Pular para o conteúdo
Publicidade

ಎಫೆಜ್ 4:26,27,29,31,32

SII25 Bíblia Siddi

26 ರಾಗ್ ಕಲ್ಯಾರ್ಬಿ ಪಾಪ್ ಕರುನಕಾಸಿ, ಅನಿ ಪುರಾ ದಿಸ್ ರಾಗಾನುಚ್ ರಾವ್ನಕಾಸಿ. 27 ಗಿರ್ಯಾಕ್ ಅವಕಾಸ್ ದಿವ್ ನಕಾಸಿ. 29 ತುಮ್ಚ್ಯಾ ತೊಂಡಾತ್ನಾ ಬುರ್ಶಿ ಗೊಸ್ಟಿಯಾ ಯೆಯ್ ನಸ್ತಾನಾ ರ್‍ಹಾಂವ್ದಿತ್, ಖರೆ ಎಕ್ವಟ್ಟ್ ಭಾಂದುಕ್ ಅನಿ ಬರ್‍ಯಾಚಿ ಗೊಸ್ಟಿಯಾ ರಾಲ್ಯಾರ್ ಆಯಿಕ್ತಲ್ಯಾಂಚ್ಯಾ ಬರ್‍ಯಾಸಾಟಿ ಬೊಲಾ. 31 ಸಗ್ಳೆ ಕುಶ್ಡೆಪಾನ್, ರಾಗ್ ಖುದ್ಗೆಪಾನ್, ಝಗ್ಡೆ, ಗಾಳ್ಯಿಯಾ ಹೆ ಸಗ್ಳ್ಯಾ ನಮನಿಚೆ ಬುರ್ಶೆಪಾನ್ ತುಮ್ಚ್ಯಾಕ್ನಾ ಧುರ್ ಕರಾ. 32 ಎಕಾಮೆಕಾಕ್ ಕಾಳ್ಜಿ ದಾಕ್ವಾ , ಎಕಾಮೆಕಾಚೊ ಪ್ರೆಮ್ ಕರಾ, ದೆವಾನ್ ಕ್ರಿಸ್ತಾಕ್ನಾ ತುಮ್ಕಾ ಮಾಪಿ ಕರಲೆ ಸಾರ್ಕೆ ತುಮಿಬಿ ಎಕಾಮೆಕಾಕ್ ಮಾಪಿ ಕರಾ.

Em outras traduções

  1. IRVKAN Indian Revised Version (IRV) - Kannada - 2019

    26 4:26 ಕೀರ್ತ 4:4."ಕೋಪಗೊಳ್ಳಬೇಕಾಗಿ ಬಂದರೂ ಪಾಪಮಾಡಬೇಡಿರಿ," ಸೂರ್ಯನು ಮುಳುಗುವುದಕ್ಕಿಂತ ಮೊದಲೇ ನಿಮ್ಮ ಸಿಟ್ಟು ತೀರಿಹೋಗಲಿ. 27 4:27 ಯಾಕೋಬ. 4:7:ಸೈತಾನನಿಗೆ ಅವಕಾಶಕೊಡಬೇಡಿರಿ. 29 4:29 ಎಫೆ 5:4; ಕೊಲೊ 3:8; ಮತ್ತಾ 12:34:ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತು ಹೊರಡಬಾರದು. ಭಕ್ತಿಯನ್ನು ವೃದ್ಧಿ ಮಾಡುವಂತಹ ಸಮಯೋಚಿತವಾದ ಮಾತನ್ನು ಆಡಿದರೆ 4:29 ಕೊಲೊ 4:6:ಕೇಳುವವರಿಗೆ ಹಿತವಾಗಿ ತೋರುವುದು. 31 4:31 ಕೊಲೊ 3:8:ಎಲ್ಲಾ ದ್ವೇಷ, ಕೋಪ, ಕ್ರೋಧ, ಕಲಹ, ದೂಷಣೆ ಇವುಗಳನ್ನೂ ಸಕಲ ವಿಧವಾದ ದುಷ್ಟತನಗಳನ್ನೂ ನಿಮ್ಮಿಂದ ದೂರ ಮಾಡಿರಿ. 32 4:32 ಕೊಲೊ 3:12,3; 1 ಪೇತ್ರ. 3:8:ಒಬ್ಬರಿಗೊಬ್ಬರು ದಯೆಯುಳ್ಳವರಾಗಿಯೂ, ಕರುಣೆಯುಳ್ಳವರಾಗಿಯೂ ಇರಿ. ದೇವರು ನಿಮ್ಮನ್ನು ಕ್ರಿಸ್ತನಲ್ಲಿ ಕ್ಷಮಿಸಿದಂತೆ ನೀವು ಒಬ್ಬರನ್ನೊಬ್ಬರು 4:32 2 ಕೊರಿ 2:7,10; ಮತ್ತಾ 6:14:ಕ್ಷಮಿಸಿರಿ.

  2. OKCV Kannada Contemporary Version

    26 "ಕೋಪ ಮಾಡಬೇಕಾಗಿ ಬಂದರೂ ಪಾಪಮಾಡಬೇಡಿರಿ,"4:26 ಕೀರ್ತನೆ 4:4 ಸೂರ್ಯನು ಮುಳುಗುವುದಕ್ಕಿಂತ ಮುಂಚೆ ನಿಮ್ಮ ಕೋಪವು ಇಳಿಯಲಿ. 27 ಹೀಗೆ ನೀವು ಸೈತಾನನಿಗೆ ಅವಕಾಶಕೊಡಬೇಡಿರಿ.

    29 ನಿಮ್ಮ ಬಾಯೊಳಗಿಂದ ಯಾವ ಕೆಟ್ಟಮಾತೂ ಹೊರಡದಿರಲಿ. ಕೇಳುವವರಿಗೆ ಆತ್ಮಿಕ ಹಿತವನ್ನುಂಟು ಮಾಡಿ, ಇತರರಿಗೆ ಅವಶ್ಯವಿರುವ ಮಾತುಗಳನ್ನು ಮಾತ್ರ ಆಡಿರಿ. 31 ಎಲ್ಲಾ ಕಹಿತನ, ಕೋಪ, ಕ್ರೋಧ, ಕಲಹ, ದೂಷಣೆ ಇವುಗಳನ್ನೂ ಎಲ್ಲಾ ದುಷ್ಟತನವನ್ನೂ ನಿಮ್ಮಿಂದ ದೂರಮಾಡಿರಿ. 32 ನೀವು ದಯೆಯುಳ್ಳವರೂ ಮೃದು ಹೃದಯುಳ್ಳವರೂ ಆಗಿದ್ದು, ದೇವರು ಕ್ರಿಸ್ತನಲ್ಲಿ ನಿಮ್ಮನ್ನು ಕ್ಷಮಿಸಿದಂತೆಯೇ ನೀವು ಸಹ ಒಬ್ಬರೊನ್ನಬ್ಬರನ್ನು ಕ್ಷಮಿಸಿರಿ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.