ದೆವಾಚ್ಯಾ ತಾಂಡ್ಯಾತ್ನಿ ವೆಭಿಚಾರ್
1 ತುಮ್ಚ್ಯಾ ಮದ್ದಿ ವೆಭಿಚಾರ್ ಚಾಲು ಹೊಲಾ ಮನುನ್ ಮಾಜ್ಯಾ ಕಾನಾತ್ ಪಡ್ಲಾ; ತಸ್ಲೊ ವೆಭಿಚಾರ್ ವಿಶ್ವಾಸಾತ್ ನಸಲ್ಲ್ಯಾ ಲೊಕಾತ್ನಿ ಸೈತ್ ಗಾವಿ ಸರ್ಕೊ ನಾ; ಎಕ್ಲೊ ಅಪ್ನಾಚ್ಯಾ ಬಾಬಾಚ್ಯಾ ದೊನ್ವೆಚ್ಯಾ ಬಾಯ್ಕೊಚ್ಯಾ ವಾಂಗ್ಡಾ ನಿಜ್ತಾ! 2 ಜಾಲ್ಯಾರ್ಬಿ ತುಮಿ ಮೊಟ್ಯಾ ಪಾನಾತುಚ್ ಹಾಸಿ! ತುಮಿ ತ್ಯಾ ವಿಶಯಾತ್ ಬೆಜಾರ್ ಹೊವ್ನ್, ತಸ್ಲೆ ಕಾಮ್ ಕರ್ತಲ್ಯಾಕ್ ತುಮ್ಚ್ಯಾತ್ನಾ ಭಾಯ್ರ್ ಘಾಲುಚೆ ಹೊತ್ತೆ?