11 ಏಕೆಂದರೆ ಎಲ್ಲಾ ಮನುಷ್ಯರಿಗೆ ರಕ್ಷಣೆಯನ್ನು ತರುವ ದೇವರ ಕೃಪೆಯೂ ಪ್ರತ್ಯಕ್ಷವಾಯಿತು. 12 ನಾವು ಭಕ್ತಿಹೀನತೆಯನ್ನೂ ಲೋಕದ ಆಶೆಗಳನ್ನೂ ತೊರೆದು, ಈಗಿನ ಲೋಕದಲ್ಲಿ ಸ್ವಶಿಸ್ತನ್ನು ಹೊಂದಿದವವರಾಗಿಯೂ ನೀತಿವಂತರಾಗಿಯೂ ಭಕ್ತಿಯುಳ್ಳವರಾಗಿಯೂ ಬದುಕಬೇಕೆಂತಲೂ ದೇವರ ಕೃಪೆಯು ನಮಗೆ ಬೋಧಿಸುತ್ತದೆ. 13 ನಮಗೆ ರಕ್ಷಕರೂ ಮಹಾ ದೇವರೂ ಆಗಿರುವ ಕ್ರಿಸ್ತ ಯೇಸುವಿನ ಭಾಗ್ಯಕರವಾದ ಮಹಿಮೆಯ ಪ್ರತ್ಯಕ್ಷತೆಯ ನಿರೀಕ್ಷೆಯನ್ನೂ ಎದುರು ನೋಡುತ್ತಿರಬೇಕೆಂದು ಕೃಪೆಯು ನಮಗೆ ಬೋಧಿಸುತ್ತದೆ.