದ ಬಂಧನದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮೆಯುಳ್ಳ ಸ್ವಾತಂತ್ರ್ಯದಲ್ಲಿ ಪಾಲುಗೊಳ್ಳುತ್ತದೆ.
22 ಈವರೆಗೂ ಸೃಷ್ಟಿಯೆಲ್ಲ ಪ್ರಸವ ವೇದನೆಯಂಥ ನೋವಿನಿಂದ ನರಳುತ್ತಿದೆ ಎಂದು ನಾವು ಬಲ್ಲೆವು.