Pular para o conteúdo
Publicidade

ರೂತಳು 4:13-22

ನೊವೊಮಿ ಒಬ್ಬ ಮಗನನ್ನು ಪಡೆದದ್ದು

13 ಬೋವಜನು ರೂತಳನ್ನು ಮದುವೆಯಾದನು. ಅವಳು ಅವನಿಗೆ ಹೆಂಡತಿಯಾದಳು. ಅವನು ಅವಳೊಂದಿಗೆ ಬಾಳಿದಾಗ, ರೂತಳು ಯೆಹೋವ ದೇವರ ಅನುಗ್ರಹದಿಂದ ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆತ್ತಳು. 14 ಆಗ ಸ್ತ್ರೀಯರು ನೊವೊಮಿಗೆ, "ಇಸ್ರಾಯೇಲಿನಲ್ಲಿ ವಿಮೋಚಿಸತಕ್ಕ ಬಾಧ್ಯಸ್ಥನನ್ನು ನಿನಗೆ ಅನುಗ್ರಹಿಸಿದ ಯೆಹೋವ ದೇವರಿಗೆ ಸ್ತೋತ್ರವಾಗಲಿ. ಈ ಮಗನು ಪ್ರಖ್ಯಾತನಾಗಲಿ. 15 ಅವನು ನಿನಗೆ ಪ್ರಾಣವನ್ನು ಪುನರುಜ್ಜೀವಿಸುವವನಾಗಿಯೂ ನಿನ್ನ ವೃದ್ಧ ವಯಸ್ಸಿನಲ್ಲಿ ಸಂರಕ್ಷಿಸುವವನಾಗಿಯೂ ಇರುವನು. ಏಕೆಂದರೆ ನಿನ್ನನ್ನು ಪ್ರೀತಿ ಮಾಡುವ ಏಳುಮಂದಿ ಮಕ್ಕಳಿಗಿಂತ ನಿನಗೆ ಉತ್ತಮಳಾಗಿರುವ ನಿನ್ನ ಸೊಸೆಯು ಅವನನ್ನು ಹೆತ್ತಳು," ಎಂದರು.

16 ನೊವೊಮಿಯು ಆ ಮಗುವನ್ನು ಎತ್ತಿ ತನ್ನ ಉಡಿಲಲ್ಲಿ ಇಟ್ಟುಕೊಂಡು ಅದಕ್ಕೆ ದಾದಿಯಾದಳು. 17 ಆಗ ನೆರೆಹೊರೆಯ ಸ್ತ್ರೀಯರು ನೊವೊಮಿಗೆ, "ಒಬ್ಬ ಮಗನು ಹುಟ್ಟಿದ್ದಾನೆ," ಎಂದು ಹೇಳಿ ಅವನಿಗೆ ಓಬೇದನೆಂದು ಹೆಸರಿಟ್ಟರು. ಇವನೇ ದಾವೀದನ ತಂದೆಯಾದ ಇಷಯನಿಗೆ ತಂದೆಯಾದವನು.

ದಾವೀದನ ವಂಶಾವಳಿ

18 ಪೆರೆಚನ ಸಂತತಿಯ ವಿವರ:

ಪೆರೆಚನು ಹೆಚ್ರೋನನ ತಂದೆಯಾಗಿದ್ದನು;

19 ಹೆಚ್ರೋನನು ರಾಮನ ತಂದೆಯಾಗಿದ್ದನು;

ರಾಮನು ಅಮ್ಮೀನಾದಾಬನ ತಂದೆಯಾಗಿದ್ದನು;

20 ಅಮ್ಮೀನಾದಾಬನು ನಹಶೋನನ ತಂದೆಯಾಗಿದ್ದನು;

ನಹಶೋನನು ಸಲ್ಮೋನನ ತಂದೆಯಾಗಿದ್ದನು;

21 ಸಲ್ಮೋನನು ಬೋವಜನ ತಂದೆಯಾಗಿದ್ದನು;

ಬೋವಜನು ಓಬೇದನ ತಂದೆಯಾಗಿದ್ದನು;

22 ಓಬೇದನು ಇಷಯನ ತಂದೆಯಾಗಿದ್ದನು;

ಇಷಯನು ದಾವೀದನ ತಂದೆಯಾಗಿದ್ದನು.

Estes versículos te tocaram? Ore agora!

+581 estão orando agora.

Junte-se à corrente de oração.

Rute
Ver todos os capítulos de Rute