Pular para o conteúdo
Publicidade

ಜು.ದರ್ಶನಾ 13:1,4,16-18

SII25 Bíblia Siddi

ದೊನ್ ಭಯಾನಕ್ ಜನಾವರಾ

1 ತನ್ನಾ ಸಮುಂದರಾತ್ನಾ ಎಕ್ ಭಯಾನಕ್ ಜನಾವರ್ ಭಾಯ್ರ್ ಯೆತಲೆ ಮಿಯಾ ಬಗಟ್ಲೊ. ತೆಕಾ ಧಾ ಶಿಂಗಾ ಅನಿ ಸಾತ್ ಟಕ್ಲಿ ಹೊತ್ತಿ ; ತ್ಯೆಚ್ಯಾ ಹರಿಎಕ್ ಶಿಂಗಾ ವರ್ತಿ ಎಕೆಕ್ ಮುಕುಟ್ ಹೊತ್ತೆ, ಅನಿ ತ್ಯೆಚ್ಯಾ ಹರಿಎಕ್ ಟಕ್ಲ್ಯಾ ವರ್ತಿ ಎಕೆಕ್ ನಾವ್ ಹೊತ್ತೆ ತಿ ನಾವಾ ದೆವಾಕ್ ಅವ್ಮಾನ್ ಕರಿತ್. 4 ಸಗ್ಳೆಜಾನಾನಿ ಭಯಾನಕ್ ಸಾಪಾಚೆ ಆರಾದಾನ್ ಕರ್ಲ್ಯಾನಿ, ಕಶ್ಯಾಕ್ ಮಟ್ಲ್ಯಾರ್ ತೆನಿ ಅಪ್ನಾಚೊ ಸಗ್ಳೊ ಅದಿಕಾರ್ ತ್ಯಾ ಭಯಾನಕ್ ಸಾಪ್ ದಿಲ್ಲ್ಯಾನ್. ತೆನಿ, ಹ್ಯಾ ಭಯಾನಕ್ ಸಾಪ್ ಸರ್ಕೆ ಕೊನ್ ಹಾಯ್? ಹೆಚ್ಯಾ ವಾಂಗ್ಡಾ ಕುಸ್ತಿ ಧರುನ್ ಕೊನಾಕ್ ಹೊತಾ? ಮನುನ್ಗೆತ್ ಭಯಾನಕ್ ಸಾಪ್‍ಬಿ ಆರಾದನ್ ಕರ್ಲ್ಯಾನಿ.

16 ತ್ಯಾ ಭಯಾನಕ್ ಸಾಪಾ ಸಗ್ಳ್ಯಾ ಲೊಕಾಕ್ನಿ ಬಾರಿಕ್ಲ್ಯಾಕ್ನಿ ಅನಿ ಮೊಟ್ಯಾಕ್ನಿ, ಸಾವ್ಕಾರಾಕ್ನಿ ಅನಿ ಗರಿಬಾಕ್ನಿ, ಗುಲಾಮಾಕ್ನಿ ಅನಿ ಸ್ವತಂತ್ರ್ ಹೊತ್ತ್ಯಾಕ್ನಿ, ತೆಂಚ್ಯಾ- ತೆಂಚ್ಯಾ ಉಜ್ವ್ಯಾ ಹಾತಿ ವರ್ತಿ ನಾಹೊಲ್ಯಾರ್ ಕಪಾಳಾ ವರ್ತಿ ಎಕ್ ವಳಕ್ ಕರುನ್ ಘೆವ್ಚಿ ಮನುನ್ ಜಬರ್ದಸ್ತಿ ಕರ್ಲ್ಯಾನ್. 17 ಕೊನ್‍ಬಿ ಹಿ ವಳಕ್ ನಸ್ತಾನಾ ಇಕಾತ್ ಘೆವ್ ನ್ಹಯ್ ನಾಹೊಲ್ಯಾರ್ ಇಕಾತ್ ದಿವ್ಚೆ ನ್ಹಯ್, ತ್ಯಾ ಭಯಾನಕ್ ಸಾಪಾಚೆ ನಾಂವ್ ತೆ, ನಾ ಹೊಲ್ಯಾರ್ ಭಯಾನಕ್ ಸಾಪಾಚ್ಯಾ ನಾವಾಸಾಟ್ನಿ ಮನುನ್ ಹೊತ್ತೆ ಆಂಕೆ ತೆ.

18 ಶಾನೊ ಹೊತ್ತೊ ತೆ ಕಳ್ವುನ್ ಘೆಂವ್ದಿತ್, ಅನಿ ಬುದ್ದ್ ಹೊತ್ತೊ ತ್ಯಾ ಭಯಾನಕ್ ಸಾಪಾಚೆ ಅಂಕೆ ಮೆಜುಂದಿ. ತೆ ಎಕ್ ಮಾನ್ಸಾಚೆ ನಾಂವ್ ದಾಕ್ವುನ್ ದಿತಾ. ತೆ ಅಂಕೆ ಸಾಸೆ ಸಾಟಾರ್ ಸಾ. 666.

Em outras traduções

  1. IRVKAN Indian Revised Version (IRV) - Kannada - 2019

    1 13:1 ದಾನಿ. 7:2-8: ಸಮುದ್ರದಿಂದ ಒಂದು ಮೃಗವು ಏರಿಬರುವುದನ್ನು ಕಂಡೆನು. 13:1 ಪ್ರಕ 12:3:ಅದಕ್ಕೆ ಏಳು ತಲೆಗಳೂ, ಹತ್ತು ಕೊಂಬುಗಳೂ, ಕೊಂಬುಗಳ ಮೇಲೆ ಹತ್ತು ಕಿರೀಟಗಳೂ, ಹಣೆಗಳ ಮೇಲೆ 13:1 ಪ್ರಕ 17:3:ದೇವದೂಷಣೆಯ ನಾಮಗಳೂ ಇದ್ದವು. 4 ಘಟಸರ್ಪನು ಆ ಮೃಗಕ್ಕೆ ಅಧಿಕಾರವನ್ನು ಕೊಟ್ಟವನಾದ್ದರಿಂದ ಅವರು ಆ ಘಟಸರ್ಪನಿಗೆ ಆರಾಧನೆ ಮಾಡಿದರು. ಇದಲ್ಲದೆ ಆ ಮೃಗಕ್ಕೂ ಆರಾಧನೆ ಮಾಡಿ, 13:4 ಪ್ರಕ 18:18:"ಈ ಮೃಗಕ್ಕೆ ಸಮಾನರು ಯಾರು? ಇದರ ವಿರುದ್ಧ ಯುದ್ಧ ಮಾಡುವುದಕ್ಕೆ ಯಾರು ಶಕ್ತರು?" ಎಂದರು.

    16 ಈ ಎರಡನೆಯ ಮೃಗವು, ದೊಡ್ಡವರು, ಚಿಕ್ಕವರು, ಐಶ್ವರ್ಯವಂತರು, ಬಡವರು, ಸ್ವತಂತ್ರರು, ದಾಸರು ಎಲ್ಲರೂ 13:16 ಪ್ರಕ 7:3; ಗಲಾ. 6:17:ತಮ್ಮತಮ್ಮ ಬಲಗೈಯ ಮೇಲಾಗಲಿ, ಹಣೆಯ ಮೇಲಾಗಲಿ ಗುರುತನ್ನು ಹೊಂದಬೇಕೆಂದು ಒತ್ತಾಯ ಮಾಡಿತ್ತು. 17 ಆ ಗುರುತು ಯಾರಿಗಿಲ್ಲವೋ ಅವರು ಕ್ರಯ ವಿಕ್ರಯಗಳನ್ನು ನಡೆಸಲು ಸಾಧ್ಯವಿರಲಿಲ್ಲ. ಆ ಗುರುತು ಯಾವುದೆಂದರೆ 13:17 ಪ್ರಕ 14:11:ಮೊದಲನೆಯ ಮೃಗದ ಹೆಸರು ಅಥವಾ 13:17 ಪ್ರಕ 15:2:ಅದರ ಹೆಸರನ್ನು ಸೂಚಿಸುವ ಸಂಖ್ಯೆ.

    18 13:18 ಪ್ರಕ 17, 9: ಇದನ್ನು ಗ್ರಹಿಸಲು ಜ್ಞಾನವು ಅಗತ್ಯವಾಗಿದೆ. ಬುದ್ಧಿವಂತನು ಆ ಮೃಗದ ಸಂಖ್ಯೆಯನ್ನು ಎಣಿಸಲಿ, ಅದು ಒಬ್ಬ ಮನುಷ್ಯನನ್ನು ಸೂಚಿಸುವ ಸಂಖ್ಯೆಯಾಗಿದೆ. ಅದರ ಸಂಖ್ಯೆಯು 666.

  2. OKCV Kannada Contemporary Version

    1 ಘಟಸರ್ಪವು ಸಮುದ್ರತೀರದ ಮರಳಿನ ಮೇಲೆ ನಿಂತನು. ಸಮುದ್ರದೊಳಗೆ ಒಂದು ಮೃಗವು ಏರಿಬರುವುದನ್ನು ಕಂಡೆನು. ಅದಕ್ಕೆ ಹತ್ತು ಕೊಂಬುಗಳೂ ಏಳು ತಲೆಗಳೂ ಕೊಂಬುಗಳ ಮೇಲೆ ಹತ್ತು ಮುಕುಟಗಳೂ ತಲೆಗಳ ಮೇಲೆ ದೇವದೂಷಣೆಯ ನಾಮಗಳೂ ಇದ್ದವು. 4 ಜನರು ಘಟಸರ್ಪನು ಆ ಮೃಗಕ್ಕೆ ಅಧಿಕಾರವನ್ನು ಕೊಟ್ಟಿದ್ದರಿಂದ, ಆ ಘಟಸರ್ಪನನ್ನು ಆರಾಧಿಸಿದರು. ಇದಲ್ಲದೆ ಆ ಮೃಗವನ್ನೂ ಆರಾಧಿಸಿ, "ಈ ಮೃಗಕ್ಕೆ ಸಮಾನರು ಯಾರು? ಇದರೊಡನೆ ಯುದ್ಧಮಾಡಬಲ್ಲವರು ಯಾರು?" ಎಂದರು.

    16 ಅದು ಚಿಕ್ಕವರು, ದೊಡ್ಡವರು, ಐಶ್ವರ್ಯವಂತರು, ಬಡವರು, ಸ್ವತಂತ್ರರು, ಗುಲಾಮರು, ಎಲ್ಲರೂ ತಮ್ಮ ತಮ್ಮ ಬಲಗೈಯ ಮೇಲಾಗಲಿ, ಹಣೆಯ ಮೇಲಾಗಲಿ ಗುರುತು ಹೊಂದಬೇಕೆಂದೂ 17 ಆ ಗುರುತಾಗಲಿ, ಮೃಗದ ಹೆಸರಾಗಲಿ, ಅದರ ಹೆಸರಿನ ಸಂಖ್ಯೆಯಾಗಲಿ ಇಲ್ಲದವನು ಕ್ರಯ ವಿಕ್ರಯಗಳನ್ನು ಮಾಡದಂತೆಯೂ ಅದು ಮಾಡುವುದು.

    18 ಇದರಲ್ಲಿ ಜ್ಞಾನವಿದೆ. ಬುದ್ಧಿಯುಳ್ಳವನು ಆ ಮೃಗದ ಸಂಖ್ಯೆಯನ್ನು ಎಣಿಸಲಿ, ಅದು ಒಬ್ಬ ಮನುಷ್ಯನ ಸಂಖ್ಯೆಯಾಗಿದೆ. ಅವನ ಸಂಖ್ಯೆಯು 666.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.