Pular para o conteúdo
Publicidade

ಗಾಲಾತ್ 4:21-26

SII25 Bíblia Siddi

ಹಾಗಾರಾಚೆ ಅನಿ ಸಾರಾಚೆ ಉದಾರನ್

21 ಮೊಯ್ಜೆಚ್ಯಾ ಖಾಯ್ದ್ಯಾಂಚ್ಯಾ ಖಾಯ್ಲ್ ಹೊವ್ನ್ ಚಲ್ತಲ್ಯಾನು, ಮಿಯಾ ತುಮ್ಕಾ ಇಚಾರ್ತಾ, ಖಾಯ್ದೊ ಕಾಯ್ ಸಾಂಗ್ತಾ ಮನ್ತಲೆ ತುಮ್ಕಾ ಗೊತ್ತ್ ಹಾಯ್ ಕಾಯ್? 22 ಕಶ್ಯಾಕ್ ಮಟ್ಲ್ಯಾರ್ ಪವಿತ್ರ್ ಪುಸ್ತಕಾತ್ ಲಿವಲ್ಲೆ ಹಾಯ್, ಅಬ್ರಾಹಾಮಾಕ್ ದೊನ್ ಲೆಕಾ, ಗುಲಾಮ್ ಬಾಯ್ಕೊಮನ್ಸಿಚೊ ಲೆಕ್ ಅನಿ ಎಕ್ ಸ್ವತಂತ್ರ್ ಬಾಯ್ಕೊಮನ್ಸಿಚೊ ಲೆಕ್. 23 ಗುಲಾಮ್ ಬಾಯ್ಕೊಮನ್ಸಿಕ್ ಜಲ್ಮಲ್ಲೊ ಲೆಕ್ ಸ್ವಾಭಾವಿಕ್ ರಿತಿನ್ ಜಲಮ್ಲೊ, ಖರೆ ತೆಚೊ ಸ್ವತಂತ್ರ್ ಬಾಯ್ಕೊಮನ್ಸಿಕ್ನಾ ಜಲಮಲ್ಲೊ ಲೆಕ್ ದೆವಾನ್ ದಿಲ್ಲ್ಯಾ ಗೊಸ್ಟಿಚೊ ಪ್ರತಿಫಳ್ ಹೊಲ್ಲೊ. 24 ಹಿ ಸಂಗ್ತಿಯಾ ಪ್ರತಿ ರುಪಾಚ್ಯಾ ರಿತಿನ್ ಕಳ್ವುನ್ ಘೆವ್ಕ್ ಹೊತಾ: ದೊನ್‍ ಬಾಯ್ಕೊಮಾನ್ಸಾ ದೊನ್ ಕರಾರಾ ದಾಕ್ವುನ್ ದಿತ್ಯಾತ್, ಜೆ ಕೊನಾಚಿ ಪೊರಾ ಗುಲಾಮಪಾನಾತ್ ಜಲಮ್ಲಾತ್ ತಿ ಹಾಗಾರಾ ಅನಿ ತಿ ಸಿನಾಯ್ ಮಡ್ಡಿ ವರ್‍ತಿ ಕರಲ್ಲೊ ಕರಾರ್ ದಾಕ್ವುನ್ ದಿತಾ. 25 ತಸೆ ಹೊವ್ನ್ ಹಾಗಾರಾ ಅರೆಬಿಯಾತ್ಲ್ಯಾ ಸಿನಾಯ್ ಮಡ್ಡಿ ಸಾರ್ಕಿ ಹಾಯ್, ಜುದೆವಾಂಚೆ ಶಾರ್ ಹೊವ್ನ್ ಹೊತ್ತ್ಯಾ ಜರುಜಲೆಮಾಕ್, ಅತ್ತಾಚ್ಯಾ ಜೆರುಜಲೆಮ್ ಶಾರಾಚಿ ಪ್ರತಿರುಪ್ ಹೊವ್ನ್ ಹಾಯ್, ಕಶ್ಯಾಕ್ ಮಟ್ಲ್ಯಾರ್, ತೆ ಅಪ್ಲ್ಯಾ ಸಗ್ಳ್ಯಾ ಲೊಕಾಂಚ್ಯಾ ವಾಂಗ್ಡಾ ಗುಲಾಮ್ಗಿರಿತ್ ಹಾಯ್. 26 ಖರೆ ಸರ್ಗಾತ್ಲೆ ಜೆರುಜಲೆಮ್ ಸ್ವತಂತ್ರ್ ಹೊಲ್ಲ್ಯಾ ಬಾಯ್ಕೊಮಾನ್ಸಿ ಸರ್ಕೆ ಹಾಯ್, ತಿಚ್ ಅಮ್ಚಿ ಬಾಯ್.

Em outras traduções

  1. IRVKAN Indian Revised Version (IRV) - Kannada - 2019

    21 ಧರ್ಮಶಾಸ್ತ್ರಕ್ಕೆ ಅಧೀನರಾಗಿರುವುದಕ್ಕೆ ಬಯಸುವವರೇ, ಧರ್ಮಶಾಸ್ತ್ರವು ಏನು ಹೇಳುತ್ತದೆಂದು ನಿಮಗೆ ತಿಳಿದಿಲ್ಲವೋ? ನನಗೆ ತಿಳಿಯಪಡಿಸಿರಿ. 22 ಅದರಲ್ಲಿ ಬರೆದಿರುವುದೇನಂದರೆ, ಅಬ್ರಹಾಮನಿಗೆ ಇಬ್ಬರು ಮಕ್ಕಳಿದ್ದರು. 4:22 ಆದಿ 16:5,15ಒಬ್ಬನು ದಾಸಿಯಲ್ಲಿ ಹುಟ್ಟಿದವನು, 4:22 ಆದಿ 21:2ಮತ್ತೊಬ್ಬನು ಸ್ವತಂತ್ರಳಾದವಳಲ್ಲಿ ಹುಟ್ಟಿದವನು. 23 4:23 ರೋಮಾ. 9:7-8ದಾಸಿಯ ಮಗನು ಶರೀರಕ್ಕನುಸಾರವಾಗಿ ಹುಟ್ಟಿದವನು, 4:23 ವ. 28, ಆದಿ 17:16-19, 18:10,14, ಇಬ್ರಿ. 11:11ಸ್ವತಂತ್ರಳಾದವಳ ಮಗನಾದರೋ ವಾಗ್ದಾನದ ಮೂಲಕ ಹುಟ್ಟಿದವನು. 24 ಈ ಸಂಗತಿಗಳು ಹೋಲಿಕೆಗಳಾಗಿವೆ. ಹೇಗೆಂದರೆ ಆ ಇಬ್ಬರು ಸ್ತ್ರೀಯರು ಎರಡು ಒಡಂಬಡಿಕೆಗಳೇ, 4:24 ಧರ್ಮೋ 33:2ಒಂದು ಒಡಂಬಡಿಕೆಯು ಸೀನಾಯಿ ಪರ್ವತದಿಂದ ಉಂಟಾಗಿ ದಾಸತ್ವದಲ್ಲಿರಬೇಕಾದ ಮಕ್ಕಳನ್ನು ಹೆರುವಂಥದು, ಅದೇ ಹಾಗರಳು. 25 ಹಾಗರಳು ಅಂದರೆ ಅರಬಸ್ಥಾನದಲ್ಲಿರುವ ಸೀನಾಯಿ ಪರ್ವತವನ್ನು ಸೂಚಿಸುವಂತಹದ್ದು ಈಗಿನ ಯೆರೂಸಲೇಮಿಗೆ ಎಂಬುವಳಿಗೆ ಹೋಲಿಕೆಯಾಗಿದ್ದಾಳೆ, ಏಕೆಂದರೆ ಆಕೆಯು ತನ್ನ ಮಕ್ಕಳೊಂದಿಗೆ ಈಗ ದಾಸತ್ವದಲ್ಲಿದ್ದಾಳೆ. 26 ಆದರೆ 4:26 ಇಬ್ರಿ. 12:22, ಪ್ರಕ 3:12, 21:2,10ಮೇಲಣ ಯೆರೂಸಲೇಮ್ ಎಂಬವಳು ಸ್ವತಂತ್ರಳು, ಇವಳೇ ನಮಗೆ ತಾಯಿ.

  2. OKCV Kannada Contemporary Version

    21 ಮೋಶೆಯ ನಿಯಮದ ಕೆಳಗಿರಲು ಬಯಸುವವರೇ, ನಿಯಮವು ಏನು ಹೇಳುತ್ತದೆಯೆಂದು ನೀವು ಸ್ಪಷ್ಟವಾಗಿ ಅರ್ಥಮಾಡಿಕೊಂಡಿದ್ದೀರಾ? ನನಗೆ ಹೇಳಿರಿ. 22 ಏಕೆಂದರೆ ದಾಸಿಯಿಂದ ಒಬ್ಬನು, ಧರ್ಮಪತ್ನಿಯಿಂದ ಒಬ್ಬನು ಹೀಗೆ ಅಬ್ರಹಾಮನಿಗೆ ಇಬ್ಬರು ಪುತ್ರರಿದ್ದರೆಂದು ಪವಿತ್ರ ವೇದದಲ್ಲಿ ಬರೆದಿದೆ. 23 ದಾಸಿಯ ಮಗನು ಶಾರೀರಿಕವಾಗಿ ಹುಟ್ಟಿದವನು. ಆದರೆ ಧರ್ಮಪತ್ನಿಯ ಮಗನಾದರೋ ದೇವರ ವಾಗ್ದಾನದ ಮೂಲಕ ಹುಟ್ಟಿದನು.

    24 ಈ ಸಂಗತಿಗಳು ಉಪಮಾನವಾಗಿವೆ. ಹೇಗೆಂದರೆ, ಇವರು ಎರಡು ಒಡಂಬಡಿಕೆಗಳೇ. ಒಂದು ಒಡಂಬಡಿಕೆ ಸೀನಾಯಿ ಪರ್ವತದಿಂದ ಉಂಟಾಗಿ ದಾಸತ್ವದಲ್ಲಿರಬೇಕಾದ ಮಕ್ಕಳನ್ನು ಹೆರುವಂಥದು. ಅದೇ ಹಾಗರ್. 25 ಹಾಗರ್ ಅರೇಬಿಯಾದಲ್ಲಿರುವ ಸೀನಾಯಿ ಪರ್ವತ. ಅದು ಈಗಿನ ಯೆರೂಸಲೇಮಿಗೆ ಸರಿಹೊಂದುತ್ತಾಳೆ. ಏಕೆಂದರೆ ಆಕೆಯು ಈಗಲೂ ತನ್ನ ಮಕ್ಕಳ ಸಹಿತ ದಾಸ್ಯದಲ್ಲಿದ್ದಾಳೆ. 26 ಆದರೆ ಸ್ವರ್ಗೀಯ ಯೆರೂಸಲೇಮ್ ಸ್ವತಂತ್ರಳು. ಈಕೆಯೇ ನಮ್ಮ ತಾಯಿ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.